ಹೈದರಾಬಾದ್: ಕೊರೊನಾ ವೈರಸ್ ಕಾರಣ ಅರ್ಧಕ್ಕೆ ಮೊಟಕುಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಬಾಕಿ ಉಳಿದಿರುವ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಇದರ ಬೆನ್ನಲ್ಲೇ ಮುಂದಿನ ವರ್ಷದ ಆವೃತ್ತಿಗೋಸ್ಕರ ಬಿಸಿಸಿಐ ದೊಡ್ಡ ಮಟ್ಟದ ಪ್ಲಾನ್ ಹಾಕಿಕೊಂಡಿದೆ. ಎಲ್ಲ ಫ್ರಾಂಚೈಸಿಗಳಿಗು ಕೇವಲ ನಾಲ್ವರು ಆಟಗಾರರನ್ನು ರಿಟೈನ್(ಉಳಿಸಿಕೊಳ್ಳಲು) ಮಾಡಿಕೊಳ್ಳಲು ಅವಕಾಶ ನೀಡಿದೆ.
ಮುಂದಿನ ವರ್ಷದ ಐಪಿಎಲ್ಗೋಸ್ಕರ ದೊಡ್ಡ ಮಟ್ಟದ ಹರಾಜು ಪ್ರಕ್ರಿಯೆ ನಡೆಯಲಿದೆ ಎಂಬ ಮಾತುಗಳು ಕೇಳಿ ಬರಲು ಶುರುವಾಗುತ್ತಿದ್ದು, ಸಿಎಸ್ಕೆ ತಂಡ ಧೋನಿ ಅವರನ್ನು ಕೈಬಿಡಲಿದೆ ಎಂದು ಕ್ರಿಕೆಟ್ ಪ್ರೇಮಿಗಳು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ.ಆದ್ರೆ, ಈ ವಿಚಾರವಾಗಿ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಬ್ರಾಡ್ ಹಾಗ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
-
MS Dhoni is not leaving @ChennaiIPL He is the Maharaja of the franchise. He will transition into a coaching role. #IPL https://t.co/DtCmjtEk6c
— Brad Hogg (@Brad_Hogg) July 5, 2021 " class="align-text-top noRightClick twitterSection" data="
">MS Dhoni is not leaving @ChennaiIPL He is the Maharaja of the franchise. He will transition into a coaching role. #IPL https://t.co/DtCmjtEk6c
— Brad Hogg (@Brad_Hogg) July 5, 2021MS Dhoni is not leaving @ChennaiIPL He is the Maharaja of the franchise. He will transition into a coaching role. #IPL https://t.co/DtCmjtEk6c
— Brad Hogg (@Brad_Hogg) July 5, 2021
'ಎಂ.ಎಸ್.ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ರಿಟೈನ್ ಮಾಡಿಕೊಳ್ಳದಿದ್ದರೆ, ಅವರ ಅನುಭವಕ್ಕೆ ಯಾವ ಐಪಿಎಲ್ ಫ್ರಾಂಚೈಸಿ ಭರವಸೆ ನೀಡಲಿದೆ?' ಎಂದು ಅಭಿಮಾನಿಯೋರ್ವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಾಗ್, 'ಧೋನಿ ಫ್ರಾಂಚೈಸಿಗಳ ಮಹಾರಾಜ, ಯಾವುದೇ ಕಾರಣಕ್ಕೂ ಸಿಎಸ್ಕೆ ಫ್ರಾಂಚೈಸಿ ಅವರನ್ನು ಕೈಬಿಡಲ್ಲ ಎಂದಿದ್ದಾರೆ.
ಇದನ್ನೂ ಓದಿರಿ: ಚಾಣಾಕ್ಷ ಆಟಗಾರ ಧೋನಿ... ಮಹತ್ವದ ಟೂರ್ನಿಗಳಲ್ಲಿ ಇವರ ನಿರ್ಧಾರವೇ ಪ್ರಶಸ್ತಿ ಗೆಲುವಿಗೆ ಕಾರಣ!
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಧೋನಿ ನೇತೃತ್ವದ ಐಪಿಎಲ್ ತಂಡ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿರುವ ಧೋನಿ ಸದ್ಯ ಐಪಿಎಲ್ನಲ್ಲಿ ಮಾತ್ರ ಭಾಗಿಯಾಗುತ್ತಿದ್ದಾರೆ.