ಜೋಧಪುರ್(ರಾಜಸ್ಥಾನ): ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಯಂಗ್ ಪ್ಲೇಯರ್ ಚೇತನ್ ಸಕಾರಿಯಾಗೆ 1.2 ಕೋಟಿ ರೂ. ನೀಡಿ ಖರೀದಿ ಮಾಡಿದ್ದು, ಆ ಹಣ ಯಾವುದಕ್ಕೆ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನ ಶೇರ್ ಮಾಡಿಕೊಂಡಿದ್ದಾರೆ.
ಕೋವಿಡ್ ಕಾರಣದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಧಕ್ಕೆ ಮೊಟಕುಗೊಂಡಿದ್ದು, ಹೀಗಾಗಿ ಎಲ್ಲ ಪ್ಲೇಯರ್ಸ್ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಸದ್ಯ ಐಪಿಎಲ್ನಲ್ಲಿ ಭಾಗಿಯಾಗಿದ್ದ ಯಂಗ್ ಪ್ಲೇಯರ್ ಚೇತನ್ ಸಕಾರಿಯಾ ತಂದೆಯ ಆರೈಕೆಯಲ್ಲಿ ಮಗ್ನರಾಗಿದ್ದಾರೆ. ಚೇತನ್ ಸಕಾರಿಯಾ ತಂದೆಗೆ ಕೋವಿಡ್ ಸೋಂಕು ತಗುಲಿರುವ ಕಾರಣ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಐಪಿಎಲ್ನಲ್ಲಿ ತಮಗೆ ಬಂದಿರುವ ಹಣವನ್ನ ಅದಕ್ಕಾಗಿ ಖರ್ಚು ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹರಾಜುಗೊಂಡಿದ್ದ ಯಂಗ್ ಪ್ಲೇಯರ್ ಚೇತನ್ 1.2 ಕೋಟಿಗೆ ಹರಾಜುಗೊಂಡಿದ್ದರು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅನೇಕ ವಿಕೆಟ್ ಪಡೆದುಕೊಂಡು ಗಮನ ಸಹ ಸೆಳೆದಿದ್ದರು. ಆದರೆ ಟೂರ್ನಿ ಅರ್ಧಕ್ಕೆ ಮೊಟಕುಗೊಂಡಿರುವ ಕಾರಣ ಅವರು ಮನೆಗೆ ತೆರಳಿದ್ದಾರೆ.
ಇದನ್ನೂ ಓದಿ: ಚೊಚ್ಚಲ IPL ಪಂದ್ಯದಲ್ಲೇ 3 ವಿಕೆಟ್,ಅದ್ಭುತ ಕ್ಯಾಚ್: ಗಮನ ಸೆಳೆದ ಟೆಂಪೋ ಡ್ರೈವರ್ ಮಗ ಸಕಾರಿಯಾ!
ಸಕಾರಿಯಾ ಐಪಿಎಲ್ಗೂ ಬರುವ ಮುನ್ನ ಕೂಡ ದೊಡ್ಡ ದುರಂತ ಎದುರಿಸಿದ್ದರು. ಇದೇ ವರ್ಷ ಸಯ್ಯದ್ ಮುಸ್ತಾಕ್ ಅಲಿ ಟೂರ್ನಿ ನಡೆದಿದ್ದ ವೇಳೆ ತಮ್ಮನನ್ನು ಕಳೆದುಕೊಂಡಿದ್ದರು. ಇದೀಗ ಅವರ ತಂದೆಗೆ ಕೋವಿಡ್ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.