ಕಿಂಗಿಲಿ(ರವಾಂಡ): ಕ್ರಿಕೆಟ್ ಎನ್ನುವುದು ಅಚ್ಚರಿಗಳ ಆಗರ. ಪಂದ್ಯದಿಂದ ಪಂದ್ಯಕ್ಕೆ ಹೊಸ ಹೊಸತು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಇಂಥದ್ದೇ ಒಂದು ದಾಖಲೆ ಹಾಗೂ ಅಪರೂಪದ ಪಂದ್ಯಕ್ಕೆ ರವಾಂಡದ ರಾಜಧಾನಿ ಕಿಂಗಲಿ ನಗರ ಸಾಕ್ಷಿಯಾಗಿದೆ.
ಮಾಲಿ ವನಿತೆಯರು ಕೇವಲ ಆರು ರನ್ನಿಗೆ ಸರ್ವಪತನವಾಗುವ ಮೂಲಕ ಮಹಿಳಾ ಟಿ-20ಯಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮೊತ್ತದ ಕೆಟ್ಟ ಹಣೆಪಟ್ಟಿಗೆ ಪಾತ್ರರಾಗಿದ್ದಾರೆ. ಕ್ವಿಬಾಕ ಮಹಿಳಾ ಟಿ20 ಟೂರ್ನಿಯಲ್ಲಿ ಈ ಕಳಪೆ ದಾಖಲೆ ನಿರ್ಮಾಣವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮಾಲಿ ವನಿತೆಯರು ಒಂಭತ್ತು ಓವರ್ ಆಟವಾಡಿ ಕೇವಲ ಆರು ರನ್ನಿಗೆ ಸರ್ವಪತನ ಕಂಡಿದ್ದಾರೆ. ವಿಶೇಷವೆಂದರೆ ಹತ್ತರಲ್ಲಿ ಒಂಭತ್ತು ರನ್ಗಳ ಪೈಕಿ ಮಾಲಿ ಆಟಗಾರ್ತಿಯರು ಬಾರಿಸಿದ್ದು ಕೇವಲ ಒಂದು ರನ್. ಉಳಿದ ಐದು ರನ್ ಇತರೇ ರೂಪದಲ್ಲಿ ಬಂದಿವೆ.
ಮಾಲಿ ನೀಡಿದ ಏಳು ರನ್ಗಳ ಗುರಿಯನ್ನು ಆತಿಥೇಯರು ಕೇವಲ ನಾಲ್ಕೇ ಎಸೆತದಲ್ಲಿ ಮುಗಿಸಿದ್ದಾರೆ. ಈ ಮೂಲಕ ರವಾಂಡ ಮಹಿಳೆಯರು ಸುಲಭ ಜಯ ಸಾಧಿಸಿದರು.
ಹಿಂದಿನ ಕನಿಷ್ಠ ದಾಖಲೆ:
ಇದೇ ವರ್ಷಾರಂಭದಲ್ಲಿ ಬ್ಯಾಂಕಾಕ್ನಲ್ಲಿ ಯುಎಇ ವಿರುದ್ಧ ಚೀನಾ ಬಾರಿಸಿದ್ದ 14 ರನ್ ಮಹಿಳಾ ಟಿ20ಯಲ್ಲಿ ಈ ಹಿಂದಿನ ಕನಿಷ್ಠ ಮೊತ್ತವಾಗಿತ್ತು.