ಢಾಕಾ: ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ ತನ್ನ ಪ್ರಾಬಲ್ಯ ಮುಂದುವರಿಸಿದ್ದು, ಎರಡನೇ ಟಿ-20 ಪಂದ್ಯವನ್ನು 5 ವಿಕೆಟ್ಗಳಿಂದ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0ಯಲ್ಲಿ ಮುನ್ನಡೆ ಸಾಧಿಸಿದೆ.
ಢಾಕಾದಲ್ಲಿ ನಡೆದ 2ನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ 20 ಓವರ್ಗಳ ಕೋಟಾದಲ್ಲಿ 121 ರನ್ಗಳಿಸಿತು. ಮೊದಲ ಪಂದ್ಯದಂತೆ ಇಂದೂ ಕೂಡ ಬಾಂಗ್ಲಾ ಬೌಲರ್ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್ (45) ಮತ್ತು ಹೆನ್ರಿಕ್ಸ್ (30) ಹೊರತು ಪಡಿಸಿ ಯಾವೊಬ್ಬ ಬ್ಯಾಟ್ಸ್ಮನ್ ಕೂಡ 20 ರ ಗಡಿದಾಟಲಿಲ್ಲ.
ಆರಂಭಿಕನಾಗಿ ಬಡ್ತಿ ಪಡೆದಿದ್ದ ಅಲೆಕ್ಸ್ ಕ್ಯಾರಿ 11, ಯುವ ಆರಂಭಿಕ ಬ್ಯಾಟ್ಸ್ಮನ್ ಜೋಶ್ ಫಿಲಪ್ಪೆ 10, ನಾಯಕ ವೇಡ್ 4, ಆಶ್ಟನ್ ಅಗರ್ 0, ಟರ್ನರ್ 3 ರನ್ಗಳಿಸಿದರು.
-
Bangladesh lead the five-match T20I series 2-0!
— ICC (@ICC) August 4, 2021 " class="align-text-top noRightClick twitterSection" data="
Afif Hossain and Nurul Hasan share an unbeaten 56-run stand to guide their side to a five-wicket win 🙌
📝 https://t.co/1c6I7YaBu1 | #BANvAUS pic.twitter.com/BuIv9DCz2S
">Bangladesh lead the five-match T20I series 2-0!
— ICC (@ICC) August 4, 2021
Afif Hossain and Nurul Hasan share an unbeaten 56-run stand to guide their side to a five-wicket win 🙌
📝 https://t.co/1c6I7YaBu1 | #BANvAUS pic.twitter.com/BuIv9DCz2SBangladesh lead the five-match T20I series 2-0!
— ICC (@ICC) August 4, 2021
Afif Hossain and Nurul Hasan share an unbeaten 56-run stand to guide their side to a five-wicket win 🙌
📝 https://t.co/1c6I7YaBu1 | #BANvAUS pic.twitter.com/BuIv9DCz2S
ಬಾಂಗ್ಲಾದೇಶದ ಪರ ಮುಸ್ತಫಿಜುರ್ ರಹಮಾನ್ 3, ಶೋರಿಫುಲ್ ಇಸ್ಲಾಮ್ 2, ಶಕಿಬ್ ಮತ್ತು ಮೆಹೆದಿ ಹಸನ್ ತಲಾ ಒಂದು ವಿಕೆಟ್ ಪಡೆದು ಆಸೀಸ್ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿದರು.
ಇನ್ನು 122 ರನ್ಗಳ ಸಾಧಾರಣ ಗುರಿ ಪಡೆದ ಬಾಂಗ್ಲಾದೇಶ 18.4 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 123 ರನ್ಗಳಿಸಿ ಗೆಲುವಿನ ಕೇಕೆಯಾಕಿತು. ಆರಂಭಿಕರಾದ ಸೌಮ್ಯ ಸರ್ಕಾರ್(0), ನಯೀಮ್(9) ವಿಫಲರಾದರು ಶಕಿಬ್(26), ಆಫಿಫ್ ಹುಸೇನ್(37) ಮತ್ತು ನೂರುಲ್ ಹುಸೇನ್(22) ರನ್ಗಳಿಸಿ ಗೆಲುವಿಗೆ ಕಾರಣರಾದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್, ಜೋಶ್ ಹೆಜಲ್ವುಡ್, ಆಶ್ಟನ್ ಅಗರ್, ಆ್ಯಡಂ ಜಂಪಾ ಮತ್ತು ಆ್ಯಂಡ್ರ್ಯೂ ಟೈ ತಲಾ ಒಂದು ವಿಕೆಟ್ ಪಡೆದರಾದರೂ ಕಡಿಮೆ ಗುರಿ ನೀಡಿದ್ದರಿಂದ ಪಂದ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಬಾಂಗ್ಲಾದೇಶ ತನ್ನ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಯಾವುದೇ ಮಾದರಿಯಲ್ಲಿ ಸತತ 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿತು.
ಇದನ್ನು ಓದಿ:ಇಂಗ್ಲೆಂಡ್ ಪರ ಹೆಚ್ಚು ಅಂತಾರಾಷ್ಟ್ರೀಯ ರನ್ ಬಾರಿಸಿದ ದಾಖಲೆಗೆ ಜೋ ರೂಟ್ ಭಾಜನ