ETV Bharat / sports

ಇಂಗ್ಲೆಂಡ್ ಪ್ರವಾಸದಲ್ಲಿರುವ ಕೊಹ್ಲಿ ಪಡೆಯ ಇಬ್ಬರಿಗೆ ಕೊರೊನಾ! - ಇಂಗ್ಲೆಂಡ್​ನಲ್ಲಿ ಭಾರತ

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಆರಂಭಗೊಳ್ಳಲು ಕೇವಲ ಮೂರು ವಾರಗಳ ಕಾಲ ಬಾಕಿ ಉಳಿದಿದ್ದು, ಇದರ ಬೆನ್ನಲ್ಲೇ ತಂಡದ ಇಬ್ಬರು ಸದಸ್ಯರಿಗೆ ಕೋವಿಡ್​ ಸೋಂಕು ದೃಢಪಟ್ಟಿದೆ.

Indian team
Indian team
author img

By

Published : Jul 15, 2021, 6:09 AM IST

Updated : Jul 15, 2021, 9:30 AM IST

ಲಂಡನ್​( ಇಂಗ್ಲೆಂಡ್​): ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್​​ ಮುಕ್ತಾಯದ ಬಳಿಕ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಆಡಲು ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಂಗ್ಲರ ನಾಡಿನಲ್ಲಿ ಉಳಿದುಕೊಂಡಿದೆ. ಈಗ ಭಾರತ ತಂಡಕ್ಕೂ ಕೊರೊನಾ ಆತಂಕ ಶುರುವಾಗಿದೆ. ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಮೂಲಗಳ ಪ್ರಕಾರ, ಟೀಂ ಇಂಡಿಯಾದ ಇಬ್ಬರು ಆಟಗಾರನಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಇಬ್ಬರಲ್ಲಿ ಒಬ್ಬ ಆಟಗಾರನ ರಿಪೋರ್ಟ್​ ನೆಗೆಟಿವ್​ ಬಂದಿದೆ. ಆದರೆ ಇನ್ನೊಬ್ಬ ಆಟಗಾರನ ರಿಪೋರ್ಟ್​ ಜುಲೈ 18ಕ್ಕೆ ಬರಲಿದೆ. ಈ ಆಟಗಾರ ಈಗ ಐಸೋಲೇಶನ್​​ನಲ್ಲಿದ್ದಾರೆ.

ಇಬ್ಬರೂ ಆಟಗಾರರಿಗೆ ಈಗ ಯಾವುದೇ ಕೋವಿಡ್​ ಲಕ್ಷಣಗಳಿಲ್ಲ. ಆರಂಭದಲ್ಲಿ ಸ್ವಲ್ಪ ಕೆಮ್ಮು ಮತ್ತು ಶೀತ ಇತ್ತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಉಳಿದಂತೆ ಎಲ್ಲ ಆಟಗಾರರೂ ಆರೋಗ್ಯವಾಗಿದ್ದಾರೆ. ಆದರೂ ಅವರ ಆರೋಗ್ಯ ತಪಾಸಣೆ ಪ್ರತಿದಿನವೂ ನಡೆಯುತ್ತಿದೆ. ಕೋವಿಡ್​ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬಿಸಿಸಿಐ ಕೋರಿಕೆಯಂತೆ ಜುಲೈ 20ರಿಂದ 22ರವರೆಗೆ ಟೀಂಇಂಡಿಯಾ, ಕೌಂಟಿ ಚಾಂಪಿಯನ್​ಶಿಪ್​ ಇಲೆವೆನ್​ ತಂಡದ ವಿರುದ್ಧ ವಾರ್ಮ್​ಅಪ್​ ಪಂದ್ಯ ಆಡಲಿದೆ.

ಕಳೆದ ಕೆಲ ದಿನಗಳ ಹಿಂದೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ಪ್ಲೇಯರ್ಸ್​ ಕೂಡ ಕೋವಿಡ್ ಸೋಂಕಿಗೊಳಗಾಗಿದ್ದರು. ಜತೆಗೆ ಇಂಗ್ಲೆಂಡ್​ನ ಅನೇಕ ಪ್ಲೇಯರ್ಸ್​ ಸೋಂಕಿಗೊಳಗಾಗಿದ್ದ ಕಾರಣ ಪಾಕ್​ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಿರಲಿಲ್ಲ. ಇದೀಗ ಟೆಸ್ಟ್​ ಸರಣಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಟೀಂ ಇಂಡಿಯಾಗೆ ಮತ್ತೊಂದು ಸಮಸ್ಯೆ ಎದುರಾಗಿದೆ.

ಆಗಸ್ಟ್​ 4ರಿಂದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದ್ದು, ಟೂರ್ನಿ ಆರಂಭಗೊಳ್ಳಲು ಮೂರು ವಾರಗಳ ಕಾಲ ಬಾಕಿ ಉಳಿದಿರುವ ಸಂದರ್ಭದಲ್ಲಿ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಫೈನಲ್​ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ಕೆಲ ದಿನಗಳ ಕಾಲ ವಿಶ್ರಾಂತಿ ನೀಡಲಾಗಿದ್ದು, ವಿವಿಧ ಪ್ರದೇಶಗಳಲ್ಲಿ ಸುತ್ತಾಡಿರುವುದರಿಂದ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ.

Last Updated : Jul 15, 2021, 9:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.