ETV Bharat / sports

ಹೊರಗಿನಿಂದ ಬಂದ ನನಗೆ ತಂಡದ ನಾಯಕತ್ವ ನೀಡಿರುವುದಕ್ಕೆ ಆರ್​ಸಿಬಿಗೆ ಕೃತಜ್ಞನಾಗಿರುತ್ತೇನೆ: ಡುಪ್ಲೆಸಿಸ್​

ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಆರ್​ಸಿಬಿ ಅನ್​ಬಾಕ್ಸ್ ಕಾರ್ಯಕ್ರಮದಲ್ಲಿ ಫ್ರಾಂಚೈಸಿ ಪ್ಲೆಸಿಸ್​ರನ್ನು ವಿರಾಟ್​ ಕೊಹ್ಲಿಯ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿತು. ಫೆಬ್ರವರಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಡುಪ್ಲೆಸಿಸ್​ರನ್ನು ಚೆನ್ನೈ ಸೂಪರ್ ಕಿಂಗ್ಸ್​ ಜೊತೆಗೆ ಪೈಪೋಟಿ ನೀಡಿ ಬರೋಬ್ಬರಿ 7 ಕೋಟಿ ರೂ. ನೀಡಿ ಖರೀದಿಸಿತ್ತು.

du Plessis on RCB captainship
ಫಾಫ್​ ಡು ಪ್ಲೆಸಿಸ್​
author img

By

Published : Mar 12, 2022, 7:29 PM IST

ಬೆಂಗಳೂರು: ಹೊರಗಿನಿಂದ ಬಂದ ನನಗೆ ತಂಡದ ನಾಯಕತ್ವ ನೀಡಿರುವುದಕ್ಕೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಕೃತಜ್ಞನಾಗಿದ್ದೇನೆ ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಆರ್​ಸಿಬಿ ಅನ್​ಬಾಕ್ಸ್ ಕಾರ್ಯಕ್ರಮದಲ್ಲಿ ಫ್ರಾಂಚೈಸಿ ಪ್ಲೆಸಿಸ್​ರನ್ನು ವಿರಾಟ್​ ಕೊಹ್ಲಿಯ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿತು. ಫೆಬ್ರವರಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಡುಪ್ಲೆಸಿಸ್​ರನ್ನು ಚೆನ್ನೈ ಸೂಪರ್ ಕಿಂಗ್ಸ್​ ಜೊತೆಗೆ ಪೈಪೋಟಿ ನೀಡಿ ಬರೋಬ್ಬರಿ 7 ಕೋಟಿ ರೂ ನೀಡಿ ಖರೀದಿಸಿತ್ತು.

"ಹೊರಗಿನಿಂದ ಬಂದ ನನಗೆ ಈ ಅವಕಾಶ ನೀಡಿರುವುದಕ್ಕೆ ಕೃತಜ್ಞನಾಗಿದ್ದೇನೆ. ಹೊರಗಿನವನು, ಅದರಲ್ಲೂ ವಿದೇಶಿಗನ ಮೇಲೆ ನಂಬಿಕೆಯಿಟ್ಟು ತಂಡದ ಜವಾಬ್ದಾರಿಯನ್ನು ನೀಡುವುದು ಸಣ್ಣ ವಿಷಯವಲ್ಲ. ನಮ್ಮ ತಂಡದಲ್ಲಿರುವ ಡೊಮೆಸ್ಟಿಕ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಪಾರ ಅನುಭವವನ್ನು ಬಳಸಿಕೊಂಡು ತಂಡವನ್ನು ಮುನ್ನಡೆಸಲು ಬಯಸುತ್ತೇನೆ" ಎಂದು ಪ್ಲೆಸಿಸ್​ ಹೇಳಿದ್ದಾರೆ.

ಸ್ವಲ್ಪ ಸಮಯದವರೆಗೆ ನಾಯಕನಾಗಿದ್ದ ಅನುಭವ ಇರುವುದರಿಂದ ಈ ಪಯಣದಲ್ಲಿ ನನ್ನ ಹೃದಯಕ್ಕೆ ಹತ್ತಿರವಾದ ಸಂಸ್ಕೃತಿಯನ್ನು ರಚಿಸಲು ಬಯಸುತ್ತೇನೆ. ನನ್ನ ನಾಯಕತ್ವ ಶೈಲಿಯು ಸಂಬಂಧಾತ್ಮಕವಾಗಿರುತ್ತದೆ. ಆಟಗಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಪ್ರತಿಯೊಬ್ಬರ ಬಗ್ಗೆ ತಿಳಿದುಕೊಳ್ಳುತ್ತೇನೆ. ನನ್ನ ಪ್ರಯಾಣದ ಮೊದಲ ಭಾಗವು ಸಂಬಂಧಗಳನ್ನು ಬೆಸೆಯುವುದು, ಅದಕ್ಕಾಗಿ ಪ್ರಯತ್ನಿಸುವುದು ಮತ್ತು ಪ್ರತಿಯೊಬ್ಬ ಆಟಗಾರನಿಂದ ವೈಯಕ್ತಿಕವಾಗಿ ಉತ್ತಮವಾದದನ್ನು ಪಡೆಯುವುದರ ಬಗ್ಗೆ ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದಾರೆ.

ಫಾಫ್ ಡು ಪ್ಲೆಸಿಸ್​ ಆರ್​ಸಿಬಿ ನಾಯಕತ್ವ ವಹಿಸಿಕೊಂಡ 7ನೇ ಕ್ರಿಕೆಟಿಗ ಹಾಗೂ 3ನೇ ವಿದೇಶಿಗನಾಗಿದ್ದಾರೆ. 2008ರ ಆವೃತ್ತಿಯಲ್ಲಿ ರಾಹುಲ್ ದ್ರಾವಿಡ್​ 14 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ನಂತರ 2009ರಲ್ಲಿ ಇಂಗ್ಲೆಂಡ್​ನ ಕೆವಿನ್ ಪೀಟರ್ಸನ್​(6 ಪಂದ್ಯ), ಅನಿಲ್​ ಕುಂಬ್ಳೆ 2009-10ರವರೆಗೆ 35 ಪಂದ್ಯ, 2011 ಮತ್ತು 12 ನ್ಯೂಜಿಲ್ಯಾಂಡ್​ ಮಾಜಿ ನಾಯಕ ಡೇನಿಯಲ್ ವಿಟೋರಿ 28 ಪಂದ್ಯ ಮತ್ತು 2013ರಿಂದ 2021ರವರೆಗೆ ವಿರಾಟ್​ ಕೊಹ್ಲಿ 140 ಪಂದ್ಯಗಳಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದರು. ಆಸ್ಟ್ರೇಲಿಯಾದ ಶೇನ್​ ವಾಟ್ಸನ್​ 2017ರಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ 3 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ಫಾಫ್​ ಡು ಪ್ಲೆಸಿಸ್​ 2012ರಲ್ಲಿ ಶ್ರೀಮಂತ ಕ್ರಿಕೆಟ್​ ಲೀಗ್​ಗೆ ಪಾದಾರ್ಪಣೆ ಮಾಡಿದ್ದರು. ಅವರು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್​ಜೈಂಟ್ ಪರ ಆಡಿದ್ದಾರೆ. ಅವರು ದಶಕದ ಐಪಿಎಲ್ ಅನುಭವದಲ್ಲಿ 100 ಪಂದ್ಯಗಳನ್ನಾಡಿದ್ದು 22 ಅರ್ಧಶತಗಳ ಸಹಿತ 2935 ರನ್​ ಸಿಡಿಸಿದ್ದಾರೆ.

ಇದನ್ನೂ ಓದಿ:ತಮಗೆ ಸಿಕ್ಕಿದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೌರ್​ ಜೊತೆ ಹಂಚಿಕೊಂಡ ಸ್ಮೃತಿ ಮಂಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.