ಬೆಂಗಳೂರು: ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ವಿಶ್ವದಾಖಲೆಯನ್ನು 2005ರವರೆಗೂ ಹೊಂದಿದ್ದ ಬ್ಯಾಟ್ಸ್ಮನ್ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಕ್ಯಾಚ್ ಹಿಡಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆ ಹೊಂದಿರುವ ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ಗೆ ಶನಿವಾರ 72ನೇ ಜನ್ಮದಿನದ ಸಂಭ್ರಮ. ಈ ವೇಳೆ ಕ್ರಿಕೆಟ್ ಜಗತ್ತಿನ ಹಾಲಿ&ಮಾಜಿ ಆಟಗಾರರು ಗವಾಸ್ಕರ್ಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಸತ್ಯಬಿಚ್ಚಿಟ್ಟ ಗವಾಸ್ಕರ್: ಇಂದು ನಾವು ಸುನಿಲ್ ಗವಾಸ್ಕರ್ ಅವರ ಜೀವನಕ್ಕೆ ಸಂಬಂಧಿಸಿದ ಅತ್ಯಂತ ಆಸಕ್ತಿದಾಯಕ ವಿಷಯ ಹೇಳಲಿದ್ದೇವೆ. ಅದರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಇದು ಒಂದು ಘಟನೆಯಾಗಿದ್ದು, ಇದರಿಂದಾಗಿ ಅವರ ಇಡೀ ಜೀವನವು ಕ್ಷಣಾರ್ಧದಲ್ಲಿ ಬದಲಾಗಬಹುದಿತ್ತು. ಒಂದು ವೇಳೆ ಆ ಘಟನೆ ಸಂಭವಿಸಿದ್ದೇ ಆಗಿದ್ರೆ ಅವರು ಇಂದು ಮೀನುಗಾರರಾಗುತ್ತಿದ್ದರು.
ಚಿಕ್ಕಪ್ಪನಿಂದ ನಾನು ಬಚಾವ್: ಸುನಿಲ್ ಗವಾಸ್ಕರ್ ಅವರು ತಮ್ಮ ಆತ್ಮಚರಿತ್ರೆಯಾದ 'ಸನ್ನಿ ಡೇಸ್' (Sunny Days) ನಲ್ಲಿ ಈ ಬಗ್ಗೆ ಬರೆದಿದ್ದಾರೆ. ನಾನೂ ಎಂದಿದೆಗೂ ಕ್ರಿಕೆಟರ್ ಆಗುತ್ತಿರಲಿಲ್ಲ. ಕಾರಣ ದಾದಿಯರ ಎಡವಟ್ಟಿನಿಂದ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಆಗಿದ್ದವು. ನಾನು ಹುಟ್ಟಿದ್ದಾಗ ನನ್ನನ್ನು ನೋಡಲು ನಮ್ಮ ಚಿಕ್ಕಪ್ಪ ನಾರಾಯಣ್ ಮಸೂರ್ಕರ್ ಅವರು ಆಸ್ಪತ್ರೆಗೆ ಬಂದಿದ್ದರು. ಆಗ ನನ್ನ ಕಿವಿ ಬಳಿಯ ಮಚ್ಚೆ ಇದ್ದದ್ದನ್ನು ಅವರು ಗಮನಿಸಿದ್ದರು. ಮರುದಿನ, ಅವರು ಮತ್ತೆ ಆಸ್ಪತ್ರೆಗೆ ಬಂದು ನನ್ನನ್ನೆಂದು ಎಂದು ಭಾವಿಸಿ ತನ್ನ ಮಡಿಲಲ್ಲಿ ಎತ್ಕೊಂಡಾಗ ಕಿವಿಯ ಬಳಿಯ ಮಚ್ಚೆ ಕಾಣಲಿಲ್ಲ. ಕೂಡಲೇ ಆಸ್ಪತ್ರೆ ಸಿಬ್ಬಂದಿಗೆ ಗಮನಕ್ಕೆ ತರಲಾಯಿತು. ಬಳಿಕ ಇಡೀ ಆಸ್ಪತ್ರೆಯಲ್ಲಿ ಶೋಧಿಸಿದಾಗ ಮೀನುಗಾರರೊಬ್ಬರ ಹೆಂಡತಿಯ ಬಳಿ ಇರುವುದನ್ನು ಕಂಡುಕೊಂಡರು. ಬಹುಶಃ ಇದು ದಾದಿಯ ತಪ್ಪಿನಿಂದಾದ ಘಟನೆಯಾಗಿದೆ. 'ಆ ದಿನ ಚಿಕ್ಕಪ್ಪ ಗಮನ ಹರಿಸದಿದ್ದರೆ ನಾನು ಇಂದು ಮೀನುಗಾರನಾಗಬಹುದಿತ್ತು' ಎಂದು ಗವಾಸ್ಕರ್ ಹೇಳುತ್ತಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಸೂಪರ್: ಟೆಸ್ಟ್ ವೃತ್ತಿಜೀವನದಲ್ಲಿ ಗವಾಸ್ಕರ್ 125 ಪಂದ್ಯಗಳಲ್ಲಿ 10, 122 ರನ್ ಗಳಿಸಿದರು. ಇದರಲ್ಲಿ 34 ಶತಕಗಳು ಸೇರಿವೆ. ಅವರ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಮುರಿದಿದ್ದಾರೆ. ಏಕದಿನ ಪಂದ್ಯಗಳು ಆಡಿರುವ ಅವರು ಒಂದು ಶತಕ ಸೇರಿದಂತೆ 3,092 ರನ್ಗಳನ್ನು ಗಳಿಸಿದ್ದಾರೆ.