ನವದೆಹಲಿ: ಏಕದಿನ ವಿಶ್ವಕಪ್ ಸರಣಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು, ಇದರ ಬೆನ್ನಲ್ಲೇ ಇಂದು ಐಸಿಸಿ ನೂತ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಕೊಹ್ಲಿ 765 ರನ್ಗಳನ್ನು ಕಲೆ ಹಾಕಿ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದರು. ಇದರಿಂದ ರ್ಯಾಂಕಿಂಗ್ನಲ್ಲಿ ಸುಧಾರಣೆ ಕಂಡಿದ್ದು, ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
-
Rohit Sharma climbs to No.4 in the ICC ODI Ranking.
— Mufaddal Vohra (@mufaddal_vohra) November 22, 2023 " class="align-text-top noRightClick twitterSection" data="
- The Hitman is looking for the No.1 spot...!!! pic.twitter.com/SzRMUnwsmC
">Rohit Sharma climbs to No.4 in the ICC ODI Ranking.
— Mufaddal Vohra (@mufaddal_vohra) November 22, 2023
- The Hitman is looking for the No.1 spot...!!! pic.twitter.com/SzRMUnwsmCRohit Sharma climbs to No.4 in the ICC ODI Ranking.
— Mufaddal Vohra (@mufaddal_vohra) November 22, 2023
- The Hitman is looking for the No.1 spot...!!! pic.twitter.com/SzRMUnwsmC
ಇನ್ನು ವಿಶ್ವಕಪ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿ, ಎರಡನೇ ಹೈಸ್ಕೋರರ್ ಆಗಿ ಹೊರ ಹೊಮ್ಮಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಉಳಿದಂತೆ ಯುವ ಬ್ಯಾಟರ್ ಶುಭಮನ್ ಗಿಲ್ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ಪಾಕಿಸ್ತಾನದ ಬಾಬರ್ ಅಜಾಮ್ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 5ರಲ್ಲಿ ಮೂವರು ಭಾರತೀಯ ಬ್ಯಾಟರ್ಗಳು ಕಾಣಿಸಿಕೊಂಡಿರುವುದು ವಿಶೇಷ.
-
Virat Kohli climbs to No.3 in the ICC ODI Ranking.
— Mufaddal Vohra (@mufaddal_vohra) November 22, 2023 " class="align-text-top noRightClick twitterSection" data="
- King is coming for the No.1 spot...!!! pic.twitter.com/OIWZzDrud9
">Virat Kohli climbs to No.3 in the ICC ODI Ranking.
— Mufaddal Vohra (@mufaddal_vohra) November 22, 2023
- King is coming for the No.1 spot...!!! pic.twitter.com/OIWZzDrud9Virat Kohli climbs to No.3 in the ICC ODI Ranking.
— Mufaddal Vohra (@mufaddal_vohra) November 22, 2023
- King is coming for the No.1 spot...!!! pic.twitter.com/OIWZzDrud9
ಐಸಿಸಿ ಅಗ್ರ 5 ಬ್ಯಾಟಿಂಗ್ ಶ್ರೇಯಾಂಕಗಳು
- ಶುಭ್ಮನ್ ಗಿಲ್- 826 ಅಂಕ
- ಬಾಬರ್ ಅಜಮ್- 824 ಅಂಕ
- ವಿರಾಟ್ ಕೊಹ್ಲಿ - 791 ಅಂಕ
- ರೋಹಿತ್ ಶರ್ಮಾ- 769 ಅಂಕ
- ಕ್ವಿಂಟನ್ ಡಿ ಕಾಕ್ - 760 ಅಂಕ
ಬೌಲಿಂಗ್ ವಿಭಾಗ: ಬೌಲಿಂಗ್ ವಿಭಾಗದಲ್ಲಿ ಭಾರತೀಯ ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿ ನೋಡುವುದಾದರೇ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಟಾಪ್ 10ರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮೊಹಮ್ಮದ್ ಸಿರಾಜ್ 699 ಅಂಕಗಳೊಂದಿಗೆ ಒಂದು ಸ್ಥಾನ ಕುಸಿತ ಕಂಡು ಮೂರನೇ ಸ್ಥಾನಕ್ಕಿಳಿದಿದ್ದಾರೆ. ಮೊಹಮ್ಮದ್ ಶಮಿ ಒಂದು ಸ್ಥಾನ ಕುಸಿದು 10ನೇ ಸ್ಥಾನಕ್ಕೆ ತಲುಪಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ 703 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದ್ದು, ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ 741 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನಕ್ಕೇರಿದ್ದಾರೆ.
-
Shreyas Iyer is now a No.12 Ranked ODI batter...!!!
— Mufaddal Vohra (@mufaddal_vohra) November 22, 2023 " class="align-text-top noRightClick twitterSection" data="
A dream World Cup for a middle order batter! pic.twitter.com/SwnGvEOVDm
">Shreyas Iyer is now a No.12 Ranked ODI batter...!!!
— Mufaddal Vohra (@mufaddal_vohra) November 22, 2023
A dream World Cup for a middle order batter! pic.twitter.com/SwnGvEOVDmShreyas Iyer is now a No.12 Ranked ODI batter...!!!
— Mufaddal Vohra (@mufaddal_vohra) November 22, 2023
A dream World Cup for a middle order batter! pic.twitter.com/SwnGvEOVDm
ಈ ಬಾರಿಯ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿ 7 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಉರುಳಿಸಿದರು. ಅಲ್ಲದೇ ವಿಶ್ವಕಪ್ ಟೂರ್ನಿಯೊಂದರಲ್ಲೇ ಮೂರು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದ ಸಾಧನೆಯನ್ನು ಮಾಡಿದ್ದಾರೆ. ODI ವಿಶ್ವಕಪ್‌ನಲ್ಲಿ 50 ವಿಕೆಟ್‌ಗಳನ್ನು ಗಳಿಸಿದ ವೇಗದ ಬೌಲರ್ ಕೂಡ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: IND vs AUS 1st T20: ನಾಳೆಯಿಂದ ಭಾರತ-ಆಸ್ಟ್ರೇಲಿಯಾ ಟಿ20 ಸರಣಿ; ಐಪಿಎಲ್ ಪ್ರತಿಭೆಗಳಿಗೆ ಅವಕಾಶ