ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮೂರು ಮಾದರಿಯಿಂದ ಹಲವಾರು ಸ್ಫೋಟಕ ಬ್ಯಾಟ್ಸ್ಮನ್ಗಳು ಬಂದು ಹೋಗಿದ್ದರೂ ಇಲ್ಲಿಯವರಗೆ ಯಾರ ಕೈಯಲ್ಲಾಗದ ದಾಖಲೆಯೊಂದನ್ನು ರೋಹಿತ್ ಶರ್ಮಾ ಮಾಡಿ ತೋರಿಸಿದ್ದಾರೆ.
ಟೆಸ್ಟ್ ,ಟಿ20 ಅಥವಾ ಏಕದಿನ ಕ್ರಿಕೆಟ್ ಯಾವುದೇ ಆಗಿರಲಿ ಬೌಲರ್ಗಳ ಮುಖ ನೋಡದೆ ಸಿಕ್ಸರ್ಗಳನ್ನು ಬಾರಿಸುವ ರೋಹಿತ್ ಸತತ ಎರಡು ವರ್ಷಗಳಲ್ಲಿ 70ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ ಸತತ ಮೂರು ವರ್ಷ ಅಂತತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ಆಶ್ಚರ್ಯಕರ ವಿಚಾರವೆಂದರೆ ಸತತ 2 ವರ್ಷ ರೋಹಿತ್ 70 ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ. ವಿಶ್ವದ ಯಾವೊಬ್ಬ ಬ್ಯಾಟ್ಸ್ಮನ್ 70ರ ಸನಿಹವೂ ಬಂದಿಲ್ಲ ಎಂಬುದೇ ಆಶ್ಚರ್ಯಕರ ಸಂಗತಿ. ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್(63) ಮಾತ್ರ 60 ಗಡಿ ದಾಟಿರುವ ಬ್ಯಾಟ್ಸ್ಮನ್.
ಕ್ರಿಕೆಟ್ನಲ್ಲಿ ಕ್ರಿಸ್ ಗೇಲ್, ಅಫ್ರಿದಿ, ಎಂ.ಎಸ್.ಧೋನಿ, ವಿಲಿಯರ್ಸ್, ಯುವರಾಜ್ ಸಿಂಗ್ ಅಂತಹ ಸ್ಫೋಟಕ ಬ್ಯಾಟ್ಸ್ಮನ್ಗಳನ್ನು ಕಂಡಿದೆ. ಆದರೆ ವಿಲಿಯರ್ಸ್ ಬಿಟ್ಟರೆ ಯಾರೊಬ್ಬರು 60ರ ಗಡಿ ದಾಟಿಲ್ಲ, ವಿಲಿಯರ್ಸ್ ಮಾತ್ರ 2016ರಲ್ಲಿ 63 ಸಿಕ್ಸರ್ ಬಾರಿಸಿದ್ದರು.
ರೋಹಿತ್ ಶರ್ಮಾ 2017ರಲ್ಲಿ 66, 2018ರಲ್ಲಿ 74 ಹಾಗೂ 2019ರಲ್ಲಿ 77 ಸಿಕ್ಸರ್ ಸಿಡಿಸಿ ಮೂರು ವರ್ಷಗಳಲ್ಲೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಕಾಯ್ದುಕೊಂಡಿದ್ದಾರೆ. ಅದರಲ್ಲೂ ಸತತ ಎರಡನೇ ಬಾರಿ 70ರ ಗಡಿ ದಾಟಿದ ವಿಶ್ವದ ಏಕೈಕ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೂ ರೋಹಿತ್ ಪಾತ್ರರಾಗಿದ್ದಾರೆ. ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು ರೋಹಿತ್ ಸಿಕ್ಸರ್ಗಳ ಸಂಖ್ಯೆ 80 ರ ಗಡಿದಾಟು ಸಾಧ್ಯತೆ ಇದೆ.