ETV Bharat / sports

ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ: ಜಡೇಜಾ A+ ಬಡ್ತಿ, Bಗೆ ಜಾರಿದ ಕೆ.ಎಲ್.ರಾಹುಲ್

author img

By

Published : Mar 27, 2023, 8:17 AM IST

ಪುರುಷ ಕ್ರಿಕೆಟ್ ಆಟಗಾರರ ವಾರ್ಷಿಕ ಗುತ್ತಿಗೆ ಒಪ್ಪಂದ ಪಟ್ಟಿಯನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದೆ.

ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ 2022-23ರ ಟೀಮ್ ಇಂಡಿಯಾ ಪುರುಷ ಆಟಗಾರರ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದ್ದು, ಆಲ್​ರೌಂಡರ್​ ರವೀಂದ್ರ ಜಡೇಜಾ ಅತಿ ಹೆಚ್ಚು ಸಂಭಾವನೆ ಹೊಂದಿರುವ A+ ವರ್ಗಕ್ಕೆ ಬಡ್ತಿ ಪಡೆದಿದ್ದಾರೆ. ಬಿಸಿಸಿಐ ಕ್ರಿಕೆಟಿಗರಿಗೆ ನೀಡುವ ವಾರ್ಷಿಕ ಸಂಭಾವನೆಯಲ್ಲಿ ನಾಲ್ಕು ವಿಭಾಗಗಳನ್ನು ಹೊಂದಿದೆ. A+ ವರ್ಗದ ಆಟಗಾರರು ವಾರ್ಷಿಕ 7 ಕೋಟಿ ರೂಪಾಯಿ ಸಂಭಾವನೆ ಪಡೆದರೆ, A ವಿಭಾಗ ₹5 ಕೋಟಿ, B ವರ್ಗ ₹3 ಕೋಟಿ ಮತ್ತು ಸಿ ವರ್ಗದ ಆಟಗಾರರು ₹1 ಕೋಟಿ ಪಡೆಯುತ್ತಾರೆ.

ಗ್ರೇಡ್​ A+ (₹7 ಕೋಟಿ) ವಿಭಾಗದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಮುಂದುವರೆದಿದ್ದಾರೆ. ಈ ವಿಭಾಗಕ್ಕೆ ಸ್ಟಾರ್​ ಆಟಗಾರ ಹಾಗೂ ಆಲ್​ರೌಂಡರ್ ರವೀಂದ್ರ ಜಡೇಜಾ ಹೊಸ ಸೇರ್ಪಡೆ. ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಕ್ರಮವಾಗಿ ಸಿ ಮತ್ತು ಬಿ ಗ್ರೇಡ್‌ಗಳಿಂದ ಎ ಗೆ ಬಡ್ತಿ ಹೊಂದಿದ್ದಾರೆ. ಪಾಂಡ್ಯ, ರವಿಚಂದ್ರನ್ ಅಶ್ವಿನ್, ವೇಗಿ ಮೊಹಮ್ಮದ್ ಶಮಿ, ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಮತ್ತು ಅಕ್ಷರ್​ ಪಟೇಲ್ ಗ್ರೇಡ್ ಎ (₹5 ಕೋಟಿ) ವಿಭಾಗದಲ್ಲಿದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ಅಜಿಂಕ್ಯ ರಹಾನೆ ಅವರನ್ನು ವಾರ್ಷಿಕ ಒಪ್ಪಂದದಿಂದ ಕೈಬಿಡಲಾಗಿದೆ.

ಕೆ.ಎಲ್.ರಾಹುಲ್ ಅವರನ್ನು ಗ್ರೇಡ್ ಬಿಗೆ ಇಳಿಸಲಾಗಿದೆ. ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್ ಮತ್ತು ಶುಭ್‌ಮನ್​ಗಿಲ್ ಅವರನ್ನು ಗ್ರೇಡ್ ಬಿ ವರ್ಗಕ್ಕೆ ಸೇರಿಸಲಾಗಿದೆ.

ಸಂಜು ಸ್ಯಾಮ್ಸನ್ ಅವರನ್ನು ಗ್ರೇಡ್ C ಗೆ ಸೇರ್ಪಡೆಗೊಳಿಸಲಾಗಿದ್ದು, ಮೊದಲ ಬಾರಿಗೆ ಸ್ಯಾಮ್ಸನ್ ವಾರ್ಷಿಕ ಒಪ್ಪಂದ ವಿಭಾಗ ಸೇರಿದ್ದಾರೆ. ಇನ್ನುಳಿದಂತೆ, ಈ ವಿಭಾಗದಲ್ಲಿ ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡಾ, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಶ್ದೀಪ್ ಸಿಂಗ್ ಮತ್ತು ಕೆ.ಎಸ್.ಭರತ್, ಸಿ ಯಲ್ಲಿದ್ದಾರೆ.

ಎ+ ವಿಭಾಗ (₹7 ಕೋಟಿ): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ

ಎ ವರ್ಗ (₹5 ಕೋಟಿ): ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಮೊಹಮ್ಮದ್ ಶಮಿ, ರಿಷಭ್ ಪಂತ್, ಅಕ್ಷರ್ ಪಟೇಲ್

ಬಿ ವರ್ಗ (₹3 ಕೋಟಿ): ಚೇತೇಶ್ವರ ಪೂಜಾರ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್

ಸಿ ವಿಭಾಗ (₹1 ಕೋಟಿ): ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡಾ, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್.ಭರತ್

ಇದನ್ನೂ ಓದಿ: WPL Final 2023.. ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್​ ಟ್ರೋಫಿ ಗೆದ್ದ ಮುಂಬೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.