ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ನ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಭಾರತ ಸೆಮಿಫೈನಲ್ನಲ್ಲಿ ರೋಚಕ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಪ್ರಪ್ರಥಮ ತಂಡವಾಗಿ ಫೈನಲ್ಗೆ ಲಗ್ಗೆ ಹಾಕಿದೆ. ಬಲಿಷ್ಠ ಆಂಗ್ಲರ ತಂಡಕ್ಕೆ ಸೋಲಿನ ರುಚಿ ತೋರಿಸಿರುವ ಹರ್ಮನ್ಪ್ರೀತ್ ಕೌರ್ ಬಳಗ ಕಾಮನ್ವೆಲ್ತ್ ಗೇಮ್ಸ್ನ ಚೊಚ್ಚಲ ಕ್ರಿಕೆಟ್ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ. ಈ ಮೂಲಕ ಕ್ರಿಕೆಟ್ನಲ್ಲೂ ಪದಕ ಖಚಿತಗೊಳಿಸಿದೆ.
ಸೆಮಿಫೈನಲ್ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಮಹಿಳಾ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ಗಳಿಕೆ ಮಾಡಿತ್ತು. ಇದರ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿದ್ದರಿಂದ 4ರನ್‌ಗಳ ಸೋಲು ಕಂಡಿದೆ.
ಮಿಂಚಿದ ಮಂದಾನ- ರೋಡ್ರಿಗಸ್: ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಮಂದಾನ-ಶೆಫಾಲಿ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿತ್ತು. 7.5 ಓವರ್ಗಳಲ್ಲಿ 76ರನ್ಗಳಿಕೆ ಮಾಡಿತು. ತಾವು ಎದುರಿಸಿದ 32 ಎಸೆತಗಳಲ್ಲಿ ಸ್ಮೃತಿ ಮಂದಾನ 3 ಸಿಕ್ಸರ್, 8 ಬೌಂಡರಿ ಸಮೇತ 61ರನ್ಗಳಿಕೆ ಮಾಡಿದರು. ಈ ವೇಳೆ ಸ್ಕಿವರ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನ್ಲಲೇ ಶೆಫಾಲಿ(15) ಕೂಡ ಔಟಾದರು.
-
FINALS, here we come 💥💙💪#TeamIndia #GoForGlory pic.twitter.com/wSYHmlv3rb
— BCCI Women (@BCCIWomen) August 6, 2022 " class="align-text-top noRightClick twitterSection" data="
">FINALS, here we come 💥💙💪#TeamIndia #GoForGlory pic.twitter.com/wSYHmlv3rb
— BCCI Women (@BCCIWomen) August 6, 2022FINALS, here we come 💥💙💪#TeamIndia #GoForGlory pic.twitter.com/wSYHmlv3rb
— BCCI Women (@BCCIWomen) August 6, 2022
ತದನಂತರ ಬಂದ ರೋಡ್ರಿಗಸ್ ಅಜೇಯ(44ರನ್), ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್(20), ದೀಫ್ತಿ ಶರ್ಮಾ(22)ರನ್ಗಳಿಕೆ ಮಾಡಿ, ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164ರನ್ಗಳಿಸಿದರು. ಇಂಗ್ಲೆಂಡ್ ಪರ ಫ್ರೇಯಾ ಕೆಂಪ್ 2 ವಿಕೆಟ್,ಸ್ಕಿವರ್ ಹಾಗೂ ಬ್ರಂಟ್ ತಲಾ 1 ವಿಕೆಟ್ ಪಡೆದುಕೊಂಡರು.
-
Classic Smriti Mandhana in the Semi-final of Commonwealth Games. pic.twitter.com/ZfaQEb40ly
— Johns. (@CricCrazyJohns) August 6, 2022 " class="align-text-top noRightClick twitterSection" data="
">Classic Smriti Mandhana in the Semi-final of Commonwealth Games. pic.twitter.com/ZfaQEb40ly
— Johns. (@CricCrazyJohns) August 6, 2022Classic Smriti Mandhana in the Semi-final of Commonwealth Games. pic.twitter.com/ZfaQEb40ly
— Johns. (@CricCrazyJohns) August 6, 2022
ಸುಲಭ ಗೆಲುವು ಕೈಚೆಲ್ಲಿದ ಇಂಗ್ಲೆಂಡ್: 165ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಸೋಫಿಯಾ(19), ಡೇನಿಯಲ್(35) ತಂಡಕ್ಕೆ ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಬೇರ್ಪಡಿಸುವಲ್ಲಿ ದೀಪ್ತಿ ಶರ್ಮಾ ಯಶಸ್ವಿಯಾದರು. 19ರನ್ಗಳಿಕೆ ಮಾಡಿದ್ದ ಸೋಫಿಯಾ ದೀಪ್ತಿ ಓವರ್ನಲ್ಲಿ ಔಟಾದರೆ, 35ರನ್ಗಳಿಸಿದ್ದ ಡೇನಿಯಲ್ ಸ್ನೇಹಾ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮೈದಾನಕ್ಕೆ ಬಂದ ಕ್ಯಾಪ್ಸೆ(13), ಕ್ಯಾಪ್ಟನ್ ಸ್ಕಿವರ್(41)ರನ್ಗಳಿಸಿ ತಂಡವನ್ನ ಸುಲಭವಾಗಿ ಗೆಲುವಿನ ದಡ ಸೇರಿಸುವ ಕೆಲಸಕ್ಕೆ ಮುಂದಾದರು. ಆದರೆ, ಇಬ್ಬರು ಪ್ಲೇಯರ್ಸ್ ರನೌಟ್ ಬಲೆಗೆ ಬಿದ್ದು ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಇಂಗ್ಲೆಂಡ್ನ ಯಾವುದೇ ಪ್ಲೇಯರ್ಸ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 160ರನ್ಗಳಿಕೆ ಮಾಡಿ, ಸೋಲು ಕಂಡಿದೆ. ಈ ಮೂಲಕ ಫೈನಲ್ನಿಂದ ಹೊರಬಿದ್ದಿದೆ. ಭಾರತದ ಪರ ಮಿಂಚಿದ ಸ್ನೇಹಾ ರಾಣಾ 2 ವಿಕೆಟ್, ದೀಪ್ತಿ ಶರ್ಮಾ 1 ವಿಕೆಟ್ ಪಡೆದುಕೊಂಡರು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗಲಿವೆ. ಇಲ್ಲಿ ಗೆಲ್ಲುವ ತಂಡ ಭಾರತದ ವಿರುದ್ಧ ಫೈನಲ್‌ನಲ್ಲಿ ಸೆಣಸಾಟ ನಡೆಸಲಿದೆ.