ಮುಂಬೈ: ಮುಂದಿನ ತಿಂಗಳು ಆರಂಭವಾಗಲಿರುವ ನ್ಯೂಜಿಲೆಂಡ್ ಎ ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಸರಣಿಗೆ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. ಭಾರತ ಎ ವಿರುದ್ಧ ಪ್ರವಾಸಿ ನ್ಯೂಜಿಲೆಂಡ್ ಎ ಟೀಂ ನಾಲ್ಕು ದಿನಗಳ ಮೂರು ಟೆಸ್ಟ್ ಪಂದ್ಯ ಆಡಲಿದೆ. ಟೆಸ್ಟ್ ಸರಣಿ ಮುಗಿದ ಬಳಿಕ ಏಕದಿನ ಪಂದ್ಯಗಳಲ್ಲಿಯೂ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಟೆಸ್ಟ್ ಸರಣಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಿಗದಿಯಾಗಿದೆ. ಚೆನ್ನೈನಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ಬಿಸಿಸಿಐ ಹೇಳಿದೆ. ಪ್ರಿಯಾಂಕ್ ಪಾಂಚಾಲ್ ಭಾರತ ತಂಡ ಮುನ್ನಡೆಸಲಿದ್ದಾರೆ. ರಣಜಿ ಟ್ರೋಫಿ ಸೆನ್ಸೇಷನ್ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ಸರ್ಫರಾಜ್ ಖಾನ್ ಕೂಡ ತಂಡದಲ್ಲಿ ತಮ್ಮ ಸ್ಥಾನಗಳನ್ನು ಕಾಯ್ದಿರಿಸಿದ್ದಾರೆ.
ಗುರುವಾರ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಭಾರತ ಪ್ರವಾಸಕ್ಕೆ ಎ ತಂಡ ಪ್ರಕಟಿಸಿತ್ತು. ಅಂತಾರಾಷ್ಟ್ರೀಯ ಅನುಭವ ಹೊಂದಿರುವ 7 ಮತ್ತು 5 ಯುವ ಆಟಗಾರರನ್ನು ಒಳಗೊಂಡ ತಂಡವನ್ನು ಸಜ್ಜುಗೊಳಿಸಲಾಗಿದೆ. ಸೆಪ್ಟೆಂಬರ್ನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ನಡೆಯಲಿದ್ದು ಪ್ರವಾಸಿ ನ್ಯೂಜಿಲೆಂಡ್ ತಂಡ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದೆ.
-
NEWS - India A squad for four-day matches against New Zealand A announced.@PKpanchal9 to lead the team for the same.
— BCCI (@BCCI) August 24, 2022 " class="align-text-top noRightClick twitterSection" data="
Full squad details here 👇https://t.co/myxdzItG9o
">NEWS - India A squad for four-day matches against New Zealand A announced.@PKpanchal9 to lead the team for the same.
— BCCI (@BCCI) August 24, 2022
Full squad details here 👇https://t.co/myxdzItG9oNEWS - India A squad for four-day matches against New Zealand A announced.@PKpanchal9 to lead the team for the same.
— BCCI (@BCCI) August 24, 2022
Full squad details here 👇https://t.co/myxdzItG9o
ಭಾರತ ಎ ತಂಡ: ಪ್ರಿಯಾಂಕ್ ಪಾಂಚಾಲ್ (ನಾಯಕ), ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಕೆಎಸ್ ಭರತ್ (ವಿಕೆಟ್ ಕೀಪರ್), ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಸೌರಭ್ ಕುಮಾರ್, ರಾಹುಲ್ ಚಹಾರ್, ಪ್ರಸಿದ್ಧ್ ಕೃಷ್ಣ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್, ಯಶ್ ದಯಾಳ್ ಮತ್ತು ಅರ್ಜಾನ್ ನಾಗ್ವಾಸ್ವಾಲ್ಲಾ.
ನ್ಯೂಜಿಲೆಂಡ್ ಎ ತಂಡ: ಟಾಮ್ ಬ್ರೂಸ್ (ನಾಯಕ), ರಾಬಿ ಒ'ಡೊನೆಲ್ (ನಾಯಕ), ಚಾಡ್ ಬೋವ್ಸ್, ಜೋ ಕಾರ್ಟರ್, ಮಾರ್ಕ್ ಚಾಪ್ಮನ್, ಡೇನ್ ಕ್ಲೀವರ್ (ವಿಕೆಟ್ ಕೀಪರ್), ಜಾಕೋಬ್ ಡಫಿ, ಮ್ಯಾಟ್ ಫಿಶರ್, ಕ್ಯಾಮರೂನ್ ಫ್ಲೆಚರ್ (ವಿಕೆಟ್ ಕೀಪರ್), ಬೆನ್ ಲಿಸ್ಟರ್, ರಾಚಿನ್ ರವೀಂದ್ರ, ಮೈಕೆಲ್ ರಿಪ್ಪನ್, ಸೀನ್ ಸೋಲಿಯಾ, ಲೋಗನ್ ವ್ಯಾನ್ ಬೀಕ್ ಮತ್ತು ಜೋ ವಾಕರ್.
ಇದನ್ನೂ ಓದಿ: ಏಷ್ಯಾ ಕಪ್: ಗತವೈಭವ ಮೆರೆಯಲಿದ್ದಾರಾ ವಿರಾಟ್, ಬಾಬರ್ ಆಜಂ ಮೇಲೆ ಎಲ್ಲರ ಚಿತ್ತ