ETV Bharat / sports

'A star has arrived' ಶುಬ್ಮನ್​ ಬ್ಯಾಟಿಂಗ್ ವೈಖರಿಗೆ ವಿವಿಎಸ್​​, ಕಾರ್ತಿಕ್ ಫಿದಾ!​

author img

By

Published : Jan 8, 2021, 4:34 PM IST

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿದ್ದು, ಎರಡು ವಿಕೆಟ್​ನಷ್ಟಕ್ಕೆ 96 ರನ್​ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್​ ಕಾಯ್ದುಕೊಂಡಿದೆ.

Shubman Gill
Shubman Gill

ಸಿಡ್ನಿ: ಆಸ್ಟ್ರೇಲಿಯಾದ ವಿರುದ್ಧ ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್​​-ಗವಾಸ್ಕರ್​ ಟ್ರೋಫಿ ಮೂರನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾದ ಯಂಗ್ ಪ್ಲೇಯರ್​ ಶುಬ್ಮನ್ ಗಿಲ್​ ಅರ್ಧಶತಕಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಉಪನಾಯಕ ರೋಹಿತ್​ ಶರ್ಮಾ ಜತೆ ಆರಂಭಿಕರಾಗಿ ಕಣಕ್ಕಿಳಿದ ಶುಬ್ಮನ್ ಗಿಲ್​ 101 ಎಸೆತಗಳಲ್ಲಿ 50 ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದು, ಇದರಲ್ಲಿ 8 ಬೌಂಡರಿಗಳು ಸೇರಿವೆ. 21 ವರ್ಷದ ಗಿಲ್​ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಮೂರನೇ ಇನ್ನಿಂಗ್ಸ್​ನಲ್ಲೇ ಅರ್ಧಶತಕ ಸಿಡಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

  • For someone playing only his 2nd test match @RealShubmanGill looks very assured at the wicket. Good solid defence, positive stroke play and clarity of thought. Definitely has a very bright future for India in all the 3 formats. #AUSvsIND

    — VVS Laxman (@VVSLaxman281) January 8, 2021 " class="align-text-top noRightClick twitterSection" data=" ">

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಟೀಂ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟ್ಸಮನ್​ ದಿನೇಶ್​ ಕಾರ್ತಿಕ್​, 'A star has arrived' ಗಿಲ್​​ ಅದ್ಭುತವಾಗಿ ಆರಂಭಿಸಿದ್ದಾನೆ. ಮೈದಾನದಲ್ಲಿದ್ದ ವೇಳೆ ಚೆನ್ನಾಗಿ ಬ್ಯಾಟ್​ ಬೀಸಿದ್ದೀರಿ. ಔಟ್​ ಆಗಿದ್ದಕ್ಕೆ ನಿರಾಸೆ ಬೇಡ ಎಂದು ಹೇಳಿದ್ದಾರೆ.

ಕೇವಲ 2ನೇ ಟೆಸ್ಟ್​ ಮ್ಯಾಚ್​ನಲ್ಲೇ ಶುಬ್ಮನ್​ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಂ ಇಂಡಿಯಾದಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ. ಪಾದಾರ್ಪಣೆ ಟೆಸ್ಟ್​ ಪಂದ್ಯದಲ್ಲಿ ಗಿಲ್​ 45 ಹಾಗೂ ಅಜೇಯ 35 ರನ್​ಗಳಿಕೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.