ಮುಂಬೈ: ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳ ನಡುವಿನ 5ನೇ ಟೆಸ್ಟ್ ಪಂದ್ಯ ರದ್ದುಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಏನು ಎಂಬುದರ ಬಗ್ಗೆ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದಾರೆ.
ಉಭಯ ತಂಡಗಳ ನಡುವೆ ಫೈನಲ್ ಟೆಸ್ಟ್ ಪಂದ್ಯ ಆರಂಭಗೊಳ್ಳಲು ಕೇವಲ ಎರಡು ಗಂಟೆ ಬಾಕಿ ಇದ್ದಾಗ ಪಂದ್ಯ ರದ್ಧಾಗಿದೆ ಎಂದು ಘೋಷಿಸಿಲಾಗಿತ್ತು. ಈ ಬಗ್ಗೆ ಈಗಾಗಲೇ ಇಂಗ್ಲೆಂಡ್ನ ಅನೇಕ ಮಾಜಿ ಕ್ರಿಕೆಟರ್ಸ್ ಗಂಭೀರ ಆರೋಪ ಮಾಡಿದ್ದು, ಐಪಿಎಲ್ಗೋಸ್ಕರ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ನಮ್ಮ ಆಟಗಾರರು 5ನೇ ಟೆಸ್ಟ್ ಪಂದ್ಯ ಆಡಲು ನಿರಾಕರಿಸಿದ್ದರು. ಅದಕ್ಕೋಸ್ಕರ ನಾವು ಪ್ಲೇಯರ್ಸ್ಗಳನ್ನು ದೂಷಿಸುವುದು ಸರಿಯಲ್ಲ. ಬಿಸಿಸಿಐ ಜವಾಬ್ದಾರಿಯುತ ಕ್ರಿಕೆಟ್ ಮಂಡಳಿಯಾಗಿದೆ. ನಾವು ಇತರೆ ಕ್ರಿಕೆಟ್ ಬೋರ್ಡ್ಗಳಿಗೂ ಗೌರವ ನೀಡುತ್ತೇವೆ. ಕ್ರಿಕೆಟರ್ಸ್ ಆರೋಗ್ಯ ದೃಷ್ಠಿಯಿಂದ ವಿಚಾರ ಮಾಡಿದಾಗ ಅವರು ನಡೆದುಕೊಂಡಿರುವುದು ಸರಿಯಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.
ಇದನ್ನೂ ಓದಿ: ಫೈನಲ್ ಟೆಸ್ಟ್ ಮುಂದೂಡಿಕೆ/ಅಮಾನತಿಗೆ ಬಿಸಿಸಿಐ ನಕಾರ: ಅಗತ್ಯಬಿದ್ದರೆ ರದ್ದು ನಿರ್ಧಾರ
ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಲಂಡನ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ 5ನೇ ಟೆಸ್ಟ್ ಪಂದ್ಯ ರದ್ದಾಗಿತ್ತು. ಉಭಯ ತಂಡಗಳ ಪಂದ್ಯ ರದ್ದತಿ ವಿಚಾರವಾಗಿ ಮಾತನಾಡಲು ಗಂಗೂಲಿ ಸೆಪ್ಟೆಂಬರ್ 22ರಂದು ಇಂಗ್ಲೆಂಡ್ಗೆ ಪ್ರಯಾಣ ಕೈಗೊಳ್ಳಲಿದ್ದು, ಮಹತ್ವದ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ.
ಈಗಾಗಲೇ ಎಲ್ಲ ಪ್ಲೇಯರ್ಸ್ ದುಬೈಗೆ ಆಗಮಿಸಿದ್ದು, ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.