ನವದೆಹಲಿ: ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತೋರಿದ ರಾಜಸ್ಥಾನ್ ರಾಯಲ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ 171 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ಸ್ ತಂಡಕ್ಕೆ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ 66 ರನ್ಗಳ ಜೊತೆಯಾಟ ನೀಡಿದರು. 32 ಎಸೆತಗಳಲ್ಲಿ ಬಟ್ಲರ್ ತಲಾ 3 ಬೌಂಡರಿ ಮತ್ತು ಸಿಕ್ಸರ್ಗಳ ನೆರವಿನಿಂದ 41ರನ್ಗಳಿಸಿದರೆ, ಜೈಸ್ವಾಲ್ 20 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ಗಳ ಸಹಿತ 32 ರನ್ಗಳಿಸಿದರು. ಈ ಇಬ್ಬರನ್ನು ಸ್ಪಿನ್ನರ್ ರಾಹುಲ್ ಚಹಾರ್ ಪೆವಿಲಿಯನ್ಗಟ್ಟಿ ಮುಂಬೈಗೆ ಬ್ರೇಕ್ ನೀಡಿದರು.
-
We have seen him do it in the past and he has done it again for @mipaltan. Top bowling performance from @Jaspritbumrah93 against #RR.
— IndianPremierLeague (@IPL) April 29, 2021 " class="align-text-top noRightClick twitterSection" data="
4-0-15-1 and he bowled 12 dot balls today. 👌https://t.co/jRroRGewsU #MIvRR #VIVOIPL pic.twitter.com/Qqft7ZevXC
">We have seen him do it in the past and he has done it again for @mipaltan. Top bowling performance from @Jaspritbumrah93 against #RR.
— IndianPremierLeague (@IPL) April 29, 2021
4-0-15-1 and he bowled 12 dot balls today. 👌https://t.co/jRroRGewsU #MIvRR #VIVOIPL pic.twitter.com/Qqft7ZevXCWe have seen him do it in the past and he has done it again for @mipaltan. Top bowling performance from @Jaspritbumrah93 against #RR.
— IndianPremierLeague (@IPL) April 29, 2021
4-0-15-1 and he bowled 12 dot balls today. 👌https://t.co/jRroRGewsU #MIvRR #VIVOIPL pic.twitter.com/Qqft7ZevXC
ನಂತರ ಬಂದ ನಾಯಕ ಸಂಜು ಸಾಮ್ಸನ್ ಮತ್ತು ಶಿವಂ ದುಬೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ 3ನೇ ವಿಕೆಟ್ಗೆ 57 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಸಂಜು 27 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 42 ರನ್ಗಳಿಸಿದರೆ, ದುಬೆ 31 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 35 ರನ್ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಮಿಲ್ಲರ್ ಔಟಾಗದೆ 7, ಪರಾಗ್ ಔಟಾಗದೆ 8 ರನ್ಗಳಿಸಿದರು.
20 ಓವರ್ಗಳಲ್ಲಿ ರಾಯಲ್ಸ್ 4 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತು. ಮುಂಬೈ ಪರ ರಾಹುಲ್ ಚಹಾರ್ 33ಕ್ಕೆ 2 ವಿಕೆಟ್ ಪಡೆದರೆ, ಯಾರ್ಕರ್ ಕಿಂಗ್ ಬುಮ್ರಾ 4 ಓವರ್ಗಳಲ್ಲಿ ಕೇವಲ 15 ರನ್ ನೀಡಿ 1 ವಿಕೆಟ್ ಪಡೆದರು. ಬೌಲ್ಟ್ 37 ರನ್ ನೀಡಿ 1 ವಿಕೆಟ್ ಪಡೆದರು.