ETV Bharat / sports

ಲಾರ್ಡ್ಸ್​ ಮೈದಾನದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ ಪೂಜಾರ.. ನಾಯಕನಾದ ಮೊದಲ ಪಂದ್ಯದಲ್ಲೇ ಮಿಂಚಿನ ಬ್ಯಾಟಿಂಗ್​

ಕೌಂಟಿ ಕ್ರಿಕೆಟ್​ನಲ್ಲಿ ರನ್ ಮಳೆ ಹರಿಸುತ್ತಿರುವ ಟೀಂ ಇಂಡಿಯಾ ಟೆಸ್ಟ್​​ ಆಟಗಾರ ಚೇತೇಶ್ವರ್ ಪೂಜಾರ ಇದೀಗ ಮತ್ತೊಂದು ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಸಸೆಕ್ಸ್ ತಂಡದ ನಾಯಕನಾಗಿ ಆಯ್ಕೆಯಾದ ಮೊದಲ ಪಂದ್ಯದಲ್ಲೇ ಮಿಂಚು ಹರಿಸಿದ್ದಾರೆ.

Cheteshwar pujara
Cheteshwar pujara
author img

By

Published : Jul 20, 2022, 9:43 PM IST

ಲಂಡನ್​(ಯುಕೆ): ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್​​ನಲ್ಲಿ ಚೇತೇಶ್ವರ್ ಪೂಜಾರ ಬ್ಯಾಟಿಂಗ್​​​ ಆರ್ಭಟ ಮುಂದುವರೆದಿದೆ. ಸೆಸೆಕ್ಸ್ ತಂಡದ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಲಾರ್ಡ್ಸ್​ ಮೈದಾನದಲ್ಲಿ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ತಂಡದ ಪರ ಆಡಿರುವ ಒಟ್ಟು 7 ಪಂದ್ಯಗಳಲ್ಲಿ ಮೂರನೇ ದ್ವಿಶತಕ ಅವರ ಬ್ಯಾಟ್​​ನಿಂದ ಸಿಡಿದಿದೆ.

ಸಸೆಕ್ಸ್‌ ತಂಡದ ಖಾಯಂ ನಾಯಕ ಟಾಮ್‌ ಹೈನ್ಸ್‌ ಗಾಯಗೊಂಡಿರುವ ಕಾರಣ ಚೇತೇಶ್ವರ್ ಪೂಜಾರ ನಾಯಕನಾಗಿ ಆಯ್ಕೆಯಾಗಿದ್ದಾರೆ. ಲಾರ್ಡ್ಸ್‌ ಮೈದಾನದಲ್ಲಿ ಮಿಡಲ್‌ಸೆಕ್ಸ್‌ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಸದ್ಯ 156 ಎಸೆತಗಳಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 103 ರನ್‌ ಬಾರಿಸಿದ್ದ ಈ ಪ್ಲೇಯರ್​, 368 ಎಸೆತಗಳಲ್ಲಿ 200ರನ್​​​ಗಳಿಸಿದರು. ಇದಾದ ಬಳಿಕ ಸಹ ಬ್ಯಾಟಿಂಗ್ ಮುಂದುವರೆಸಿ 231ರನ್​​ಗಳಿಗೆ ಆಲೌಟ್​​ ಆದರು. ಈ ಮೂಲಕ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 500+ರನ್​ಗಳಿಕೆ ಮಾಡಿದೆ.

ಕೌಂಟಿ ಚಾಂಪಿಯನ್​​ಶಿಪ್​​ನಲ್ಲಿ ಅದ್ಭುತ ಫಾರ್ಮ್​​ನಲ್ಲಿರುವ ಚೇತೇಶ್ವರ್ ಪೂಜಾರ ತಾವು ಆಡಿರುವ 7 ಪಂದ್ಯಗಳಲ್ಲಿ ಮೂರು ದ್ವಿಶತಕ ಹಾಗೂ ಮೂರು ಶತಕ ಸೇರಿದ್ದು, 750ಕ್ಕೂ ಅಧಿಕ ರನ್​​ಗಳಿಕೆ ಮಾಡಿದ್ದಾರೆ.

ಇದನ್ನೂ ಓದಿರಿ: ಭಾರತ - ಪಾಕಿಸ್ತಾನ ಕ್ರಿಕೆಟ್ ಕದನ.. ಬರೋಬ್ಬರಿ 1.3 ಮಿಲಿಯನ್​ ಟಿಕೆಟ್ ಮಾರಾಟ

ಮತ್ತೊಂದೆಡೆ ಕೌಂಟಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಭಾರತದ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಲ್ಯಾನ್ಸ್​ಶೈನ್​ ಪರ ಮೈದಾನಕ್ಕಿಳಿದಿರುವ ಈ ಪ್ಲೇಯರ್​​ ಮೊದಲ ದಿನವೇ 4 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.