ದುಬೈ : ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ ಆರ್ಸಿಬಿ ತಂಡ ಪರ ಆಡಿ 200 ಸಿಕ್ಸರ್ ಸಿಡಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಸೋಮವಾರ ಸಂದೀಪ್ ಶರ್ಮಾ ಅವರ ಬೌಲಿಂಗ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ಎಬಿಡಿ ಆರ್ಸಿಬಿ ಪರ 200 ಸಿಕ್ಸರ್ ಸಿಡಿಸಿದ ಮೈಲುಗಲ್ಲನ್ನು ತಲುಪಿದ್ದಾರೆ. ಇವರ ಒಟ್ಟಾರೆ ಐಪಿಎಲ್ ಸಿಕ್ಸ್ಗಳ ಮೊತ್ತ 214 ಕ್ಕೇರಿದೆ. ಡೆಲ್ಲಿ ತಂಡದ ಪರ 14 ಸಿಕ್ಸರ್ ಸಿಡಿಸಿದ್ದರು.
-
Here it is!
— IndianPremierLeague (@IPL) September 21, 2020 " class="align-text-top noRightClick twitterSection" data="
200 SIXES in IPL for Mr 360 @ABdeVilliers17 #Dream11IPL #SRHvRCB pic.twitter.com/b4AZIP2NdE
">Here it is!
— IndianPremierLeague (@IPL) September 21, 2020
200 SIXES in IPL for Mr 360 @ABdeVilliers17 #Dream11IPL #SRHvRCB pic.twitter.com/b4AZIP2NdEHere it is!
— IndianPremierLeague (@IPL) September 21, 2020
200 SIXES in IPL for Mr 360 @ABdeVilliers17 #Dream11IPL #SRHvRCB pic.twitter.com/b4AZIP2NdE
ಇಂದಿನ ಪಂದ್ಯದಲ್ಲಿ 31 ಎಸೆತಗಳಲ್ಲಿ 51 ರನ್ಗಳಿಸುವ ಮೂಲಕ ಐಪಿಎಲ್ನಲ್ಲಿ 34ನೇ ಅರ್ಧಶತಕ ದಾಖಲಿಸಿದರು. ಎಬಿಡಿ ಮತ್ತು ದೇವದತ್ ಪಡಿಕ್ಕಲ್ ಅವರ ಅರ್ಧಶತಕದ ಬಲದಿಂದ ಆರ್ಸಿಬಿ 5 ವಿಕೆಟ್ ಕಳೆದುಕೊಂಡು 163 ರನ್ಗಳಿಸಿತು.
ಇನ್ನು, ವಿಲಿಯರ್ಸ್ ಐಪಿಎಲ್ನಲ್ಲಿ 155 ಪಂದ್ಯಗಳಿಂದ 4446 ರನ್ ಗಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಬಿಟ್ಟರೆ 40+ ಸರಾಸರಿಯಲ್ಲಿ 150+ ಸ್ಟ್ರೈಕ್ರೇಟ್ ಹೊಂದಿರುವ 2ನೇ ಬ್ಯಾಟ್ಸ್ಮನ್ ಎಂದ ಗೌರವಕ್ಕೂ ಪಾತ್ರರಾಗಿದ್ದಾರೆ.