ಮ್ಯಾಂಚೆಸ್ಟರ್: ಪ್ರವಾಸಿ ಭಾರತ-ಇಂಗ್ಲೆಂಡ್ ನಡುವೆ ಇಂದಿನಿಂದ ಆರಂಭಗೊಳ್ಳಬೇಕಾಗಿದ್ದ 5ನೇ ಟೆಸ್ಟ್ ಪಂದ್ಯ ಕೋವಿಡ್ನಿಂದಾಗಿ ರದ್ಧುಗೊಂಡಿದೆ. ಫೈನಲ್ ಪಂದ್ಯ ಯಾವಾಗ ನಡೆಸಬೇಕು ಎಂಬುದರ ಕುರಿತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ಜೊತೆ ಸೇರಿ ಸಮಾಲೋಚನೆಯಲ್ಲಿ ತೊಡಗಿರುವ ಬಿಸಿಸಿಐ, ಪಂದ್ಯದ ಮರು ವೇಳಾಪಟ್ಟಿ ನಿಗದಿ ಮಾಡಲು ತಯಾರಿ ನಡೆಸುತ್ತಿದೆ.
ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಕೋವಿಡ್ ಸೋಂಕಿತ ಪ್ರಕರಣ ಕಾಣಿಸಿಕೊಳ್ಳುತ್ತಿದ್ದಂತೆ ಫೈನಲ್ ಪಂದ್ಯವನ್ನು ಮುಂದೂಡಿಕೆ ಅಥವಾ ಅಮಾನತು ಮಾಡುವಂತೆ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಬಳಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮನವಿ ಮಾಡಿಕೊಂಡಿತ್ತು. ಆದರೆ ಇದಕ್ಕೆ ಬಿಸಿಸಿಐ ಹಿಂದೇಟು ಹಾಕಿ, ಅಗತ್ಯಬಿದ್ದರೆ ಪಂದ್ಯ ರದ್ಧುಗೊಳಿಸುವುದಾಗಿ ತಿಳಿಸಿತ್ತು. ಅದರಂತೆ ಪಂದ್ಯ ಇದೀಗ ರದ್ದು ಮಾಡಿದೆ.
-
Update: The BCCI and ECB held several rounds of discussion to find a way to play the match, however, the outbreak of Covid-19 in the Indian team contingent forced the decision of calling off the Old Trafford Test.
— BCCI (@BCCI) September 10, 2021 " class="align-text-top noRightClick twitterSection" data="
Details: https://t.co/5EiVOPPOBB
">Update: The BCCI and ECB held several rounds of discussion to find a way to play the match, however, the outbreak of Covid-19 in the Indian team contingent forced the decision of calling off the Old Trafford Test.
— BCCI (@BCCI) September 10, 2021
Details: https://t.co/5EiVOPPOBBUpdate: The BCCI and ECB held several rounds of discussion to find a way to play the match, however, the outbreak of Covid-19 in the Indian team contingent forced the decision of calling off the Old Trafford Test.
— BCCI (@BCCI) September 10, 2021
Details: https://t.co/5EiVOPPOBB
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಬಿಸಿಸಿಐ, ಫೈನಲ್ ಪಂದ್ಯದ ವೇಳಾಪಟ್ಟಿ ಮರು ನಿಗದಿ ಮಾಡುವಂತೆ ನಾವು ಇಸಿಬಿ ಬಳಿ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎರಡು ಮಂಡಳಿಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದೆ.
ಇದನ್ನೂ ಓದಿ: ಸ್ನಾನ ಮಾಡಿ ಗಣೇಶ ಪೂಜೆಗೆ ಹೂ ತರಲು ಅಣೆಕಟ್ಟೆ ನೀರಿಗಿಳಿದ ಮೂವರು ಬಾಲಕಿಯರ ದುರ್ಮರಣ
ಟೀಂ ಇಂಡಿಯಾದ ಜೂನಿಯರ್ ಫಿಜಿಯೋ ಯೋಗೇಶ್ ಪರ್ಮಾರ್ಗೆ ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಎಲ್ಲ ಪ್ಲೇಯರ್ಸ್ಗೆ ಕೊರೊನಾ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಲಾಗಿತ್ತು. ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಕೋವಿಡ್ ಸೋಂಕಿತ ಪ್ರಕರಣ ಮತ್ತಷ್ಟು ಹೆಚ್ಚಾಗುವ ಭೀತಿ ಇರುವ ಕಾರಣ ಇಂದಿನಿಂದ ಆರಂಭಗೊಳ್ಳಬೇಕಾಗಿದ್ದ ಪಂದ್ಯ ಮುಂದೂಡಿಕೆ ಮಾಡಲಾಗಿದೆ.
ಈಗಾಗಲೇ ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಹಾಗೂ ಫಿಸಿಯೋ ನಿತಿನ್ ಪಟೇಲ್ ಅವರಿಗೆ ಕೊರೊನಾ ದೃಢಗೊಂಡಿದ್ದು, 10 ದಿನಗಳ ಕಾಲ ಕ್ವಾರಂಟೈನ್ಗೊಳಗಾಗಿದ್ದಾರೆ.