ಶಾರ್ಜಾ: ಎಬಿ ಡಿ ವಿಲಿಯರ್ಸ್ ಹಾಗೂ ಆ್ಯರೋನ್ ಫಿಂಚ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 194 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಬ್ಯಾಟಿಂಗ್ ಸ್ವರ್ಗವೆನಿಸಿರುವ ಶಾರ್ಜಾ ಮೈದಾನದಲ್ಲಿ ಟಾಸ್ ಗೆದ್ದ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರಕ್ಕೆ ತಕ್ಕಂತ ಬ್ಯಾಟಿಂಗ್ ನಡೆಸಿದ ಆರಂಭಿಕರಾದ ಫಿಂಚ್(47) ಹಾಗೂ ಪಡಿಕ್ಕಲ್(32) ಮೊದಲ ವಿಕೆಟ್ಗೆ 67 ರನ್ ಸೇರಿಸಿದರು.
-
Innings Break!
— IndianPremierLeague (@IPL) October 12, 2020 " class="align-text-top noRightClick twitterSection" data="
AB de Villiers puts up a show here in Sharjah with a knock of 73* off 33.#RCB post a formidable total of 194/2 on the board. Will #KKR chase this down?#Dream11IPL pic.twitter.com/v5b3ZDizrM
">Innings Break!
— IndianPremierLeague (@IPL) October 12, 2020
AB de Villiers puts up a show here in Sharjah with a knock of 73* off 33.#RCB post a formidable total of 194/2 on the board. Will #KKR chase this down?#Dream11IPL pic.twitter.com/v5b3ZDizrMInnings Break!
— IndianPremierLeague (@IPL) October 12, 2020
AB de Villiers puts up a show here in Sharjah with a knock of 73* off 33.#RCB post a formidable total of 194/2 on the board. Will #KKR chase this down?#Dream11IPL pic.twitter.com/v5b3ZDizrM
ಪಡಿಕ್ಕಲ್ 23 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 32 ರನ್ಗಳಿಸಿ ರಸೆಲ್ಗೆ ವಿಕೆಟ್ ಒಪ್ಪಿಸಿದರು. ಫಿಂಚ್ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 47 ರನ್ಗಳಿಸಿ ಪ್ರಸಿದ್ ಕೃಷ್ಣಾ ಓವರ್ನಲ್ಲಿ ಬೌಲ್ಡ್ ಆದರು.
ಆದರೆ, 3ನೇ ವಿಕೆಟ್ಗೆ ಕೊಹ್ಲಿ ಜೊತೆ ಸೇರಿದ ಎಬಿಡಿ ವಿಲಿಯರ್ಸ್ ಕೆಕೆಆರ್ ಬೌಲರ್ಗಳನ್ನು ಬೆಂಡೆತ್ತಿದ್ದರು. ಈ ಜೋಡಿ 3ನೇ ವಿಕೆಟ್ ಮುರಿಯದ 100ರನ್ಗಳ ಜೊತೆಯಾಟ ನಡೆಸಿತು. 33 ಎಸೆತಗಳನ್ನೆದುರಿಸಿ ಮಿಸ್ಟರ್ 360 ಖ್ಯಾತಿಯ ಎಬಿಡಿ 6 ಸಿಕ್ಸರ್ಸ್ ಹಾಗೂ 5 ಬೌಂಡರಿಗಳ ಸಹಿತ ಔಟಾಗದೇ 73 ರನ್ಗಳಿಸಿದರೆ, ನಿಧಾನಗತಿ ಬ್ಯಾಟಿಂಗ್ ಪ್ರದರ್ಶನ ತೋರಿದ ಕೊಹ್ಲಿ 28 ಎಸೆತಗಳಲ್ಲಿ ಕೇವಲ 1 ಬೌಂಡರಿ ಸಹಿತ 33 ರನ್ಗಳಿಸಿ ಔಟಾಗದೆ ಉಳಿದರು.