ಕಾನ್ಪುರ: ಪ್ರವಾಸಿ ನ್ಯೂಜಿಲ್ಯಾಂಡ್ (New zealand vs India) ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ವೈಟ್ವಾಶ್ ಮಾಡಿರುವ ಟೀಂ ಇಂಡಿಯಾ, ಇದೀಗ ಮತ್ತೊಂದು ಚಾಲೆಂಜ್ಗೆ ಅಣಿಯಾಗಲಿದೆ. ಅದಕ್ಕಾಗಿ ಉತ್ತರ ಪ್ರದೇಶದ ಕಾನ್ಪುರ್ ತಲುಪಿದೆ.
ಅಜಿಂಕ್ಯಾ ರಹಾನೆ (Ajinkya Rahane) ನೇತೃತ್ವದ ಟೀಂ ಇಂಡಿಯಾ (Team India) ನವೆಂಬರ್ 25ರಿಂದ ನ್ಯೂಜಿಲ್ಯಾಂಡ್ (New Zealand) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಉಭಯ ತಂಡಗಳು ಈಗಾಗಲೇ ಗ್ರೀನ್ ಪಾರ್ಕ್ ತಲುಪಿವೆ. ಕೋವಿಡ್ನಿಂದಾಗಿ ಬಯೋಬಬಲ್ನಲ್ಲಿರುವ ಟೀಂ ಇಂಡಿಯಾ ನಾಳೆಯಿಂದ ಅಭ್ಯಾಸ ಶುರು ಮಾಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಕೋಚ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರಹಾನೆ ಬಯೋ ಬಬಲ್ ಬ್ರೇಕ್ ಮಾಡಿ ಮೈದಾನಕ್ಕೆ ಲಗ್ಗೆ ಹಾಕಿದ್ದು, ಕ್ಯುರೇಟರ್ ಜೊತೆ ಕೆಲಹೊತ್ತು ಮಾತುಕತೆ ನಡೆಸಿದರು
-
Indian and New Zealand cricket teams reach Kanpur ahead of their first test match that will be played at Green Park International stadium between Nov 25 and Nov 29 pic.twitter.com/oli27Kv8P8
— ANI UP (@ANINewsUP) November 22, 2021 " class="align-text-top noRightClick twitterSection" data="
">Indian and New Zealand cricket teams reach Kanpur ahead of their first test match that will be played at Green Park International stadium between Nov 25 and Nov 29 pic.twitter.com/oli27Kv8P8
— ANI UP (@ANINewsUP) November 22, 2021Indian and New Zealand cricket teams reach Kanpur ahead of their first test match that will be played at Green Park International stadium between Nov 25 and Nov 29 pic.twitter.com/oli27Kv8P8
— ANI UP (@ANINewsUP) November 22, 2021
ಟೀಂ ಇಂಡಿಯಾ ಅಭ್ಯಾಸ ನಡೆಸುವ ಪಿಚ್ ಬಗ್ಗೆ ಅತೃಪ್ತಿ ಹೊಂದಿರುವ ಕಾರಣ ಮೈದಾನಕ್ಕೆ ಲಗ್ಗೆ ಹಾಕಿ ಅಲ್ಲಿನ ಪಿಚ್ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಜೊತೆಗೆ ಕ್ಯುರೇಟರ್ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಬಯೋ ಬಬಲ್ (Bio bubble) ಬ್ರೇಕ್ ಮಾಡದಂತೆ ಬಿಸಿಸಿಐ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ. ಆದರೆ ನಾಯಕ ಅಜಿಂಕ್ಯಾ ರಹಾನೆ ಹಾಗೂ ಕೋಚ್ ರಾಹುಲ್ ದ್ರಾವಿಡ್ ಈ ರೂಲ್ಸ್ ನಿರ್ಲಕ್ಷ್ಯ ಮಾಡಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದೆ. ಈ ಹಿಂದೆ ಭಾರತದಲ್ಲಿ ಐಪಿಎಲ್ ನಡೆದಿದ್ದಾಗ ಕೋಲ್ಕತ್ತಾ ನೈಟ್ ರೈಡರ್ಸ್ನ ಕೆಲ ಪ್ಲೇಯರ್ಸ್ ಬಯೋ ಬಬಲ್ ಬ್ರೇಕ್ ಮಾಡಿದ್ದರು. ಹೀಗಾಗಿ ಆ ತಂಡದ ಕೆಲವರಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಹೀಗಾಗಿ ಬಿಸಿಸಿಐ ಅವರಿಗೆ ದಂಡ ಸಹ ವಿಧಿಸಿತ್ತು.
ಇದನ್ನೂ ಓದಿರಿ: ಪುಟಾಣಿಗಳ ಕ್ರಿಕೆಟ್‌ನಲ್ಲಿ ಚೆಂಡು ಹಿಡಿದುಕೊಡುವ ಶ್ವಾನ: ವಿಡಿಯೋ ಹಂಚಿಕೊಂಡ ಸಚಿನ್
ಟೆಸ್ಟ್ ಪಂದ್ಯವನ್ನಾಡಲು ಕಾನ್ಪುರ್ ಹೋಟೆಲ್ನಲ್ಲಿರುವ ರಹಾನೆ ಈಗಾಗಲೇ ಐಸೋಲೇಷನ್ಗೆ ಒಳಗಾಗಿದ್ದಾರೆ. ಆದರೆ ಟಿ20 ಸರಣಿ ಮುಗಿಸಿಕೊಂಡು ಕೋಲ್ಕತ್ತಾದಿಂದ ಕಾನ್ಪುರ್ ತಲುಪಿರುವ ದ್ರಾವಿಡ್ ಹೋಟೆಲ್ನಲ್ಲಿದ್ದ ರಹಾನೆ ಜೊತೆ ಸೇರಿ ನೇರವಾಗಿ ಗ್ರೀನ್ ಪಾರ್ಕ್ಗೆ ತೆರಳಿ, ಅದರ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಕ್ಯುರೇಟರ್ ಜೊತೆ ಮಾತನಾಡಿದ್ದಾರೆ.