ETV Bharat / sports

ಪ್ಯಾಟ್​ ಕಮಿನ್ಸ್​ ನಾಯಕತ್ವ ತ್ಯಜಿಸಲಿ: ಮಾಜಿ ಕ್ರಿಕೆಟಿಗ ಇಯಾನ್ ಹೀಲಿ

ಪ್ಯಾಟ್​ ಕಮಿನ್ಸ್​ಗೆ ನಾಯಕತ್ವ ತ್ಯಜಿಸಲು ಮಾಜಿ ಕ್ರಿಕೆಟಿಗ ಸಲಹೆ - ಆಸಿಸ್ ನಾಯಕತ್ವ ಟ್ರಾವಿಸ್ ಹೆಡ್​ಗೆ ನೀಡಿ ಎಂದು ಮಾಜಿ ವಿಕೆಟ್​ ಕೀಪರ್​ ಮಾರ್ಗದರ್ಶನ - ಪ್ಯಾಟ್​ ಕಮಿನ್ಸ್​ ಹೆಚ್ಚು ಬೌಲಿಂಗ್​ಗೆ ಕೇಂದ್ರೀಕರಿಸಬೇಕು ಎಂಬ ಅಭಿಪ್ರಾಯ

Pat Cummins
ಪ್ಯಾಟ್​ ಕಮಿನ್ಸ್​
author img

By

Published : Feb 25, 2023, 11:39 AM IST

ನವದೆಹಲಿ:"ಐಸಿಸಿ ರ್‍ಯಾಂಕಿಂಗ್​ನಲ್ಲಿ ಪ್ಯಾಟ್​ ಕಮಿನ್ಸ್​​ ಈ ವರ್ಷದ ಆರಂಭದಲ್ಲಿ ಮೊದಲ ಸ್ಥಾನದಲ್ಲಿದ್ದರು ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು ನಾಯಕತ್ವ ತೊರೆದು ಬೌಲಿಂಗ್​ನಲ್ಲಿ ಹೆಚ್ಚು ಗಮನ ಇಡುವುದ ಉತ್ತಮ" ಎಂದು ಆಸ್ಟ್ರೇಲಿಯಾದ ಮಾಜಿ ಶ್ರೇಷ್ಠ ವಿಕೆಟ್ ಕೀಪರ್​ ಇಯಾನ್ ಹೀಲಿ ಹೇಳಿದ್ದಾರೆ.

ಕಮ್ಮಿನ್ಸ್ ಅವರನ್ನು 2021 ರ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದ ಟೆಸ್ಟ್ ನಾಯಕರಾಗಿ ನೇಮಿಸಲಾಯಿತು. ಕಳೆದ ವರ್ಷದ ಕೊನೆಯಲ್ಲಿ ಆರನ್ ಫಿಂಚ್ ನಿವೃತ್ತರಾದಾಗ ಏಕದಿನ ನಾಯಕರಾಗಿ ನೇಮಕಗೊಂಡರು. ಇತ್ತಿಚೆಗೆ ಐಸಿಸಿ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಪ್ರಭಾವಿ ಬೌಲಿಂಗ್​ನಿಂದ ಪ್ಯಾಟ್​ ಕಮಿನ್ಸ್​ ಅವರನ್ನು ಕಳೆಗೆ ತಳ್ಳಿದ್ದಾರೆ. ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಎರಡು ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್​ ಮಾಡಿದ ಅಶ್ವಿನ್​ ಎರಡನೇ ರ್‍ಯಾಂಕಿಂಗ್​ನಲ್ಲಿದ್ದಾರೆ.

ತಾಯಿಗೆ ಗಂಭೀರ ಅನಾರೋಗ್ಯದ ಹಿನ್ನೆಲೆ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೂರನೇ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ಗೆ ಕಮಿನ್ಸ್​ ಅಲಭ್ಯರಾಗಿದ್ದಾರೆ. ಪ್ರಸ್ತುತ 2-0 ಹಿನ್ನಡೆಯಲ್ಲಿರುವ ಆಸ್ಟ್ರೇಲಿಯಾದ ಸರಣಿಯಲ್ಲಿ ಮತ್ತೆ ಕಮ್​ಬ್ಯಾಕ್​ ಮಾಡುವ ಭರವಸೆ ಇದೆ. ಗ್ರೀನ್​ ಅವರು ಮೂರನೇ ಟೆಸ್ಟ್​ಗೆ ತಂಡಕ್ಕೆ ಸೇರ್ಪಡೆ ಆಗುವುದು ಖಚಿತವಾಗಿದೆ.

"ಪ್ಯಾಟ್​ ಕಮಿನ್ಸ್​ ಹೆಚ್ಚು ಕಾಲ ನಾಯಕತ್ವದ ಹೊರೆಯನ್ನು ಹೊತ್ತುಕೊಳ್ಳುವುದನ್ನು ನಾನು ಬಯಸುವುದಿಲ್ಲ. ಕಮಿನ್ಸ್​ ಕೇವಲ ಬೌಲರ್​ ಆಗಿ ಮುಂದುವರೆಯುವುದನ್ನು ಬಯಸುತ್ತೇನೆ. ದೀರ್ಘ ಕಾಲ ನಾಯಕತ್ವ ವಹಿಸುವುದರಿಂದ ಒತ್ತಡದಲ್ಲಿ ಬೌಲಿಂಗ್​ನ ನಿರ್ವಹಣೆ ಕಷ್ಟವಾಗಲಿದೆ. ನಾಲ್ಕರಿಂದ ಐದು ವರ್ಷಗಳು ನಾಯಕನಾಗಿ ಮುಂದುವರೆದರೆ ಉತ್ತಮ ಬೌಲಿಂಗ್​ ಅನ್ನು ಕಳೆದುಕೊಳ್ಳ ಬೇಕಾಗಬಹುದು" ಎಂದು ಇಯಾನ್ ಹೀಲಿ ಹೇಳಿದ್ದಾರೆ.

"ಈಗಾಗಲೇ ಟಸ್ಟ್​ನಲ್ಲಿ ವರ್ಷಗಳಷ್ಟು ಸಮಯ ನಾಯಕತ್ವ ನಿರ್ವಹಿಸಿದ್ದಾರೆ. ಮುಂದೆ ಏಕದಿನ ಹಾಗೂ ಟಿ-20ಯ ನಾಯಕತ್ವವೂ ಸಿಗುವ ಸಾಧ್ಯತೆ ಇದೆ. ಕೌಟುಂಬಿಕ ಕಾರಣದಿಂದ ಮೂರನೇ ಟೆಸ್ಟ್​ನಿಂದ ದೂರ ಉಳಿದಿರುವ ಕಮಿನ್ಸ್​, ಮುಂದೆಯೂ ದೂರ ಉಳಿಯವಂತೆ ಸಲಹೆ ನೀಡುತ್ತೇನೆ. ನಾಯಕತ್ವದ ಹೊರೆಯಿಂದ ದೂರ ಆಗಿ ಕೇವಲ ಬೌಲರ್​ ಆಗಿ ತಮ್ಮ ವೃತ್ತಿ ಜೀವನದ ಅಂತ್ಯದ ವರೆಗೆ ಆಡಲಿ ಎಂದು ಆಶಿಸುತ್ತೇನೆ" ಎಂದು ಇಯಾನ್​ ಸಲಹೆ ನೀಡಿದ್ದಾರೆ.

2.73 ಎಕಾನಮಿಯಲ್ಲಿ ಬೌಲಿಂಗ್​ ಮಾಡುತ್ತಿರುವ ಕಮಿನ್ಸ್​ 49 ಪಂದ್ಯಗಳಲ್ಲಿ 90 ಇನ್ನಿಂಗ್ಸ್​ನಿಂದ 217 ವಿಕೆಟ್​ ಗಳಿಸಿದ್ದಾರೆ. 8 ಬಾರಿ ಐದು ವಿಕೆಟ್​ ಮತ್ತು ಒಂದು ಭಾರಿ 10 ವಿಕೆಟ್​ ಗಳಿಸಿದ್ದಾರೆ. ಟೆಸ್ಟ್​ ಬ್ಯಾಟಿಂಗ್​ನಲ್ಲಿ 41.8ರ ಸರಾಸರಿಯಲ್ಲಿ ಬ್ಯಾಟ್​ ಬೀಸಿ 67 ಇನ್ನಿಂಗ್ಸ್​ನಲ್ಲಿ 924 ರನ್​ಗಳಿಸಿದ್ದಾರೆ. ಎರಡು ಅರ್ಧ ಶತಕ ಅವರ ಬ್ಯಾಟ್​ನಿಂದ ಬಂದಿದೆ.

ಕಮಿನ್ಸ್​ ಬದಲಾಗಿ ಯಾರು ನಾಯಕತ್ವ ವಹಿಸಬಹದು ಎಂಬ ಪ್ರಶ್ನೆಗೆ ಹೀಲಿ, ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ಸೂಕ್ತ ಅಭ್ಯರ್ಥಿ ಎಂದು ಹೇಳಿದ್ದಾರೆ. "ಟ್ರಾವಿಸ್ ಹೆಡ್ ಸಾಕಷ್ಟು ಸಮರ್ಥ ಎಂದು ನಾನು ಭಾವಿಸುತ್ತೇನೆ. ಅವರು 21 ವರ್ಷ ವಯಸ್ಸಿನಿಂದಲೂ ದಕ್ಷಿಣ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದಾರೆ, ಅವರು ಸಾಕಷ್ಟು ಸಮರ್ಥರಾಗಿದ್ದಾರೆ ಮತ್ತು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಅವರು ನನಗೆ ಎದ್ದು ಕಾಣುವ ಪ್ರಮುಖರು" ಎಂದಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿರುವ ಇಯಾನ್​, "ಮ್ಯಾಕ್ಸ್‌ವೆಲ್ ಚುಟುಕು ಟಿ20 ಪಂದ್ಯಗಳಿಗೆ ನಾಯಕತ್ವ ವಹಿಸಬಲ್ಲರು. ಆದರೆ ಟಸ್ಟ್​ ಮಾದರಿ ಕ್ರಿಕೆಟ್​ಗೆ ಟ್ರಾವಿಸ್ ಹೆಡ್ ಹೊರತುಪಡಿಸಿ ಮತ್ತಾರು ಆಸಿಸ್ ತಂಡದಲ್ಲಿ ಕಂಡು ಬರುವುದಿಲ್ಲ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾರ್ಡರ್​ - ಗವಾಸ್ಕರ್​ ಟ್ರೋಫಿ: ಮೂರನೇ ಟೆಸ್ಟ್‌ಗೆ ಕ್ಯಾಮರೂನ್ ಗ್ರೀನ್ ಫಿಟ್, ಆಸಿಸ್​ಗೆ ಆಸರೆಯಾಗಿದ್ದಾರೆ ಆಲ್​ರೌಂಡರ್​​​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.