ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಗ್ರೂಪ್ ಹಂತ ಮುಕ್ತಾಯವಾಗಿದ್ದು, ಕರ್ನಾಟಕ ತಂಡ ಫ್ರೀ ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟಿದೆ.
ಸತತ ನಾಲ್ಕು ಗೆಲುವು ಕಂಡಿದ್ದ ಕರ್ನಾಟಕ ತಂಡ ಇಂದು ಬಂಗಾಳ ತಂಡದ ವಿರುದ್ಧ ಸೋಲುವ ಮೂಲಕ ಕ್ವಾರ್ಟರ್ ಫೈನಲ್ ಬದಲು ಪ್ರೀ ಕ್ವಾರ್ಟರ್‌ಫೈನಲ್ ಹಂತಕ್ಕೆ ಎಂಟ್ರಿ ಕೊಟ್ಟಿದೆ.
-
🚨 QUALIFIED FOR THE KNOCKOUTS 🚨
— kscaofficial (@kscaofficial1) November 9, 2021 " class="align-text-top noRightClick twitterSection" data="
A brilliant effort from the boys but Bengal turned out to be the better team today! 🤜🏼🤛🏼
Now, time to rest, recover and reenergize before we meet again for the Knock-outs 🤩🔋#KSCA #Karnataka #Cricket #SyedMushtaqAliTrophy #BCCI #Domestic pic.twitter.com/HIuMngMVZG
">🚨 QUALIFIED FOR THE KNOCKOUTS 🚨
— kscaofficial (@kscaofficial1) November 9, 2021
A brilliant effort from the boys but Bengal turned out to be the better team today! 🤜🏼🤛🏼
Now, time to rest, recover and reenergize before we meet again for the Knock-outs 🤩🔋#KSCA #Karnataka #Cricket #SyedMushtaqAliTrophy #BCCI #Domestic pic.twitter.com/HIuMngMVZG🚨 QUALIFIED FOR THE KNOCKOUTS 🚨
— kscaofficial (@kscaofficial1) November 9, 2021
A brilliant effort from the boys but Bengal turned out to be the better team today! 🤜🏼🤛🏼
Now, time to rest, recover and reenergize before we meet again for the Knock-outs 🤩🔋#KSCA #Karnataka #Cricket #SyedMushtaqAliTrophy #BCCI #Domestic pic.twitter.com/HIuMngMVZG
ಇಂದು ಬಂಗಾಳ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 7 ವಿಕೆಟ್ಗಳ ಅಂತರದಿಂದ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಕರ್ನಾಟಕ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್ಗಳಸಲಷ್ಟೇ ಶಕ್ತವಾಯಿತು.
ಕರ್ನಾಟಕ ಪರ ಓಪನರ್ ಆಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕಲ್ ತಂಡಕ್ಕೆ ಬದ್ದ ಬುನಾದಿ ಹಾಕಿ ಕೊಡುವಲ್ಲಿ ಎಡವಿದರು. ಪಡಿಕಲ್ ಡಕ್ ಔಟ್ ಆದರೆ ಮಯಾಂಕ್ ಕೇವಲ 4 ರನ್ಗಳಿಸಿದರು.
ಇವರ ವಿಕೆಟ್ ನಂತರ ಒಂದಾದ ನಾಯಕ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಜೋಡಿ 72 ರನ್ಗಳ ಜೊತೆಯಾಟವಾಡಿತು. ಪಾಂಡೆ 23 ರನ್ಗಳಿಸಿ ಔಟಾದರೆ, ನಾಯರ್ 44 ರನ್ಗಳಿಸಿ ಔಟಾದರು. ಅಂತಿಮವಾಗಿ ಕರ್ನಾಟಕ ತಂಡ 20ಓವರ್ಗಳಲ್ಲಿ 134 ರನ್ಗಳಿಸಿತು.
ಈ ಗುರಿ ಬೆನ್ನಟ್ಟಿದ ಬಂಗಾಳ ತಂಡ ಕೇವಲ 3 ವಿಕೆಟ್ ಕಳೆದುಕೊಂಡು 18 ಓವರ್ಗಳಲ್ಲಿಯೇ ಗುರಿ ಮುಟ್ಟಿತು. ಈ ಮೊತ್ತವನ್ನು ಬಂಗಾಳ ಎರಡು ಓವರ್ ಇರುವಂತೆ ಯಶಸ್ವಿಯಾಗಿ ಚೇಸ್ ಮಾಡಿತು. ಬಂಗಾಳ ತಂಡ ಉತ್ತಮ ರನ್ ರೇಟ್ ಆಧಾರದ ಮೇಲೆ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.
ಮಹಾರಾಷ್ಟ್ರ, ಬಂಗಾಳ, ರಾಜಸ್ಥಾನ್, ಗುಜರಾತ್ ಮತ್ತು ಹೈದರಾಬಾದ್ ತಂಡಗಳು ನೇರ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರೆ, ತಮಿಳುನಾಡು, ಕರ್ನಾಟಕ, ಹಿಮಾಚಲ ಪ್ರದೇಶ, ವಿದರ್ಭ, ಸೌರಾಷ್ಟ್ರ ಮತ್ತು ಮಧ್ಯ ಪ್ರದೇಶ ತಂಡಗಳು ಪ್ರೀ ಕ್ವಾರ್ಟರ್‌ಫೈನಲ್ ಹಂತ ತಲುಪಿವೆ. ನವೆಂಬರ್ 16 ರಂದು ಕರ್ನಾಟಕ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.
ನವೆಂಬರ್ 16ರಂದು ಮೂರು ಪ್ರೀಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ನ. 18ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ನ. 20ಕ್ಕೆ ಸೆಮಿಫೈನಲ್ ಹಾಗೂ ನ. 22ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ.
ನ. 16ರಂದು ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು:
1) ತಮಿಳುನಾಡು vs ವಿದರ್ಭಾ
2) ಕರ್ನಾಟಕ vs ಸೌರಾಷ್ಟ್ರ
3) ಹಿಮಾಚಲ ಪ್ರದೇಶ vs ಮಧ್ಯ ಪ್ರದೇಶ
ನ. 18ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯಗಳು:
1) ಮಹಾರಾಷ್ಟ್ರ vs TBD
2) ಬಂಗಾಳ vs TBD
3) ರಾಜಸ್ಥಾನ್ vs TBD
4) ಗುಜರಾತ್ vs ಹೈದರಾಬಾದ್