ETV Bharat / sports

ಭುವನೇಶ್ವರ್ ಕುಮಾರ್ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ಭಾರತೀಯ ವೇಗಿ - ಸನ್​ರೈಸರ್ಸ್ ಹೈದರಾಬಾದ್​ vs ಪಂಜಾಬ್ ಕಿಂಗ್ಸ್

ಭುವನೇಶ್ವರ್ ವೇಗವಾಗಿ 150 ವಿಕೆಟ್ ಪಡೆದ 4ನೇ ಬೌಲರ್ ಎನಿಸಿಕೊಂಡರು. ಲಸಿತ್​ ಮಾಲಿಂಗ 105 ಪಂದ್ಯಗಳಲ್ಲಿ 150 ವಿಕೆಟ್ ಪೂರ್ಣಗೊಳಿಸಿ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಹೊಂದಿದ್ದಾರೆ. ಇವರ ನಂತರ ಚಹಲ್​ 118 ಪಂದ್ಯಗಳಲ್ಲಿ, ಡ್ವೇನ್ ಬ್ರಾವೋ137, ಅಮಿತ್ ಮಿಶ್ರಾ 140, ಪಿಯುಷ್ ಚಾವ್ಲಾ 156, ಹರ್ಭಜನ್ ಸಿಂಗ್ 159 ಪಂದ್ಯಗಳಲ್ಲಿ 150 ವಿಕೆಟ್​ ಪಡೆದಿದ್ದಾರೆ..

Bhuvneshwar Kumar becomes first Indian pacer to take 150 wickets
ಭುವನೇಶ್ವರ್ ಕುಮಾರ್ 150 ವಿಕೆಟ್ಸ್​
author img

By

Published : Apr 17, 2022, 7:17 PM IST

ಮುಂಬೈ : ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಮಿಂಚಿದ ಸನ್​ರೈಸರ್ಸ್ ಹೈದರಾಬಾದ್ ತಂಡ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್, ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ ಮೊದಲ ಭಾರತೀಯ ವೇಗಿ ಎನಿಸಿಕೊಂಡಿದ್ದಾರೆ. ಮುಂಬೈನ ಡಿವೈ ಪಾಟೀಲ್ ಸ್ಫೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್, ಶಿಖರ್ ಧವನ್​(8), ಲಿಯಾಮ್ ಲಿವಿಂಗ್​ ಸ್ಟೋನ್(60) ಮತ್ತು ಶಾರುಖ್ ಖಾನ್(26) ವಿಕೆಟ್ ಪಡೆಯುವ ಮೂಲಕ ಐಪಿಎಲ್​ನಲ್ಲಿ 150 ವಿಕೆಟ್ ಪೂರೈಸಿದರು.

ಭುವನೇಶ್ವರ್​ ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ ಮೊದಲ ಭಾರತೀಯ ವೇಗಿ ಹಾಗೂ ಒಟ್ಟಾರೆ 6ನೇ ಬೌಲರ್ ಎನಿಸಿಕೊಂಡರು. ಭುವಿಗೂ ಮೊದಲು ಡ್ವೇನ್ ಬ್ರಾವೋ(174), ಲಿಸಿತ್ ಮಾಲಿಂಗ(170),ಅಮಿತ್ ಮಿಶ್ರಾ(166), ಪಿಯುಷ್ ಚಾವ್ಲಾ(157), ಯುಜ್ವೇಂದ್ರ ಚಹಲ್(151), ಹರ್ಭಜನ್ ಸಿಂಗ್ (150) ಈ ಮೈಲುಗಲ್ಲು ನಿರ್ಮಿಸಿದ್ದರು.

ಭುವನೇಶ್ವರ್ ವೇಗವಾಗಿ 150 ವಿಕೆಟ್ ಪಡೆದ 4ನೇ ಬೌಲರ್ ಎನಿಸಿಕೊಂಡರು. ಲಸಿತ್​ ಮಾಲಿಂಗ 105 ಪಂದ್ಯಗಳಲ್ಲಿ 150 ವಿಕೆಟ್ ಪೂರ್ಣಗೊಳಿಸಿ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಹೊಂದಿದ್ದಾರೆ. ಇವರ ನಂತರ ಚಹಲ್​ 118 ಪಂದ್ಯಗಳಲ್ಲಿ, ಡ್ವೇನ್ ಬ್ರಾವೋ137, ಅಮಿತ್ ಮಿಶ್ರಾ 140, ಪಿಯುಷ್ ಚಾವ್ಲಾ 156, ಹರ್ಭಜನ್ ಸಿಂಗ್ 159 ಪಂದ್ಯಗಳಲ್ಲಿ 150 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ:0 W 0 W W W! 20ನೇ ಓವರ್​ನಲ್ಲಿ ಒಂದೂ ರನ್​ ನೀಡದೆ 4 ವಿಕೆಟ್​ ಕಿತ್ತ ಉಮ್ರಾನ್ ಮಲಿಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.