ಸೌತಾಂಪ್ಟನ್ (ಇಂಗ್ಲೆಂಡ್): ವಿಶ್ವದ ಅತ್ಯುತ್ತಮ ಟೆಸ್ಟ್ ತಂಡವನ್ನು ಅತ್ಯುತ್ತಮ-ಮೂರು ಪಂದ್ಯಗಳಿಂದ ನಿರ್ಧರಿಸಬೇಕೇ ಹೊರತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಂತಹ ಒನ್-ಆಫ್ ಪಂದ್ಯದಿಂದಲ್ಲ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಗೆದ್ದಿದ್ದ ಭಾರತ ಸೌತಾಂಪ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸೋತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ಕೋಚ್ ರವಿಶಾಸ್ತ್ರಿಯವರ ಅಭಿಪ್ರಾಯವನ್ನು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಹೆಸರು ಪ್ರಸ್ತಾಪಿಸದೆ ಈ ಆಟಗಾರನ ವಿರುದ್ಧ ಕೊಹ್ಲಿ ಪರೋಕ್ಷ ಅಸಮಾಧಾನ
ಒಂದೇ ಪಂದ್ಯದ ಅವಧಿಯಲ್ಲಿ ವಿಶ್ವದ ಅತ್ಯುತ್ತಮ ಟೆಸ್ಟ್ ತಂಡವನ್ನು ನಿರ್ಧರಿಸುವುದನ್ನು ನಾನು ಒಪ್ಪುವುದಿಲ್ಲ. ಇದಕ್ಕಾಗಿ ಕೇವಲ ಎರಡು ದಿನಗಳ ಕಾಲ ಒತ್ತಡ ಹೇರಲು ಸಾಧ್ಯವಿಲ್ಲ. ಇದು ಟೆಸ್ಟ್ ಸರಣಿಯಾಗಿದ್ದರೆ, ಮೂರು ಪಂದ್ಯಗಳನ್ನು ಆಡಿಸಬೇಕು. ಆಗ ಮಾತ್ರ ಯಾವ ತಂಡ ಸರಣಿ ಗೆಲ್ಲುತ್ತದೆ ಎಂಬುದು ತಿಳಿಯುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್ ಕಿರೀಟಕ್ಕೆ ಮುತ್ತಿಟ್ಟ ನ್ಯೂಜಿಲೆಂಡ್; ಮುಗ್ಗರಿಸಿದ ಟೀಂ ಇಂಡಿಯಾ
ಮೂರು ಪಂದ್ಯಗಳ ಕೊನೆಯಲ್ಲಿ ಪ್ರಯತ್ನಗಳಿರುತ್ತದೆ, ಏರಿಳಿತಗಳಿರುತ್ತದೆ, ಸರಣಿಯ ಅವಧಿಯಲ್ಲಿ ಪರಿಸ್ಥಿತಿಗಳು ಬದಲಾಗುತ್ತಿವೆ. ಮೊದಲ ಪಂದ್ಯದಲ್ಲಿ ನೀವು ಮಾಡಿದ ತಪ್ಪನ್ನು ಸರಿಪಡಿಸಲು ಅವಕಾಶವಿರುತ್ತದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕಳೆದ 18 ತಿಂಗಳುಗಳಲ್ಲಿ ಮಾತ್ರವಲ್ಲ, ಟೆಸ್ಟ್ ತಂಡವಾಗಿ ನಾವು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಏನು ಮಾಡಿದ್ದೇವೆ ಎನ್ನುವುದು ಮುಖ್ಯವಾಗಿದೆ ಎಂಬುದು ಅವರ ಅಭಿಪ್ರಾಯ.