ETV Bharat / sports

ರೋಹಿತ್​ ಶತಕ, ಜಡೇಜಾ- ಅಕ್ಷರ್​ ಫಿಫ್ಟಿ: ಭಾರತ 7 ವಿಕೆಟ್​ಗೆ 321 ರನ್​ - India Australia test series

ಮೊದಲ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ನಾಯಕ ರೋಹಿತ್​ ಶರ್ಮಾ ಶತಕ ಸಾಧನೆ ಮಾಡಿದರೆ, ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​ ಅರ್ಧಶತಕ ಗಳಿಸಿದರು. ಮೂರನೇ ದಿನದಾಟಕ್ಕೆ ಭಾರತ 321 ರನ್​ ಗಳಿಸಿ, 144 ರನ್​ಗಳ ಮುನ್ನಡೆ ಪಡೆದಿದೆ. ಆಸೀಸ್​ನ ಯುವ ಸ್ಪಿನ್ನರ್​ ಮೊರ್ಪಿ 5 ವಿಕೆಟ್​ ಕಿತ್ತು ಮಿಂಚಿದರು.

IND vs AUS 1st Test
ರೋಹಿತ್​ ಶರ್ಮಾ ಶತಕ
author img

By

Published : Feb 10, 2023, 10:44 AM IST

Updated : Feb 10, 2023, 5:40 PM IST

ನಾಗ್ಪುರ (ಮಹಾರಾಷ್ಟ್ರ): ಬಾರ್ಡರ್​- ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್​ನ ಎರಡನೇ ದಿನದಾಟದ ಅಂತ್ಯಗೊಂಡಿದ್ದು, ಭಾರತ 7 ವಿಕೆಟ್​ಗೆ 321 ರನ್​ ಗಳಿಸಿದೆ. ನಾಯಕ ರೋಹಿತ್​ ಶರ್ಮಾ ಭರ್ಜರಿ ಶತಕ, ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್​ ಪಟೇಲ್​ರ ಅರ್ಧಶತಕ ನೆರವಿನಿಂದ 144 ರನ್​ಗಳ ಮುನ್ನಡೆ ಪಡೆಯಿತು.

ಏಕದಿನದ ಮಾದರಿಯಲ್ಲಿ ಬ್ಯಾಟ್​ ಬೀಸಿದ ನಾಯಕ ರೋಹಿತ್​ ಶರ್ಮಾ ಭರ್ಜರಿ ಶತಕ (120) ಸಿಡಿಸಿದರು. 212 ಎಸೆತಗಳಲ್ಲಿ 15 ಬೌಂಡರಿ 2 ಸಿಕ್ಸರ್​ ಸಮೇತ 120 ರನ್​ ಗಳಿಸಿದರು. ಇದು ಅವರ ಟೆಸ್ಟ್​ನ 9ನೇ ಶತಕವಾಗಿದೆ. ಮೊದಲ ದಿನದಲ್ಲಿ ಕೆಎಲ್​ ರಾಹುಲ್​ 20 ರನ್​ಗೆ ನಿರ್ಗಮಿಸಿದ ಬಳಿಕ ಅಶ್ವಿನ್​ ಜೊತೆ ಕ್ರೀಸ್​ ಉಳಿಸಿಕೊಂಡಿದ್ದ ರೋಹಿತ್​ ದಿನದಾಟ ಆರಂಭಿಸಿದರು. ಉತ್ತಮವಾಗಿ ಆಡುತ್ತಿದ್ದ ಅಶ್ವಿನ್​ ಯುವ ಸ್ಪಿನ್ನರ್​ ಟಾಡ್​ ಮೊರ್ಪೆಯ ಎಲ್​ಬಿ ಬಲೆಗೆ ಬಿದ್ದರು. ಬಳಿಕ ಬಂದ ಟೆಸ್ಟ್​ ಪರಿಣತ ಬ್ಯಾಟ್ಸ್​ಮನ್​ ಚೇತೇಶ್ವರ್ ಪೂಜಾರಾ 7 ರನ್​ಗೆ ಔಟಾದರು.

ಏಕದಿನದಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ಬ್ಯಾಟಿಂಗ್​ ಕಿಂಗ್ ವಿರಾಟ್​ ಕೊಹ್ಲಿ 12 ರನ್​ಗೆ ವಿಕೆಟ್​ ನೀಡಿ ನಿರಾಸೆ ಮೂಡಿಸಿದರು. ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಟಿ20 ನಂಬರ್​ 1 ಬ್ಯಾಟರ್​ ಸೂರ್ಯಕುಮಾರ್​ ಯಾದವ್​ 8 ರನ್​ ಪೆವಿಲಿಯನ್​ ಸೇರಿದರೆ, ವಿಕೆಟ್​ ಕೀಪರ್​ ಶ್ರೀಕರ್ ಭರತ್​ ಕೂಡ ಗಳಿಸಿದ್ದು 8 ರನ್​. ಒಂದರ ಹಿಂದೆ ವಿಕೆಟ್​ ಕಳೆದುಕೊಂಡ ಭಾರತ ತುಸು ಒತ್ತಡಕ್ಕೆ ಸಿಲುಕಿತು.

ಅಕ್ಷರ್​ ಪಟೇಲ್​- ಜಡೇಜಾ ಜುಗಲ್​ಬಂಧಿ: ರೋಹಿತ್​ ಹೊರತಾಗಿ ಉಳಿದ ಬ್ಯಾಟರ್​ಗಳು ​​ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದರು. ರೋಹಿತ್​ ಔಟಾದ ಬಳಿಕ ಜೊತೆಗೂಡಿದ ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್​ ಪಟೇಲ್​ ಇನಿಂಗ್ಸ್​ ಮುನ್ನಡೆಸಿದರು. ರವೀಂದ್ರ ಜಡೇಜಾ 170 ಎಸೆತಗಳಲ್ಲಿ 66 ರನ್​ ಗಳಿಸಿದರೆ, ಅಕ್ಷರ್​ ಪಟೇಲ್​ 102 ಬಾಲ್​ಗಳಲ್ಲಿ 52 ರನ್​ ಮಾಡಿದರು. ಇಬ್ಬರೂ 80 ರನ್​ಗಳ ಜೊತೆಯಾಟ ನೀಡಿದ್ದಲ್ಲದೇ ನಾಳೆಗೆ ವಿಕೆಟ್​ ಕಾಯ್ದಕೊಂಡಿದ್ದಾರೆ.

ಜಡೇಜಾ ವಿಶೇಷ ದಾಖಲೆ: ಗಾಯದಿಂದ ಚೇತರಿಸಿಕೊಂಡು 5 ತಿಂಗಳ ಬಳಿಕ ಕ್ರಿಕೆಟ್​ಗೆ ಮರಳಿರುವ ರವೀಂದ್ರ ಜಡೇಜಾ ಆಸೀಸ್​ಗೆ ಮುಳುವಾದರು. ಮೊದಲ ದಿನದಲ್ಲಿ ಸ್ಪಿನ್​ ಅಸ್ತ್ರದ ಮೂಲಕ ಕಾಡಿದ ಜಡ್ಡು 5 ವಿಕೆಟ್​ ಪಡೆದಿದ್ದರು. ಬ್ಯಾಟಿಂಗ್​ನಲ್ಲೂ ಕಮಾಲ್​ ಮಾಡಿ ಅರ್ಧಶತಕ ಸಿಡಿಸಿದರು. ಈ ಮೂಲಕ ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ದಾಖಲೆ ಮುರಿದರು. ಪಂದ್ಯವೊಂದರಲ್ಲಿ 5 ಬಾರಿ 5 ವಿಕೆಟ್​ ಜೊತೆಗೆ ಅರ್ಧಶತಕ ಗಳಿಸಿದ ಸಾಧನೆ ಜಡೇಜಾ ಮಾಡಿದರೆ, ಕಪಿಲ್​ ದೇವ್​ 4 ಬಾರಿ ಈ ಸಾಧನೆ ಮಾಡಿದ್ದರು.

ರೋಹಿತ್​ ದಾಖಲೆ: ಮೂರು ಮಾದರಿಯಲ್ಲೂ ನಾಯಕನಾಗಿ ಶತಕ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಮತ್ತು ವಿಶ್ವದ ನಾಲ್ಕನೇ ಆಟಗಾರ ಎಂಬ ದಾಖಲೆಯನ್ನು ರೋಹಿತ್​ ಶರ್ಮಾ ತಮ್ಮ ಹೆಸರಿಗೆ ಬರೆದುಕೊಂಡರು. ಇದಕ್ಕೂ ಮೊದಲು ಪಾಕಿಸ್ತಾನದ ಬಾಬರ್​ ಅಜಂ, ದಕ್ಷಿಣ ಆಫ್ರಿಕಾದ ಫಾಫ್​ ಡು ಪ್ಲೆಸಿಸ್​ ಮತ್ತು ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್​ ಮೂರು ಮಾದರಿಯಲ್ಲಿ ಶತಕ ಸಾಧನೆ ಮಾಡಿದವರು.

ಆಸೀಸ್​ನ ಮೊರ್ಪಿ ವಿಶೇಷ ಗೌರವ: ಇನ್ನು, ಆಸ್ಟ್ರೇಲಿಯಾದ ಯುವ ಸ್ಪಿನ್ನರ್​ ಟಾಡ್​ ಮೊರ್ಪಿ ಕೂಡ ವಿಶೇಷ ದಾಖಲೆ ಬರೆದರು. ಪದಾರ್ಪಣೆ ಪಂದ್ಯದಲ್ಲೇ 5 ವಿಕೆಟ್​ ಕಿತ್ತ ಕಾಂಗರೂ ನಾಡಿನ 4ನೇ ಆಟಗಾರರಾದರು. ಇದಕ್ಕೂ ಮೊದಲು 1986-87ರಲ್ಲಿ ಪೀಟರ್​ ಟೈಲರ್​, 2008-09 ರಲ್ಲಿ ಜಾಸನ್​ ಕ್ರೇಜಾ, 2011 ರಲ್ಲಿ ನಾಥನ್​​ ಲಿಯಾನ್​ ಈ ದಾಖಲೆ ಮಾಡಿದ್ದರು.

ಇದನ್ನೂ ಓದಿ :ಮೊದಲ ಟೆಸ್ಟ್, ಮೊದಲ ದಿನದಾಟ ಅಂತ್ಯ: ಜಡೇಜಾ ಆರ್ಭಟಕ್ಕೆ ಆಸೀಸ್​ ತತ್ತರ, ರೋಹಿತ್​ ಸ್ಫೋಟಕ ಬ್ಯಾಟಿಂಗ್​

Last Updated : Feb 10, 2023, 5:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.