ಬರ್ಮಿಂಗ್ಹ್ಯಾಮ್: ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ದಾಖಲಿಸುವ ಮೂಲಕ ಕಡಿಮೆ ಇನ್ನಿಂಗ್ಸ್ಗಳಲ್ಲಿ 14 ಶತಕ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದಿದ್ದಾರೆ.
ಬಾಬರ್ ಅಜಮ್ 104 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ಬಾಬರ್ ಅಜಮ್ 139 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 159ರನ್ ಗಳಿಸಿದರು. ಈ ಮೂಲಕ ತಮ್ಮ 81 ಇನ್ನಿಂಗ್ಸ್ ಮೂಲಕ ಏಕದಿನ ಕ್ರಿಕೆಟ್ನ 14ನೇ ಶತಕ ಪೂರ್ಣಗೊಳಿಸಿದರು. ಇದೇ ಸಂದರ್ಭದಲ್ಲಿ ಹಶೀಂ ಆಮ್ಲಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ವೇಗವಾಗಿ ಈ ಮೈಲುಗಲ್ಲಿ ತಲುಪಿದರು. ಜೊತೆಗೆ ತಮ್ಮ ಮೊದಲ 150 (158) ರನ್ಗಳಿಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ತಮ್ಮ ವೈಯಕ್ತಿಕ ಗರಿಷ್ಠ ರನ್ ಉತ್ತಮಗೊಳಿಸಿಕೊಂಡರು. 2017ರಲ್ಲಿ ಜಿಂಬಾಬ್ವೆ ವಿರುದ್ಧ 125 ರನ್ಗಳಿಸಿದ್ದು ಅವರ ವೈಯಕ್ತಿಕ ದಾಖಲೆಯಾಗಿತ್ತು.
ಹಶೀಂ ಆಮ್ಲಾ 14 ಶತಕಗಳಿಗಾಗಿ 84 ಇನ್ನಿಂಗ್ಸ್ ತೆಗೆದುಕೊಂಡರೆ, ಡೇವಿಡ್ ವಾರ್ನರ್ 98 ಮತ್ತು ವಿರಾಟ್ ಕೊಹ್ಲಿ 103 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಇಂಗ್ಲೆಂಡ್ನಲ್ಲಿ 3 ಶತಕ ಬಾರಿಸಿದ ಮೊದಲ ಪಾಕಿಸ್ತಾನ ಬ್ಯಾಟ್ಸ್ಮನ್
ಬಾಬರ್ ಅಜಮ್ ಈ ಶತಕದ ಜೊತೆಗೆ ಇಂಗ್ಲೆಂಡ್ ನೆಲದಲ್ಲಿ 3 ಶತಕ ಬಾರಿಸಿದ ಮೊದಲ ಪಾಕಿಸ್ತಾನ ಬ್ಯಾಟ್ಸ್ಮನ್ ಎಂಬ ದಾಖಲೆಗೂ ಪಾತ್ರರಾದರು. ಸಯೀದ್ ಅನ್ವರ್, ಫಖರ್ ಜಮಾನ್ ಮತ್ತು ಇಮಾಮ್ ಉಲ್ ಹಕ್ ತಲಾ 2 ಶತಕ ಬಾರಿಸಿದ್ದಾರೆ.
ಇದನ್ನೂ ಓದಿ: ಭಾರತ ತಂಡಕ್ಕೆ ಗಂಗೂಲಿ ಪ್ರತಿಭೆಗಳನ್ನು ಹುಡುಕಿದರು, ಧೋನಿ ಬೆಳೆಸಿದರು: ಆಕಾಶ್ ಚೋಪ್ರಾ