ETV Bharat / sports

T20I: ಆಸ್ಟ್ರೇಲಿಯಾಕ್ಕೆ ಆಘಾತಕಾರಿ ಸೋಲುಣಿಸಿದ ವೆಸ್ಟ್​ ಇಂಡೀಸ್​

author img

By

Published : Jul 10, 2021, 1:29 PM IST

ವೆಸ್ಟ್​ ಇಂಡೀಸ್ ನೀಡಿದ 146 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 16 ಓವರ್​ಗಳಲ್ಲಿ 127ರನ್​ಗಳಿಗೆ ಆಲೌಟ್ ಆಗುವ ಮೂಲಕ 18ರನ್​ಗಳ ಸೋಲುಕಂಡಿತು. ಮ್ಯಾಥ್ಯು ವೇಡ್(33)​ ಮತ್ತು ಮಿಚೆಲ್ ಮಾರ್ಷ್​ ಅವರ(51) ಹೊರೆತುಪಡಿಸಿ ಉಳಿದ ಬ್ಯಾಟ್ಸ್​ಮನ್​ಗಳು ಆತುರದ ಹೊಡೆತಕ್ಕೆ ಕೈ ಹಾಕಿ ಗೆಲ್ಲುವ ಪಂದ್ಯವನ್ನು ಕಳೆದುಕೊಳ್ಳುವಂತೆ ಮಾಡಿದರು.

ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ
ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ

ಸೇಂಟ್ ಲೂಸಿಯಾ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅತಿಥೇಯ ವೆಸ್ಟ್​ ಇಂಡೀಸ್​ ಕೇವಲ 146 ರನ್​ಗಳ ಗುರಿ ನೀಡಿಯೂ 18 ರನ್​ಗಳ ರೋಚಕ ಗೆಲುವು ಸಾಧಿಸಿದೆ.

ಡೆರೇನ್ ಸಾಮಿ ರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್​ ಇಂಡೀಸ್​ ತಂಡ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು ಕೇವಲ 145 ರನ್​ಗಳಿಸಿತ್ತು.

ಇನ್​ಫಾರ್ಮ್​ ಬ್ಯಾಟ್ಸ್​ಮನ್​ ಎವಿನ್ ಲೂಯೀಸ್​ ಖಾತೆ ತೆರೆಯದೇ ಔಟಾದರೆ, ದೈತ್ಯ ಬ್ಯಾಟ್ಸ್​ಮನ್ ಕ್ರಿಸ್​ ಗೇಲ್ ಕೇವಲ 4 ರನ್​ಗಳಿಗೆ ಔಟಾದರು. ಆರಂಭಿಕ ಬ್ಯಾಟ್ಸ್​ಮನ್​ ಲೆಂಡ್ಲ್​ ಸಿಮೊನ್ಸ್​ 28 ಎಸೆತಗಳಲ್ಲಿ ಕೇವಲ 27 ರನ್​ಗಳಿಸಿದರೆ, ಹೆಟ್ಮಾಯರ್​ 25 ಎಸೆತಗಳಲ್ಲಿ ಕೇವಲ 20 ರನ್​ಗಳಿಸಿ ಔಟಾದರು.

ಒಂದು ಹಂತದಲ್ಲಿ 17 ಓವರ್​ಗಳಲ್ಲಿ 101ಕ್ಕೆ 5 ವಿಕೆಟ್​ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಕೊನೆಯಲ್ಲಿ ಅಬ್ಬರಿಸಿದ ಆ್ಯಂಡ್ರೆ ರೆಸೆಲ್ ಕೇವಲ 28 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 51 ರನ್​ಗಳಿಸಿ ಸ್ಪರ್ದಾತ್ಮಕ ಮೊತ್ತಕ್ಕೆ ಕಾರಣರಾದರು.

ಆಸೀಸ್​ ಪರ ಜೋಶ್ ಹೆಜಲ್​ವುಡ್​ 4 ಓವರ್​ಗಳಲ್ಲಿ 12 ರನ್​ ನೀಡಿ 3 ವಿಕೆಟ್ ಪಡೆದರೆ, ಮಿಚೆಲ್ ಮಾರ್ಷ್​ 26 ರನ್​ ನೀಡಿ 2 ವಿಕೆಟ್ ಪಡೆದರು.

ಇನ್ನು 146 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ 16 ಓವರ್​ಗಳಲ್ಲಿ 127ರನ್​ಗಳಿಗೆ ಆಲೌಟ್ ಆಗುವ ಮೂಲಕ 18ರನ್​ಗಳ ಸೋಲುಕಂಡಿತು. ಮ್ಯಾಥ್ಯು ವೇಡ್(33)​ ಮತ್ತು ಮಿಚೆಲ್ ಮಾರ್ಷ್​ ಅವರ(51) ಹೊರೆತುಪಡಿಸಿ ಉಳಿದ ಬ್ಯಾಟ್ಸ್​ಮನ್​ಗಳು ಆತುರದ ಹೊಡೆತಕ್ಕೆ ಕೈ ಹಾಕಿ ಗೆಲ್ಲುವ ಪಂದ್ಯವನ್ನು ಕಳೆದುಕೊಳ್ಳುವಂತೆ ಮಾಡಿದರು.

ಫಿಂಚ್(4), ಜೋಶ್ ಫಿಲಿಪ್ಪೆ(1), ಹೆನ್ರಿಕ್ಸ್(16), ಬೆನ್ ಮೆಕ್‌ಡರ್ಮೊಟ್ (2) ಕ್ರಿಸ್ಚಿಯನ್ 10 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. 10 ಓವರ್​ಗಳಲ್ಲಿ 107ಕ್ಕೆ4 ವಿಕೆಟ್​ ಕಳೆದುಕೊಂಡಿದ್ದ ಆಸಿಸ್ ಒಬೆಡ್ ಮೆಕಾಯ್​ ಮತ್ತು ಹೇಡನ್ ವಾಲ್ಶ್​ ಅವರ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿ​ 20 ರನ್​ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಘಾತಕಾರಿ ಸೋಲುಂಡಿತು.

ಇದನ್ನು ಓದಿ: Little Master@72.. ಜನ್ಮದಿನದಂದು ಆ ಸತ್ಯ ಬಿಚ್ಚಿಟ್ಟ ಗವಾಸ್ಕರ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.