ETV Bharat / sports

2ನೇ ಏಕದಿನ ಪಂದ್ಯ: 3ನೇ ಕ್ರಮಾಂಕದಲ್ಲಿ ಕೊಹ್ಲಿ ಕಣಕ್ಕೆ, ಕನ್ನಡಿಗ ಪಾಂಡೆಗೆ ಅವಕಾಶ? - ಸರಣಿ ಉಳಿಸಿಕೊಳ್ಳಲು ಟೀಂ ಇಂಡಿಯಾ ಸಿದ್ದ

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್​ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 2ನೇ ಏಕದಿನ ಪಂದ್ಯ ನಡೆಯಲಿದೆ. ಸರಣಿ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯ ಗೆಲ್ಲುವುದು ಭಾರತಕ್ಕೆ ಅನಿವಾರ್ಯ.

2nd ODI India vs Australia at Saurashtra Cricket Association
ನೆಟ್​​ನಲ್ಲಿ ಅಭ್ಯಾಸ ಮಾಡಿದ ನಾಯಕ ವಿರಾಟ್​ ಕೊಹ್ಲಿ
author img

By

Published : Jan 17, 2020, 4:57 AM IST

Updated : Jan 17, 2020, 6:48 AM IST

ರಾಜ್​ಕೋಟ್ (ಗುಜರಾತ್​): ಸರಣಿ ಜೀವಂತವಾಗಿರಿಸಿಕೊಳ್ಳಲು ಇಲ್ಲಿನ ಸೌರಾಷ್ಟ್ರ ಕ್ರಿಕೆಟ್​ ಸಂಸ್ಥೆಯ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಕೆಲ ಎಡವಟ್ಟುಗಳಿಂದ ಭಾರತ ತಂಡ ಹೀನಾಯ ಸೋಲು ಕಂಡಿತು. ಈಗ ಆ ತಪ್ಪುಗಳನ್ನು ಸರಿಪಡಿಸಿಕೊಂಡು ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಮಣಿಸಲು ಕೆಲವೊಂದು ಬದಲಾವಣೆಗಳೊಂದಿಗೆ ತಂಡ ಕಣಕ್ಕಿಳಿಯುವ ಸಾಧ್ಯತೆ ಇದೆ.

3ನೇ ಕ್ರಮಾಂಕಕ್ಕೆ ಮರಳಿದ ಕೊಹ್ಲಿ?

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಮರಳುವುದು ಖಾತ್ರಿಯಾಗಿದೆ. ಕಳೆದ ಪಂದ್ಯದಲ್ಲಿ ರಣತಂತ್ರ ರೂಪಿಸಿ 3ನೇ ಕ್ರಮಾಂಕವನ್ನು ಕನ್ನಡಿಗ ಕೆ.ಎಲ್.ರಾಹುಲ್​​ಗೆ ಬಿಟ್ಟುಕೊಟ್ಟು, ಕಿಂಗ್​ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿ ವಿಫಲರಾದರು. ಈ ಲೆಕ್ಕಾಚಾರ ತಲೆಕೆಳಗಾದ ಪರಿಣಾಮ ಮತ್ತೆ ಆ ತಪ್ಪುನ್ನು ಮರುಕಳಿಸಬಾರದೆಂದು ಎಚ್ಚರ ವಹಿಸಿ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ. ಇದೀಗ ಕೊಹ್ಲಿ ತಮ್ಮ ನೆಚ್ಚಿನ 3ನೇ ಕ್ರಮಾಂಕದಲ್ಲೇ ಆಡುವುದು ಬಹುತೇಕ ಖಾತ್ರಿಯಾಗಿದೆ ಎಂಬುದು ತಿಳಿದು ಬಂದಿದೆ.

ಕನ್ನಡಿಗ ಮನೀಷ್​ಗೆ ಸ್ಥಾನ?

ಮೊದಲ ಪಂದ್ಯದಲ್ಲಿ ಹೆಲ್ಮೆಟ್​ಗೆ ಚೆಂಡು ಬಡಿದು ಪೆಟ್ಟು ತಿಂದ ಪರಿಣಾಮ ವಿಕೆಟ್​ ಕೀಪರ್​ ರಿಷಭ್​​ ಪಂತ್​ಗೆ ವಿಶ್ರಾಂತಿ ನೀಡಲಾಗಿದೆ. ಈಗ ವಿಕೆಟ್​ ಕೀಪಿಂಗ್​ ಹೊಣೆ ಕೆ.ಎಲ್​.ರಾಹುಲ್​ ಮೇಲಿದೆ. ಪಂತ್​ರಿಂದ ತೆರವಾದ ಸ್ಥಾನಕ್ಕೆ ಕನ್ನಡಿಗ ಮನೀಷ್​ ಪಾಂಡೆಗೆ ಅವಕಾಶ ನೀಡುವ ಸಾಧ್ಯತೆ ಇದೆ. ಶ್ರೀಲಂಕಾದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಪಾಂಡೆ ಮಿಂಚಿದ್ದರು.

ಅಷ್ಟೇ ಅಲ್ಲದೆ, ಮೂರು ದಿನಗಳ ಹಿಂದೆ ನಡೆದ ಪಂದ್ಯದಲ್ಲಿ ರಿಷಭ್​​​​ ಬದಲಿಗೆ ಫೀಲ್ಡಿಂಗ್​ಗೆ​ ಬಂದಿದ್ದ ಪಾಂಡೆ ಉತ್ತಮವಾಗಿ ಕ್ಷೇತ್ರ ರಕ್ಷಣೆ ಮಾಡಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ. ಒಂದು ವೇಳೆ ಕೇದಾರ್​ ಜಾದವ್​, ಆಲ್​ರೌಂಡರ್​ ಶಿವಂ ದುಬೆಗೆ ಅವಕಾಶ ನೀಡಿದರೆ ಪಾಂಡೆ ಮತ್ತೆ ಬೆಂಚ್​ ಕಾಯುವುದು ಅನಿವಾರ್ಯ.

ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಬೌಲರ್​​ಗಳ ಬಿಗಿ ಬೌಲಿಂಗ್​ ದಾಳಿಗೆ ಭಾರತ 255 ರನ್​​ಗಳಷ್ಟೇ ಗಳಿಸಲು ಶಕ್ತವಾಗಿತ್ತು. ಗುರಿ ಬೆನ್ನತ್ತಿದ ಆರಂಭಿಕರಾದ ಡೇವಿಡ್​ ವಾರ್ನರ್​ ಮತ್ತು ನಾಯಕ ಆ್ಯರೋನ್​ ಫಿಂಚ್​ ಅವರ ಅಜೇಯ ಶತಕಗಳ ನೆರವಿನಿಂದ ವಿಕೆಟ್​ ನಷ್ಟವಿಲ್ಲದೆ ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಅಲ್ಲದೆ, 10 ವಿಕೆಟ್​​ಗಳ ಜಯ ಸಾಧಿಸುವ ಮೂಲಕ ಐತಿಹಾಸಿಕ ದಾಖಲೆಯೂ ಬರೆಯಿತು.

ಆಸ್ಟ್ರೇಲಿಯಾ ತಂಡದ ಆಟಗಾರರನ್ನು ಕಟ್ಟಿಹಾಕಲು ಭಾರತದ ಬೌಲರ್​ಗಳು ಸಿದ್ಧಗೊಂಡಿದ್ದಾರೆ. ಒಟ್ಟಾರೆ ಸರಣಿ ಜೀವಂತವಾಗಿಟ್ಟುಕೊಳ್ಳಲು ಟೀಂ ಇಂಡಿಯಾ ಆಟಗಾರರು ಶತಪ್ರಯತ್ನ ನಡೆಸಿದ್ದಾರೆ. ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ರೋಹಿತ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಪುಟಿದೇಳುವ ಸಾಧ್ಯತೆ ಇದೆ. ಬೌಲಿಂಗ್​ ವಿಭಾಗದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಪಂದ್ಯದ ಸಮಯ: 1.30

Intro:Body:

cricket

Conclusion:
Last Updated : Jan 17, 2020, 6:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.