ದುಬೈ: ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ದೇಶದ ಮಹಿಳೆಯರ ಆಟಕ್ಕಾಗಿ 1.5 ಮಿಲಿಯನ್ ಯುರೋ ಹೂಡಿಕೆ ಮಾಡುವುದಾಗಿ ಕ್ರಿಕೆಟ್ ಐರ್ಲೆಂಡ್ ಗುರುವಾರ ತಿಳಿಸಿದೆ.
ಐರ್ಲೆಂಡ್ ದೇಶದ ವೃತ್ತಿಪರ ಮಹಿಳಾ ಕ್ರಿಕೆಟ್ ಆಟಗಾರರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಭಾರತದಂತಹ ಹಲವಾರು ಪ್ರಮುಖ ರಾಷ್ಟ್ರಗಳಲ್ಲಿ ಮಹಿಳಾ ಆಟಗಾರರ ಅದ್ಭುತ ಬೆಳವಣಿಗೆ ಮತ್ತು ವೃತ್ತಿಪರತೆಯನ್ನು ನಾವು ನೋಡಿದ್ದೇವೆ. ಹಾಗಾಗಿ, ಇದೀಗ ಐರ್ಲೆಂಡ್ ಸಹ ಮಹಿಳಾ ಕ್ರಿಕೆಟ್ಗೆ ಹೆಚ್ಚಿನ ಗಮನ ನೀಡುತ್ತಿದೆ ಎಂದು ಐಸಿಸಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಕ್ರಿಕೆಟ್ ಐರ್ಲೆಂಡ್‌ನ ಮುಖ್ಯ ಕಾರ್ಯನಿರ್ವಾಹಕ ವಾರೆನ್ ಡ್ಯುಟ್ರೋಮ್ ಹೇಳಿದ್ದಾರೆ.
ಇದು ನಮ್ಮ ಅಂತಿ ಗುರಿ ಅಲ್ಲ, ಈಗ ನಮ್ಮ ಹೊಸ ಯುಗ ಆರಂಭವಾಗಿದೆ. 2021 ರಲ್ಲಿ ನಮ್ಮ ಮಹಿಳಾ ಮಣಿಯರ ತಂಡ ICC ಮಹಿಳಾ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿತ್ತು. ಮಹಿಳಾ ಆಟಗಾಗರಿಗೆ ಇನ್ನೂ ಹೆಚ್ಚಿನ ಬೆಂಬಲ ನೀಡುತ್ತೇವೆ ಎಂದು ಕ್ರಿಕೆಟ್ ಐರ್ಲೆಂಡ್‌ನ ಉನ್ನತ ಕಾರ್ಯಕ್ಷಮತೆಯ ನಿರ್ದೇಶಕ ರಿಚರ್ಡ್ ಹೋಲ್ಡ್ಸ್‌ವರ್ತ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ-ಶ್ರೀಲಂಕಾ ಅಹರ್ನಿಶಿ ಟೆಸ್ಟ್: ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಕೆಎಸ್‌ಸಿಎ