ETV Bharat / sports

ಡೇವಿಡ್ ವಾರ್ನರ್ ಕಳಪೆ ಪ್ರದರ್ಶನ: ತಲೆದಂಡಕ್ಕೆ ಮುಂದಾದ ಸನ್‌ರೈಸರ್ಸ್ ಹೈದರಾಬಾದ್

ಭವಿಷ್ಯದ ಬಲಾಢ್ಯ ತಂಡ ಕಟ್ಟುವ ಸಲುವಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ಬರುವ ದಿನಮಾನಗಳಲ್ಲಿ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ತಂಡ ಈಗಾಗಲೇ ಈ ಸಾರಿಯ ಐಪಿಎಲ್​ನ ಪ್ಲೇಆಫ್​ನಿಂದ ಹೊರಬಂದಿದ್ದು ಇದಕ್ಕೆ ಕಾರಣಗಳನ್ನು ಹುಡಿಕಿಕೊಳ್ಳುತ್ತಿದೆ.

Bayliss says wanted to give youngsters chance, so dropped Warner
ಡೇವಿಡ್ ವಾರ್ನರ್
author img

By

Published : Sep 28, 2021, 2:04 PM IST

ದುಬೈ: ಕಳಪೆ ಪ್ರದರ್ಶನ ತೋರಿದ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ಲೇಆಫ್ ಪ್ರವೇಶದಿಂದ ಈಗಾಗಲೇ ತಂಡ ಭಾಗಶಃ ಹೊರ ಬಂದಿದೆ. ಹಾಗಾಗಿ ಮುಂಬರುವ ಆಟಕ್ಕೆ ಪರೀಕ್ಷಾರ್ಥವಾಗಿ ಕೆಲವು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಲಿದೆ ಎಂದು ತಂಡದ ಮುಖ್ಯ ಕೋಚ್ ಟ್ರೇವರ್ ಬೇಲಿಸ್ ಹೇಳಿದ್ದಾರೆ.

Bayliss says wanted to give youngsters chance, so dropped Warner
ಮುಖ್ಯ ಕೋಚ್ ಟ್ರೇವರ್ ಬೇಲಿಸ್

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಫಾರ್ಮ್ ಕಳೆದುಕೊಂಡ ಅನುಭವಿ ಆಟಗಾರ ಡೇವಿಡ್ ವಾರ್ನರ್ ಅವರನ್ನು ಕೈಬಿಡಲಾಗಿದ್ದು, ಅವರ ಸ್ಥಾನವನ್ನು ಯುವ ಸಮೂದಾಯಕ್ಕೆ ಮೀಸಲಿಡಲು ಮ್ಯಾನೇಜ್ಮೆಂಟ್​ ತೀರ್ಮಾನಿಸಿದೆ.

ಈಗಾಗಲೇ ನಮಗೆ ನಮ್ಮ ಸಾಮರ್ಥ್ಯ ಗೊತ್ತಾಗಿದೆ. ನಾವಿನ್ನೂ ಈ ಸ್ಥಾನದಿಂದ ಮೇಲೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಪರೀಕ್ಷಾರ್ಥವಾಗಿ ಕೆಲವು ಯುವಕರಿಗೆ ಅವಕಾಶ ಮಾಡಿಕೊಡಲು ತೀರ್ಮಾನ ಮಾಡಲಾಗಿದೆ. ಇದು ಮುಂದಿನ ಬೆಳವಣೆಗೆಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಐಪಿಎಲ್‌ 2021: ಆರ್‌ಆರ್‌ ವಿರುದ್ಧ ಗೆಲುವಿನ ನಗೆ ಬೀರಿದ ಸನ್‌ ರೈಸರ್ಸ್‌

ನಮ್ಮಲ್ಲಿ ಹಲವು ಯುವ ಆಟಗಾರರಿದ್ದಾರೆ. ಈವರೆಗೆ ನಾವು ಅವರಿಗೆ ಅವಕಾಶ ಮಾಡಿಕೊಟ್ಟಿಲ್ಲ. ಆದ್ದರಿಂದ ಇದೊಂದು ಅವರಿಗೆ ಉತ್ತಮ ಅವಕಾಶವಾಗಿದೆ. ಈ ಪರೀಕ್ಷಾರ್ಥ ಪಂದ್ಯದಲ್ಲಿ ಅವರ ಸಾಮರ್ಥ್ಯ ಸಾಬೀತು ಮಾಡಿದರೆ ಇದೇ ಮಾದರಿ ನಂತರವೂ ಮುಂದುವರೆಯಬಹುದು. ಈ ತೊಳಲಾಟ ಮುಂದಿನ ಎರಡು ದಿನದಲ್ಲಿ ಅಂತ್ಯಕಾಣಲಿದೆ. ಇದಕ್ಕೆ ವಾರ್ನರ್ ಕೂಡ ಬೆಂಬಲ ವ್ಯಕ್ತಪಡಿಸಲಿದ್ದಾರೆ ಅನ್ನೋ ವಿಶ್ವಾಸವಿದೆ ಎಂದು ಟ್ರೇವರ್ ಬೇಲಿಸ್ ಭವಿಷ್ಯದ ತಂಡದ ಕುರಿತು ಮಾಹಿತಿ ನೀಡಿದರು.

Bayliss says wanted to give youngsters chance, so dropped Warner
ಡೇವಿಡ್ ವಾರ್ನರ್

ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿನ್ನೆ ನಡೆದ (ಸೋಮವಾರ 27) ಪಂದ್ಯದಲ್ಲಿ ವಾರ್ನರ್ ಬದಲಿಗೆ ಜೇಸನ್ ರಾಯ್ ಅವರನ್ನು ತಂಡದ ಮ್ಯಾನೇಜ್ಮೆಂಟ್​ ಕಣಕ್ಕಿಳಿಸಿತ್ತು. ಈ ಪರೀಕ್ಷೆ ಫಲ ಕೂಡಾ ನೀಡಿದ್ದು, ತಂಡ ಮುಂದಿನ ಪಂದ್ಯಗಳಿಗೂ ಇದೇ ಮಾದರಿ ಅನುಸರಿಸಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಸದ್ಯದ ಮಟ್ಟಿಗೆ ಡೇವಿಡ್​ ವಾರ್ನರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಅನ್ನೋದು ಕ್ರೀಡಾವಲಯದ ಮಾತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.