ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 2021ರ ಆವೃತ್ತಿ ಬರೋಬ್ಬರಿ 120 ರಾಷ್ಟ್ರಗಳಲ್ಲಿ ಪ್ರಸಾರವಾಗಲಿದೆ.
ಮುಂಚೂಣಿ ಕ್ರೀಡಾ ವೆಬ್ಸೈಟ್ ಪ್ರಕಾರ, ಈ ವರ್ಷದ ಐಪಿಎಲ್ ಆವೃತ್ತಿ ಸುಮಾರು 24ರಿಂದ 25 ಚಾನೆಲ್ಗಳಲ್ಲಿ ವಿವಿಧ ಭಾಷೆಗಳಲ್ಲಿ ಪ್ರಸಾರವಾಗಲಿದೆ. ಇದರ ಜೊತೆಗೆ ಡಿಸ್ನಿ ಹಾಟ್ಸ್ಟಾರ್ನಲ್ಲೂ ಪ್ರಸಾರವಾಗಲಿದೆ. ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ ಪಂದ್ಯಗಳನ್ನು ವೀಕ್ಷಿಕರು ಎಂಜಾಯ್ ಮಾಡಬಹುದಾಗಿದೆ.
ಐಪಿಎಲ್ ಭಾರತದಲ್ಲಷ್ಟೇ ಅಲ್ಲದೆ, ಸುಮಾರು 120 ರಾಷ್ಟ್ರಗಳಲ್ಲಿನ ವಿವಿಧ ಚಾನೆಲ್ಗಳಲ್ಲಿ ಟೆಲಿಕಾಸ್ಟ್ ಆಗಲಿದೆ.
ಇಂಗ್ಲೆಂಡ್, ಐರ್ಲೆಂಡ್, ಯುಎಸ್ಎ, ಕೆನಡಾ, ದಕ್ಷಿಣ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ, ಈಸ್ಟ್ ಏಷ್ಯಾ, ದಕ್ಷಿಣ ಅಮೆರಿಕಾ, ಯುರೋಪ್ , ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸೇರಿದಂತೆ 120 ರಾಷ್ಟ್ರಗಳಲ್ಲಿ ವಿವಿಧ ಚಾನೆಲ್ಗಳಲ್ಲಿ ಪ್ರಸಾರವಾಗಲಿದೆ.
ಆದರೆ ಪಾಕಿಸ್ತಾನದಲ್ಲಿ ಮಾತ್ರ ಐಪಿಎಲ್ ನೇರಪ್ರಸಾರ ಇರುವುದಿಲ್ಲ ಎಂದು ತಿಳಿದುಬಂದಿದೆ. ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಪ್ರಸಾರದ ಒಪ್ಪಂದವನ್ನು ಹೊಂದಿದೆ.
ಇದನ್ನೂ ಓದಿ: ಈ ಕಾರಣದಿಂದ ಬಹುತೇಕ ಕ್ರಿಕೆಟಿಗರು ಧೋನಿ ನಾಯಕತ್ವದಲ್ಲಿ ಆಡಲು ಇಷ್ಟಪಡುತ್ತಾರೆ : ಮೊಯಿನ್ ಅಲಿ