ETV Bharat / sports

ಟಿ-20 ವಿಶ್ವಕಪ್: ಸ್ಕಾಟ್ಲೆಂಡ್​ಗೆ ಸತತ 2ನೇ ಜಯ, ಸೂಪರ್​ 12 ಆಸೆಗೆ ಮತ್ತಷ್ಟು ಬಲ - ರಿಚಿ ಬ್ಯಾರಿಂಗ್ಟನ್

ಮಂಗಳವಾರ ಅಲ್ ಅಮೆರಾತ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್​ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್​ಗಳಿಸಿತ್ತು. ಪಿಎನ್​ಜಿ 19.3 ಓವರ್​ಗಳಲ್ಲಿ 148 ರನ್​ಗಳಿಗೆ ಆಲೌಟ್ ಆಗುವ ಮೂಲಕ 17ರನ್​ಗಳ ಸೋಲು ಕಂಡಿತು.

Scotland to 17-run win over PNG in T20 World Cup
ಟಿ20 ವಿಶ್ವಕಪ್ ಕ್ವಾಲಿಫೈಯರ್
author img

By

Published : Oct 19, 2021, 8:13 PM IST

ಅಲ್ ಅಮೆರಾತ್: ಪಿಎನ್​ಜಿ(ಪಪುವಾ ನ್ಯೂ ಗಿನಿ) ವಿರುದ್ಧ ಆಲ್​ರೌಂಡ್ ಪ್ರದರ್ಶನ ತೋರಿದ ಸ್ಕಾಟ್ಲೆಂಡ್ ವಿಶ್ವಕಪ್​ ಕ್ವಾಲಿಫೈಯರ್​ನಲ್ಲಿ ಸತತ ಎರಡನೇ ಜಯ ಸಾಧಿಸಿ ಸೂಪರ್​ 12ಕ್ಕೆ ಮತ್ತಷ್ಟು ಹತ್ತಿರವಾಗಿದೆ.

ಮಂಗಳವಾರ ಅಲ್ ಅಮೆರಾತ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್​ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್​ಗಳಿಸಿತ್ತು. ರಿಚಿ ಬ್ಯಾರಿಂಗ್ಟನ್​ 49 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 70 ರನ್​ಗಳಿಸಿದರೆ, ವಿಕೆಟ್ ಕಿಪರ್ ಮ್ಯಾಟ್​ ಕ್ರಾಸ್​ 36 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ಗಳ ನೆರವಿನಿಂದ 45 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದ ಬ್ಯಾಟರ್​ಗಳು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಮುನ್ಸಿ 15, ಕೊಯೆಟ್ಜರ್ 6, ಮ್ಯಾಕ್ಲಿಯೋಡ್ 10, ಲೀಸ್ಕ್​ 9, ಕ್ರಿಸ್ ಗ್ರೀವ್ಸ್​ 2 ರನ್​ಗೆ ವಿಕೆಟ್ ಒಪ್ಪಿಸಿದರು.

ಪಿಎನ್​ಜಿ ಪರ ಕಬುವಾ ಮೊರೆಯಾ 31ಕ್ಕೆ4, ಚಾಡ್​ ಸೋಪರ್ 24ಕ್ಕೆ 3 ವಿಕೆಟ್ ಪಡೆದಿದ್ದರು. 166 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಿಎನ್​ಜಿ 19.3 ಓವರ್​ಗಳಲ್ಲಿ 148ರನ್​ಗಳಿಗೆ ಆಲೌಟ್ ಆಗುವ ಮೂಲಕ 17ರನ್​ಗಳ ಸೋಲು ಕಂಡಿತು.

ನಾರ್ಮನ್​ ವನುವಾ 37 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 47ರನ್​ ಮತ್ತು ಸೇಸೆ ಬಾವ್​ 24 ರನ್​ಗಳಿಸಿದ್ದು, ಬಿಟ್ಟರೆ ಬೇರೆ ಯಾವ ಬ್ಯಾಟರ್ 20ರ ಗಡಿ ದಾಟಲು ವಿಫಲರಾದರು. ಸ್ಕಾಟ್ಲೆಂಡ್​ನ ಜೋಶ್​ ಡೇವಿ 18ರನ್​ ನೀಡಿ 4 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.