ಲಂಡನ್ : ಪಾಕಿಸ್ತಾನ ವಿರುದ್ಧದ ಮೂರು ಏಕದಿನ ಸರಣಿಗೆ ನನ್ನನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿರುವ ಇಂಗ್ಲೆಂಡ್ ತಂಡದ ಆಡಳಿತ ಮಂಡಳಿಯ ನಿರ್ಧಾರ ಕೇಳಿ ನನ್ನ ಪತ್ನಿ ಗೊಂದಲಕ್ಕೊಳಗಾಗಿದ್ದಳು ಎಂದು ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ.
"ಕರೆ ಮಾಡಿದ ಸ್ವಲ್ಪ ಸಮಯದ ಬಳಿಕ ನನ್ನ ಪತ್ನಿ ಸ್ಕ್ರೀನ್ ಶಾಟ್ ಒಂದನ್ನು ಕಳಿಸಿದಳು. ಅದರಲ್ಲಿ 'ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಅನ್ನು ಹೊರದಬ್ಬುವುದಿಲ್ಲ' ('England aren't going to rush Ben Stokes back') ಎಂದು ಬರೆದಿತ್ತು. ಆಶ್ಲೇ ಗಿಲ್ಸ್ ಕೂಡ ಅದನ್ನೇ ಹೇಳಿದರು. ಬಳಿಕ ನಾನು ವಿಷವನ್ನು ತಿಳಿದುಕೊಂಡೆ ಎಂದು ಸ್ಟೋಕ್ಸ್ ತಿಳಿಸಿದ್ದಾರೆ.
"ನೀವು ನಗದಿದ್ದರೆ, ನೀವು ಅಳುತ್ತೀರಿ" ಎಂದು ಯೋಚಿಸುವ ಸಮಯಗಳಲ್ಲಿ ಇದೂ ಒಂದು ಎಂದು ಇಂಗ್ಲೆಂಡ್ ಆಲ್ ರೌಂಡರ್ ಹೇಳಿದ್ದಾರೆ.
ಓದಿ : ಪಾಕ್ ವಿರುದ್ಧದ ಸರಣಿಗೆ ಆಯ್ಕೆಯಾದ ಇಂಗ್ಲೆಂಡ್ ಆಟಗಾರರಿಗೆ ಕೊರೊನಾ: ಯಾರ BENಗೆ ಕ್ಯಾಪ್ಟನ್ ಹೊಣೆ?
14 ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕ್ಷೇತ್ರ ರಕ್ಷಣೆ ವೇಳೆ ಸ್ಟೋಕ್ಸ್ ಎಡಗೈ ತೋರು ಬೆರಳಿಗೆ ಗಾಯವಾಗಿತ್ತು. ಅದಾದ ಬಳಿಕ ಅವರು ಕೆಲಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದೀಗ ಉತ್ತಮ ಅವಕಾಶವೊಂದು ಅವರನ್ನು ಹುಡುಕಿಕೊಂಡು ಬಂದಿದೆ.
ಇದು ನಾನು ಬಯಸಿದ್ದರಲ್ಲಿ ಕೊನೆಯದು. ಇದು ಅತ್ಯಂತ ಕಡಿಮೆ ಅವಧಿಯಲ್ಲಿ ಒದಗಿ ಬಂದಿದೆ. ಕೋಚ್ ಕ್ರಿಸ್ ಸಿಲ್ವರ್‌ವುಡ್ ಅವರು ಇದನ್ನು ನಿಭಾಯಿಸಬಹುದೇ ಎಂದು ಕೇಳಿದರು, ನಾನು ಹೌದು ಅಂದೆ ಎಂದು ತನಗೆ ದೊರೆತ ಅವಕಾಶದ ಬಗ್ಗೆ ಸ್ಟೋಕ್ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಯಾವಾಗಲು ಕರ್ತವ್ಯಕ್ಕೆ ಸಿದ್ಧನಾಗಿರುತ್ತೇನೆ. ಅದು ದುರ್ಹಾಮ್ ಆಗಿರಲಿ ಅಥವಾ ಇಂಗ್ಲೆಂಡ್ ಆಗಿರಲಿ ಎಂದು ಅವರು ಹೇಳಿದ್ದಾರೆ.