ಲಂಡನ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರನ್ ಬರ ಹಾಗೂ ವಿಕೆಟ್ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದ ಕೆಲ ಪ್ಲೇಯರ್ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಮಿಂಚು ಹರಿಸುತ್ತಿದ್ದಾರೆ.
ರೋಹಿತ್ ಶರ್ಮಾ
ಟೀಂ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರನ್ ಬರ ಎದುರಿಸಿದ್ದರು. 15 ಪಂದ್ಯಗಳಿಂದ ಕೇವಲ 405ರನ್ಗಳಿಕೆ ಮಾಡಿದ್ದು, ಎರಡು ಅರ್ಧಶತಕ ಸಿಡಿಸಿದ್ದರು.
ಇದೀಗ ವಿಶ್ವಕಪ್ನಲ್ಲಿ ಮಿಂಚುತ್ತಿರುವ ರೋಹಿತ್ ಶರ್ಮಾ, ಏಳು ಪಂದ್ಯಗಳಿಂದ 440ರನ್ಗಳಿಕೆ ಮಾಡಿದ್ದು, ಇದರಲ್ಲಿ ಮೂರು ಶತಕ ಸೇರಿಕೊಂಡಿವೆ. ಜತೆಗೆ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳಿಸಿರುವವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
ಬೆನ್ ಸ್ಟೋಕ್ಸ್
ರಾಜಸ್ಥಾನ ರಾಯಲ್ಸ್ ತಂಡದ ಪರ ಐಪಿಎಲ್ನಲ್ಲಿ ಆಡಿರುವ ಬೆನ್ ಸ್ಟೋಕ್ಸ್ ಕೇವಲ 123ರನ್ಗಳಿಕೆ ಮಾಡಿದ್ದು, 6ವಿಕೆಟ್ ಪಡೆದುಕೊಂಡಿದ್ದರು. ಸದ್ಯ ನಡೆಯುತ್ತಿರುವ ವಿಶ್ವಕಪ್ನಲ್ಲಿ ಈಗಾಗಲೇ 370 ರನ್ಗಳಿಕೆ ಮಾಡಿರುವ ಆಲ್ರೌಂಡರ್ 6ವಿಕೆಟ್ ಸಹ ಪಡೆದುಕೊಂಡಿದ್ದಾರೆ.
ಶಕೀಬ್ ಅಲ್ ಹಸನ್
ಐಪಿಎಲ್ನಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದ ಶಕೀಬ್ ಅಲ್ ಹಸನ್, ಇದೀಗ ವಿಶ್ವಕಪ್ನಲ್ಲಿ ಬ್ಯಾಟಿಂಗ್ನಲ್ಲಿ ರನ್ ಮಳೆ ಹರಿಸುತ್ತಿದ್ದು, ಬೌಲಿಂಗ್ನಲ್ಲೂ ಜಾದೂ ಮಾಡ್ತಿದ್ದಾರೆ. 476ರನ್ಗಳಿಸಿರುವ ಶಕೀಬ್ 10ವಿಕೆಟ್ ಪಡೆದುಕೊಂಡಿದ್ದಾರೆ. ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಮುಜಿಬ್ ಉರ್ ರೆಹಮ್ಮಾನ್
ಅಫ್ಘಾನಿಸ್ತಾನದ ಸ್ಪಿನ್ನರ್ ರೆಹಮಾನ್ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ 11 ಪಂದ್ಯಗಳಿಂದ 14 ವಿಕೆಟ್ ಕಿತ್ತಿದ್ದರು. ಇದೀಗ ಆಡಿರುವ 6ಪಂದ್ಯಗಳಿಂದ 7ವಿಕೆಟ್ ಕಿತ್ತಿದ್ದಾರೆ. ಜತೆಗೆ ಅಫ್ಘಾನಿಸ್ತಾನ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ 3ನೇ ಸ್ಥಾನದಲ್ಲಿದ್ದಾರೆ.