ದುಬೈ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್, ಡೇಲ್ ಸ್ಟೈನ್ ಹಾಗೂ ಕ್ರಿಸ್ ಮೋರಿಸ್ ದುಬೈಗೆ ಬಂದು ಸೇರಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆನೆಬಲ ಬಂದಂತಾಗಿದೆ.
ಶುಕ್ರವಾರ ಆರ್ಸಿಬಿ ತಂಡ ದುಬೈಗೆ ತೆರಳಿತ್ತು. ಇದೀಗ ಅಭಿಮಾನಿಗಳು ಎದುರು ನೋಡುತ್ತಿದ್ದ ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ಸಹಿತ ವೇಗಿ ಸ್ಟೈನ್ ಹಾಗೂ ಆಲ್ರೌಂಡರ್ ಕ್ರಿಸ್ ಮೋರಿಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ಮಾತ್ರ ತಂಡಕ್ಕೆ ಸೇರಬೇಕಾಗಿದೆ. ಆ್ಯರೋನ್ ಫಿಂಚ್, ಜೋಶ್ ಫಿಲಿಪ್ಪೆ ಹಾಗೂ ಮೊಯಿನ್ ಅಲಿ ಇಂಗ್ಲೆಂಡ್ನಲ್ಲಿ ಸೀಮಿತ ಓವರ್ಗಳ ಸರಣಿಯ ನಂತರ ದುಬೈಗೆ ಬರಲಿದ್ದಾರೆ.
ನಾನು ತುಂಬಾ ಉತ್ಸುಕನಾಗಿದ್ದೇನೆ ಹಾಗೂ ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇಂದಿನ ಪ್ರಯಾಣ ಸಾಮಾನ್ಯಕ್ಕಿಂತ ಭಿನ್ನವಾಗಿತ್ತು. ಆದರೆ ನನ್ನ ದಕ್ಷಿಣ ಆಫ್ರಿಕಾದ ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದು ಹಾಗೂ ಆರ್ಸಿಬಿ ತಂಡಕ್ಕೆ ಸೇರಿಕೊಳ್ಳುವುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಎಬಿಡಿ ಹೇಳಿಕೊಂಡಿದ್ದಾರೆ.
-
And here it is RCB fans, the moment you’ve all been waiting for! 🤩@ABdeVilliers17, @DaleSteyn62 and @Tipo_Morris have joined the team in Dubai! 😎#PlayBold #TravelDay #IPL2020 pic.twitter.com/l0n09ZV5Jb
— Royal Challengers Bangalore (@RCBTweets) August 22, 2020 " class="align-text-top noRightClick twitterSection" data="
">And here it is RCB fans, the moment you’ve all been waiting for! 🤩@ABdeVilliers17, @DaleSteyn62 and @Tipo_Morris have joined the team in Dubai! 😎#PlayBold #TravelDay #IPL2020 pic.twitter.com/l0n09ZV5Jb
— Royal Challengers Bangalore (@RCBTweets) August 22, 2020And here it is RCB fans, the moment you’ve all been waiting for! 🤩@ABdeVilliers17, @DaleSteyn62 and @Tipo_Morris have joined the team in Dubai! 😎#PlayBold #TravelDay #IPL2020 pic.twitter.com/l0n09ZV5Jb
— Royal Challengers Bangalore (@RCBTweets) August 22, 2020
ನನ್ನ ಕೋವಿಡ್-19 ವರದಿಗಾಗಿ ಎದುರು ನೋಡುತ್ತಿದ್ದೇನೆ. ನನ್ನ ಬ್ಯಾಗನ್ನು ತೆಗೆದಿಡಬೇಕಾಗಿದೆ. ಈ ವರ್ಷ ಇಲ್ಲಿರುವುದಕ್ಕೆ ಬೇಸರವಿದೆ. ಇನ್ನು ನಾನು ನಮ್ಮ ತಂಡದ ಹೊಸ ಆಟಗಾರರನ್ನು ಭೇಟಿ ಮಾಡುವುದಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ದೀರ್ಘ ಸಮಯದ ನಂತರ ಕ್ರಿಕೆಟ್ ಆಡಲಿದ್ದೇವೆ. ಉತ್ಸಾಹದ ಜೊತೆಗೆ ಸ್ವಲ್ಪ ಭಯವೂ ಇದೆ ಎಂದು ಈ ವರ್ಷ ಆರ್ಸಿಬಿ ಸೇರಿಕೊಂಡಿರುವ ಕ್ರಿಸ್ ಮೋರಿಸ್ ಹೇಳಿದ್ದಾರೆ.
ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿ 6 ದಿನಗಳ ಕಾಲ ಕ್ವಾರಂಟೈನ್ನಲ್ಲಿರಲಿದ್ದಾರೆ. ಈ ವೇಳೆ 2 ಕೋವಿಡ್ ಟೆಸ್ಟ್ನಲ್ಲಿ ನೆಗೆಟಿವ್ ವರದಿ ಪಡೆಯಬೇಕಾಗಿದೆ. ನಂತರ ಬಯೋ ಸೆಕ್ಯೂರ್ ವಲಯಕ್ಕೆ ತೆರಳಿದ ನಂತರ ಪ್ರತೀ 5 ದಿನಗಳಿಗೊಮ್ಮೆ ಕೋವಿಡ್-19 ಟೆಸ್ಟ್ಗೆ ಒಳಗಾಗಲಿದ್ದಾರೆ. ಸೆಪ್ಟೆಂಬರ್ 19ರಿಂದ 13ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ.