ಕೊಲಂಬೋ(ಶ್ರೀಲಂಕಾ): ಲಂಕಾ ಅಂತಾರಾಷ್ಟ್ರೀಯ ಆಟಗಾರ ಚಾಮಿಕ ಕರುಣರತ್ನೆಯ ಮುಖಕ್ಕೆ ಚೆಂಡು ತಾಗಿ ನಾಲ್ಕು ಹಲ್ಲುಗಳನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿ ನಡೆಯುವ ಐಪಿಎಲ್ ರೀತಿ ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್ ಲೀಗ್(ಎಲ್ಪಿಎಲ್) ಪಂದ್ಯ ನಡೆಯುತ್ತಿದೆ. ಕ್ಯಾಂಡಿ ಮತ್ತು ಗಾಲೆ ನಡುವಿನ ಪಂದ್ಯದ ವೇಳೆ ಕ್ಯಾಚ್ ಹಿಡಿಯುವಾಗ ಮುಖಕ್ಕೆ ಬಾಲ್ ಬಡಿದು ಎದುರಿನ ನಾಲ್ಕು ಹಲ್ಲುಗಳಿಗೆ ಪೆಟ್ಟಾಗಿದೆ.
ಘಟನೆ ನಡೆದ ತಕ್ಷಣ ಅವರನ್ನು ಗಾಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೆಂಡು ಬಡಿದ ರಭಸಕ್ಕೆ ಮುಂದಿನ ನಾಲ್ಕು ಹಲ್ಲುಗಳಿಗೆ ಪಟ್ಟಾಗಿದೆ. ಆಲ್ ರೌಂಡರ್ ಕರುಣರತ್ನೆ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
-
Chamika hospitalized while attempting catch for Kandy Falcons#LPL2022 #LPL #ChamikaKarunaratne #Cricket pic.twitter.com/yrkT2bbhoG
— Ada Derana Sports (@AdaDeranaSports) December 7, 2022 " class="align-text-top noRightClick twitterSection" data="
">Chamika hospitalized while attempting catch for Kandy Falcons#LPL2022 #LPL #ChamikaKarunaratne #Cricket pic.twitter.com/yrkT2bbhoG
— Ada Derana Sports (@AdaDeranaSports) December 7, 2022Chamika hospitalized while attempting catch for Kandy Falcons#LPL2022 #LPL #ChamikaKarunaratne #Cricket pic.twitter.com/yrkT2bbhoG
— Ada Derana Sports (@AdaDeranaSports) December 7, 2022
ಆಸ್ಟ್ರೇಲಿಯಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಶಿಸ್ತಿನ ಉಲ್ಲಂಘನೆಗಳ ವಿಚಾರಣೆಯ ನಂತರ ಕರುಣಾರತ್ನೆ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಒಂದು ವರ್ಷ ನಿಷೇಧಿಸಲಾಗಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ 500 ಸಿಕ್ಸರ್.. ಕ್ರಿಸ್ಗೇಲ್ ದಾಖಲೆ ಮುರಿಯಲು ಬೇಕು 51 ಸಿಕ್ಸರ್