ನವದೆಹಲಿ: ನಿರಂತರ ಕ್ರಿಕೆಟ್ ಮತ್ತು ಕಠಿಣ ಬಯೋಬಬಲ್ ವ್ಯವಸ್ಥೆಯಿಂದ ಬಳಲಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ರಿಗೆ ಬಿಸಿಸಿಐ 10 ದಿನಗಳ ವಿಶ್ರಾಂತಿ ನೀಡಿದೆ. ಇದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮತ್ತು ಮೂರನೇ ಟಿ-20 ಪಂದ್ಯಕ್ಕೂ ಮುನ್ನ ಈ ಇಬ್ಬರು ಆಟಗಾರರು ಬಯೋಬಬಲ್ ವ್ಯವಸ್ಥೆಯಿಂದ ತಮ್ಮ ಮನೆಗಳಿಗೆ ತೆರಳಲಿದ್ದಾರೆ.
ವಿರಾಟ್ ಮತ್ತು ಪಂತ್ಗೆ ವಿಶ್ರಾಂತಿ ನೀಡಿದ ಕಾರಣ ಕೆರೆಬಿಯನ್ನರ ವಿರುದ್ಧದ ಕೊನೆಯ, ಮುಂಬರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಗೆ ಅಲಭ್ಯರಾಗಲಿದ್ದಾರೆ. ನಿರಂತರ ಕ್ರಿಕೆಟ್ ಮತ್ತು ಬಯೋಬಬಲ್ ವ್ಯವಸ್ಥೆಯಿಂದ ಆಟಗಾರರು ಧಣಿದಿದ್ದಾರೆ. ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಷ್ಟಿಯಿಂದ ವಿರಾಟ್ ಮತ್ತು ಪಂತ್ಗೆ 10 ದಿನಗಳ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಇಬ್ಬರೂ ತಂಡ ಸೇರಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಟೆಸ್ಟ್ ತಂಡದ ಪರಿಣತ ಆಟಗಾರರಾದ ಮಯಾಂಕ್ ಅಗರ್ವಾಲ್, ಆರ್ ಅಶ್ವಿನ್, ಹನುಮ ವಿಹಾರಿ ಕೂಡ ಬಬಲ್ ಪ್ರವೇಶಿಸಲಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿಗೆ ಮುಂದಿನ ಪಂದ್ಯ 100 ನೇ ಪಂದ್ಯವಾಗಿದ್ದು, ಫಿಟ್ ಆಗಿರಲು ಬಿಸಿಸಿಐ ಬಯಸಿದೆ ಎಂದು ಹೇಳಿದ್ದಾರೆ.
ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ರ ಅಬ್ಬರದ ಅರ್ಧಶತಕದ ನೆರವಿನಿಂದ 2ನೇ ಟಿ-20 ಪಂದ್ಯದಲ್ಲಿ ಭಾರತ ತಂಡ ಕೆರೆಬಿಯನ್ನರ ವಿರುದ್ಧ ಗೆಲುವು ಸಾಧಿಸಿ, ಸರಣಿ ಜಯಿಸಿತು.
ಓದಿ: ರೋಚಕ ಪಂದ್ಯದಲ್ಲಿ ಗೆಲುವು ಕಂಡ ಭಾರತ.. ನಾಯಕ ರೋಹಿತ್ ಪಡೆಗೆ ಸತತ ಮೂರನೇ ಸರಣಿ ಜಯ!