ನವದೆಹಲಿ : 2021 ಮತ್ತು 2023ರ ಏಕದಿನ ವಿಶ್ವಕಪ್ ಆತಿಥ್ಯವನ್ನು ಹೊಂದಿರುವ ಭಾರತ ತಂಡ 2024ರಿಂದ 2031ರವರೆಗೆ ನಡೆಯಲಿರುವ ಐಸಿಸಿಯ ಪ್ರಮುಖ 3 ಟೂರ್ನಿಗಳಿಗೆ ಬಿಡ್ ಸಲ್ಲಿಸಲು ನಿರ್ಧರಿಸಿದೆ. ಇದರಲ್ಲಿ ಒಂದು ಚಾಂಪಿಯನ್ಸ್ ಟ್ರೋಫಿ, ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಡ್ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
ಭಾನುವಾರ ನಡೆದ ಬಿಸಿಸಿಐ ಅಪೆಕ್ಸ್ ಸಮಿತಿಯ ವರ್ಚುವಲ್ ಸಭೆಯಲ್ಲಿ ಚಾಂಪಿಯನ್ ಟ್ರೋಫಿ, ಏಕದಿನ ಮತ್ತು ಟಿ20ಯ ತಲಾ ಒಂದು ವಿಶ್ವಕಪ್ ಆಯೋಜಿಸಲು ತೀರ್ಮಾನಿಸಲಾಗಿದೆ. ಆದರೆ, ಇದು ತೆರಿಗೆ ವಿನಾಯಿತಿಗಳ ಮೇಲೆ ನಿಂತಿದೆ ಎನ್ನಲಾಗಿದೆ. ಏಕೆಂದರೆ, 2016ರ ಟಿ20 ವಿಶ್ವಕಪ್ನಲ್ಲಿ ತೆರಿಗೆ ವಿನಾಯಿತಿ ಪಡೆದಿರಲಿಲ್ಲ. ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೂ ತೆರಿಗೆ ವಿನಾಯಿತಿ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಬಿಸಿಸಿಐ ಅಧಿಕಾರಿಗಳು ದುಬೈನಲ್ಲಿ ಭೇಟಿಯಾದಾಗ ಈ ವಿಷಯವನ್ನು ಐಸಿಸಿಯೊಂದಿಗೆ ಚರ್ಚಿಸಲಿದ್ದಾರೆ. ಮತ್ತೊಂದು ಅಂಶವೆಂದರೆ ಮಂಡಳಿಗಳಿಗೆ ಹೋಸ್ಟಿಂಗ್ ಶುಲ್ಕದಲ್ಲಿನ ವ್ಯತ್ಯಾಸದ ಬಗ್ಗೆ ಸ್ಪಷ್ಟತೆ ಬಯಸುತ್ತದೆ ಎಂದು ತಿಳಿದು ಬಂದಿದೆ.
ಬಿಸಿಸಿಐ 2025ರ ಚಾಂಪಿಯನ್ಸ್ ಟ್ರೋಫಿ, 2028ರ ಟ್ವೆಂಟಿ–20 ವಿಶ್ವಕಪ್ ಮತ್ತು 2031ರ ಏಕದಿನ ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸಲು ಬಿಡ್ ಸಲ್ಲಿಸಲಿದೆ. 2024-31ರ ಎಫ್ಟಿಪಿಯ ಪ್ರಕಾರ ಪ್ರತಿ 2 ವರ್ಷಗಳಿಗೊಂದು ಟಿ20 ವಿಶ್ವಕಪ್,14 ತಂಡಗಳು 2 ಏಕದಿನ ವಿಶ್ವಕಪ್ ಮತ್ತು 2 ಚಾಂಪಿಯನ್ ಟ್ರೋಫಿ(2025 ಮತ್ತು 2029) ಮತ್ತು 2025, 2027, 2029 and 2031 ರಲ್ಲಿ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಯೋಜಿಸಲಾಗಿದೆ.
ಇದನ್ನು ಓದಿ:ಒಲಿಂಪಿಕ್ ಬೌಂಡ್ ಅಥ್ಲೀಟ್ಗಳಿಗೆ ಬಿಸಿಸಿಐನಿಂದ 10 ಕೋಟಿ.ರೂ ನೆರವು