ETV Bharat / sports

ಭಾರತ - ದಕ್ಷಿಣ ಆಫ್ರಿಕಾ ಟಿ-20 ಸರಣಿ: ಕ್ರೀಡಾಂಗಣ ಭರ್ತಿಗೆ ಬಿಸಿಸಿಐ ಅವಕಾಶ - ಕ್ರಿಕೆಟ್​ ಕ್ರೀಡಾಂಗಣ ಭರ್ತಿಗೆ ಅವಕಾಶ

ದೇಶದಲ್ಲಿ ಕೋವಿಡ್​ ಸೋಂಕು ತಗ್ಗಿ ನಿರ್ಬಂಧಗಳು ಸಡಿಲವಾಗಿವೆ. ಹೀಗಾಗಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ಮಧ್ಯೆ ನಡೆಯುವ ಟಿ-20 ಸರಣಿಗೆ ಕ್ರೀಡಾಂಗಣದಲ್ಲಿ ಪೂರ್ಣ ಪ್ರಮಾಣದ ಅಭಿಮಾನಿಗಳಿಗೆ ಬಿಸಿಸಿಐ ಗ್ರೀನ್​ ಸಿಗ್ನಲ್​ ನೀಡಿದೆ.

bcci-allows-full-capacity
ಕ್ರೀಡಾಂಗಣ ಭರ್ತಿಗೆ ಬಿಸಿಸಿಐ ಅವಕಾಶ
author img

By

Published : May 19, 2022, 6:58 PM IST

ಮುಂಬೈ (ಮಹಾರಾಷ್ಟ್ರ): ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಇದು ಸಿಹಿ ಸುದ್ದಿ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜೂನ್ 9 ರಿಂದ ಪ್ರಾರಂಭವಾಗುವ 5 ಪಂದ್ಯಗಳ ಟಿ-20 ಸರಣಿಗೆ ಕ್ರೀಡಾಂಗಣಗಳಲ್ಲಿ ಪೂರ್ಣ ಪ್ರಮಾಣದ ಸೀಟು ಭರ್ತಿ ಮಾಡಲು ಬಿಸಿಸಿಐ ಅನುಮತಿಸಿದೆ.

ಕೋವಿಡ್​ ಕಾರಣಕ್ಕಾಗಿ ಕ್ರೀಡಾಂಗಣಗಳಿಗೆ ನಿರ್ದಿಷ್ಟ ಅಭಿಮಾನಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಇದೀಗ ಸೋಂಕಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಕ್ರೀಡಾಂಗಣ ಭರ್ತಿಗೆ ಕ್ರಿಕೆಟ್​ ಮಂಡಳಿ ಒಪ್ಪಿಗೆ ಸೂಚಿಸಿದೆ.

ಇನ್ನು ಐಪಿಎಲ್ ಪ್ಲೇ ಆಫ್‌ ಪಂದ್ಯಗಳಿಗೆ ಬಿಸಿಸಿಐ ಈಗಾಗಲೇ ಪೂರ್ಣ ಸಾಮರ್ಥ್ಯದ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ - 20 ಸರಣಿಯನ್ನು ದೆಹಲಿ, ಕಟಕ್, ವಿಶಾಖಪಟ್ಟಣಂ, ರಾಜ್‌ಕೋಟ್ ಮತ್ತು ಬೆಂಗಳೂರಿನಲ್ಲಿ ಜೂನ್ 9 ರಿಂದ 19ರವರೆಗೆ ನಡೆಯಲಿದೆ.

ಓದಿ: ನನ್ನ ತಂದೆ 2-3 ದಿನ ಊಟ ಮಾಡಿರಲಿಲ್ಲ: ಕಷ್ಟದ ದಿನ ಸ್ಮರಿಸಿ, ಸೋಲಿನ ಬಳಿಕ ಕಣ್ಣೀರಿಟ್ಟ ರಿಂಕು ಸಿಂಗ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.