ETV Bharat / sports

ದುಬೈನಲ್ಲಿ ಆರ್​ಸಿಬಿ ಫ್ಯಾಮಿಲಿ ಸೇರಿಕೊಂಡ 'ಮಿ.360': ಏನ್​ ಹೇಳಿದ್ರು ನೀವೂ ಕೇಳಿ.. - ರಾಯಲ್ ಚಾಲೆಂಜರ್ಸ್​ ಬೆಂಗಳೂರು

2020 ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಭಾಗಿಯಾಗಲು ಎಬಿ ಡಿವಿಲಿಯರ್ಸ್​, ಕ್ರಿಸ್​ ಮೊರಿಸ್​ ಹಾಗೂ ಡೇಲ್​ ಸ್ಟೇನ್​ ಇದೀಗ ದುಬೈಗೆ ಆಗಮಿಸಿದ್ದಾರೆ.

AB de Villiers
AB de Villiers
author img

By

Published : Aug 22, 2020, 3:10 PM IST

ದುಬೈ: 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಭಾಗಿಯಾಗಲು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​​ ದುಬೈಗೆ ಆಗಮಿಸಿದ್ದಾರೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಿಕೊಂಡಿರುವ ಅವರು ಬಂದಿಳಿಯುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದರು.

ವಿರಾಟ್​ ಕೊಹ್ಲಿ, ಪಾರ್ಥೀವ್​ ಪಟೇಲ್​, ಯಜುವೇಂದ್ರ ಚಹಾಲ್​ ಸೇರಿದಂತೆ ಅನೇಕ ಕ್ರಿಕೆಟರ್ಸ್​ ನಿನ್ನೆ ಭಾರತದಿಂದ ದುಬೈಗೆ ಪ್ರಯಾಣ ಬೆಳೆಸಿದ್ದರು. ಇದರ ಮಧ್ಯೆ ವಿದೇಶಿ ಆಟಗಾರರಾದ ಎಬಿಡಿ​​, ಡೇಲ್​ ಸ್ಟೇನ್​ ಹಾಗೂ ಕ್ರಿಸ್ ಮೊರಿಸ್​ ಇದೀಗ ದುಬೈನಲ್ಲಿ ಆರ್​​ಸಿಬಿ ತಂಡ ಸೇರಿಕೊಂಡಿದ್ದಾರೆ.

ಈ ವೇಳೆ ಮಾತನಾಡಿರುವ 'ಮಿ.360' ಖ್ಯಾತಿಯ ಎಬಿಡಿ, ಈ ಹಿಂದಿನ ಪ್ರವಾಸಗಳಿಗಿಂತಲೂ ಈ ಸಲದ ಪ್ರಯಾಣ ವಿಭಿನ್ನವಾಗಿದೆ. ಆರ್​ಸಿಬಿ ತಂಡ ಸೇರಿಕೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ. ಇದರ ಜತೆಗೆ ತಮ್ಮ ಕೋವಿಡ್​ ಟೆಸ್ಟ್​​ಗೋಸ್ಕರ ಕಾಯುತ್ತಿರುವುದಾಗಿಯೂ ಹೇಳಿದ್ದಾರೆ.

ಎಬಿಡಿ, 2011ರಿಂದಲೂ ಆರ್​ಸಿಬಿ ತಂಡದಲ್ಲಿ ಆಡುತ್ತಿದ್ದಾರೆ. ಈ ಸಲ ಆರ್​ಸಿಬಿ ತಂಡಕ್ಕೆ ಕ್ರಿಸ್ ಮೊರಿಸ್​ ಸೇರಿಕೊಂಡಿದ್ದು, ಇವರನ್ನು 10 ಕೋಟಿ ರೂ ನೀಡಿ ಖರೀದಿಸಲಾಗಿದೆ.

ಸೆಪ್ಟೆಂಬರ್​ 19ರಿಂದ ಪಂದ್ಯಾಟಗಳು ಆರಂಭಗೊಳ್ಳಲಿವೆ. ಒಟ್ಟು 53 ದಿನಗಳ ಕಾಲ ನಡೆಯುವ ಹೊಡಿಬಡಿ ಆಟದ ಫೈನಲ್​ ಪಂದ್ಯ ನವೆಂಬರ್​ 10ರಂದು ನಿಗದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.