ಕರಾಚಿ(ಪಾಕಿಸ್ತಾನ): ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಎರಡನೇ ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ ತಂಡ 10 ರನ್ಗಳ ಭರ್ಜರಿ ಗೆಲುವು ದಾಖಲು ಮಾಡಿದೆ. ಇದರ ಜೊತೆಗೆ ಚುಟುಕು ಕ್ರಿಕೆಟ್ನಲ್ಲಿ ಬಾಬರ್-ರಿಜ್ವಾನ್ ಜೋಡಿ ವಿಶ್ವದಾಖಲೆ ಸೃಷ್ಟಿ ಮಾಡಿದೆ.
ಕಳಪೆ ಬ್ಯಾಟಿಂಗ್ ಫಾರ್ಮ್ನಿಂದ ಟೀಕೆಗೊಳಗಾಗಿದ್ದ ಪಾಕಿಸ್ತಾನ ಕ್ಯಾಪ್ಟನ್ ಬಾಬರ್ ಆಜಂ ನಿನ್ನೆ ಇಂಗ್ಲೆಂಡ್ ಬೌಲರ್ಗಳ ವಿರುದ್ಧ ಅಬ್ಬರಿಸಿದರು. ತಾವು ಎದುರಿಸಿದ ಕೇವಲ 66 ಎಸೆತಗಳಲ್ಲಿ 5 ಸಿಕ್ಸರ್, 11 ಬೌಂಡರಿ ಸೇರಿದಂತೆ ಅಜೇಯ 110ರನ್ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 51 ಎಸೆತಗಳಲ್ಲಿ 4 ಸಿಕ್ಸರ್, 5 ಬೌಂಡರಿ ಸಮೇತ 88ರನ್ಗಳಿಸಿದರು. ಮುರಿಯದ ಜೊತೆಯಾಟವಾಡಿದ ಈ ಜೋಡಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಗೆಲುವು ದಾಖಲು ಮಾಡಿದೆ.
-
Only three times has a target over 150 been chased in T20Is without losing a wicket.
— Pakistan Cricket (@TheRealPCB) September 22, 2022 " class="align-text-top noRightClick twitterSection" data="
Pakistan have done it twice 🙌#PAKvENG | #UKSePK pic.twitter.com/mV7YGMPggW
">Only three times has a target over 150 been chased in T20Is without losing a wicket.
— Pakistan Cricket (@TheRealPCB) September 22, 2022
Pakistan have done it twice 🙌#PAKvENG | #UKSePK pic.twitter.com/mV7YGMPggWOnly three times has a target over 150 been chased in T20Is without losing a wicket.
— Pakistan Cricket (@TheRealPCB) September 22, 2022
Pakistan have done it twice 🙌#PAKvENG | #UKSePK pic.twitter.com/mV7YGMPggW
ಟಿ20ಯಲ್ಲಿ ಹೊಸ ದಾಖಲೆ ಬರೆದ ಜೋಡಿ: ಟಿ20 ಕ್ರಿಕೆಟ್ನಲ್ಲಿ ಯಾವುದೇ ಜೋಡಿ ಇಲ್ಲಿಯವರೆಗೆ 200ರನ್ಗಳ ಜೊತೆಯಾಟವಾಡಿಲ್ಲ. ಆದರೆ, ನಿನ್ನೆಯ ಇಂಗ್ಲೆಂಡ್ ತಂಡದ ವಿರುದ್ಧದ ಪಂದ್ಯದಲ್ಲಿ ಬಾಬರ್-ರಿಜ್ವಾನ್ ಜೋಡಿ ಈ ಸಾಧನೆ ಮಾಡಿದೆ. ಇಬ್ಬರು ಜೊತೆಯಾಗಿ 19.3 ಓವರ್ಗಳಲ್ಲಿ 203ರನ್ಗಳ ಆಟವಾಡಿದ್ದಾರೆ. ಬಾಬರ್ ಅಜೇಯ 110ರನ್ ಹಾಗೂ ರಿಜ್ವಾನ್ ಅಜೇಯ 88ರನ್ಗಳಿಸಿದರು. ವಿಶೇಷವೆಂದರೆ 2021ರ ಟಿ20 ವಿಶ್ವಕಪ್ನಲ್ಲೂ ಈ ಜೋಡಿ ಭಾರತದ ವಿರುದ್ಧ ಇದೇ ರೀತಿಯ ಪ್ರದರ್ಶನ ನೀಡಿತ್ತು.ಜೊತೆಗೆ 10 ವಿಕೆಟ್ಗಳ ಗೆಲುವು ಸಹ ದಾಖಲು ಮಾಡಿತ್ತು.
ಇದನ್ನೂ ಓದಿ: ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಊಟ: ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಶಿಖರ್ ಧವನ್
ಪಾಕಿಸ್ತಾನದ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡ ಮೊದಲ ಟಿ20 ಪಂದ್ಯದಲ್ಲಿ ಗೆಲುವು ದಾಖಲು ಮಾಡಿತ್ತು. ಆದರೆ, ಇದೀಗ ಎರಡನೇ ಪಂದ್ಯದಲ್ಲಿ ಪಾಕ್ ತಿರುಗಿಬಿದ್ದು ಜಯ ಸಾಧಿಸಿದೆ. ಹೀಗಾಗಿ, 7 ಪಂದ್ಯಗಳ ಸರಣಿಯಲ್ಲಿ ಉಭಯ ತಂಡ 1-1 ಅಂತರದ ಸಮಬಲ ಸಾಧಿಸಿವೆ.