ETV Bharat / sports

'ಅಪ್ಪಾ ಐ ಲವ್​ ಯೂ ಪಾ..' ಕನ್ನಡದ ಹಾಡು ಪೋಸ್ಟ್​ ಮಾಡಿ ಕನ್ನಡಿಗರ ಹೃದಯ ಗೆದ್ದ ವಾರ್ನರ್​ - ಸನ್​ ರೈಸರ್ಸ್ ಹೈದರಾಬಾದ್

ಐಪಿಎಲ್​​ ಪಂದ್ಯಾವಳಿ ಆಡುತ್ತಾ ಭಾರತವನ್ನು ಹೆಚ್ಚೆಚ್ಚು ಪ್ರೀತಿಸಲು, ಗೌರವಿಸಲು ಆರಂಭಿಸಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಈ ಬಾರಿ ಕನ್ನಡಿಗರ ಮನ ಗೆದ್ದಿದ್ದಾರೆ.

Australian cricketer David warner shares kannada song in his latest Instagram post
ವಾರ್ನರ್
author img

By

Published : Aug 20, 2021, 1:32 PM IST

ಹಿಂದಿ, ತೆಲುಗು ಹಾಡುಗಳನ್ನು ತಮ್ಮ ವಿಡಿಯೋಗಳಿಗೆ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಈ ಬಾರಿ ಕನ್ನಡಿಗರ ಮನ ಗೆದ್ದಿದ್ದಾರೆ. ತಮ್ಮ ಮಗಳ ವಿಡಿಯೋಗೆ ಕನ್ನಡದ 'ಅಪ್ಪಾ ಐ ಲವ್​ ಯೂ ಪಾ..' ಹಾಡನ್ನ ಸಿಂಕ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಡೇವಿಡ್ ವಾರ್ನರ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್​ ಮಾಡಿದ ವಿಡಿಯೋ

ಐಪಿಎಲ್​​ ಪಂದ್ಯಾವಳಿ ಆಡುತ್ತಾ ಭಾರತವನ್ನು ಹೆಚ್ಚೆಚ್ಚು ಪ್ರೀತಿಸಲು, ಗೌರವಿಸಲು ಆರಂಭಿಸಿರುವ ಸನ್​ ರೈಸರ್ಸ್ ಹೈದರಾಬಾದ್ (SRH) ತಂಡದ ಆಟಗಾರ ಡೇವಿಡ್ ವಾರ್ನರ್​​ರನ್ನು ಭಾರತೀಯರೂ ಅಷ್ಟೇ ಪ್ರೀತಿಸುತ್ತಾರೆ. ಅವರ ಮಗಳು ಸ್ಟೇಡಿಯಂನಲ್ಲಿ 'Go Daddy' ಎಂದು ಬರೆದಿರುವ ಬೋರ್ಡ್​ ಹಿಡಿದು ತಂದೆಗೆ ಶುಭ ಕೋರುತ್ತಿರುವ ವಿಡಿಯೋವನ್ನು ವಾರ್ನರ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಪ್ಲೇ ಮಾಡಿದಾಗ 2017ರಲ್ಲಿ ತೆರೆಗೆ ಬಂದ 'ಚೌಕ' ಸಿನಿಮಾದ 'ಅಪ್ಪಾ ಐ ಲವ್​ ಯೂ ಪಾ..' ಹಾಡು ಕೇಳಿ ಬರುತ್ತದೆ.

ವಾರ್ನರ್​​ರ ಈ ಪೋಸ್ಟ್​ಗೆ 'ಲವ್​ ಯೂ ವಾರ್ನರ್​ ಫಾರ್​ ಕನ್ನಡ', 'ನಮ್ಮ RCB ತಂಡಕ್ಕೂ ಸೇರ್ಪಡೆಯಾಗಿ', 'ಕನ್ನಡಿಗ ಡೇವಿಡ್ ವಾರ್ನರ್' 'ಕನ್ನಡ ಹಾಡು ಬಳಸಿ ನಮ್ಮ ಹೃದಯ ಗೆದ್ದಿದ್ದೀರಿ' ಎಂದೆಲ್ಲಾ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಇನ್ನು ಕ್ರೀಡಾಂಗಣಕ್ಕೆ ಬಂದು ಪಂದ್ಯಾವಳಿಗಳನ್ನು ನೋಡಿ ಎಂಜಾಯ್​ ಮಾಡುವ ಅಭಿಮಾನಿಗಳು ಮತ್ತು ಕ್ರಿಕೆಟಿಗರ ಕುಟುಂಬಸ್ಥರ ಅವಕಾಶಗಳನ್ನು ಮಹಾಮಾರಿ ಕೋವಿಡ್​ ಕಸಿದುಕೊಂಡಿದೆ. ಈ ಕ್ಷಣಗಳು ಮರುಕಳಿಸಲು ಕಾದು ಕುಳಿತಿರುವ ವಾರ್ನರ್, "ನಮ್ಮ ಕುಟುಂಬಸ್ಥರು ಮತ್ತು ಅಭಿಮಾನಿಗಳ ಮುಂದೆ ಆಡುವುದನ್ನು ನಾವು ಮಿಸ್​ ಮಾಡಿಕೊಳ್ಳುತ್ತೇವೆ. ಸುರಕ್ಷಿತರಾಗಿರಿ ಹಾಗೂ ಕೋವಿಡ್​ ಲಸಿಕೆ ಪಡೆದುಕೊಳ್ಳಿ" ಎಂದು ಈ ವಿಡಿಯೋ ಜೊತೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆಲಿಯಾ ಭಟ್​ ಜೊತೆ ಹೆಜ್ಜೆ ಹಾಕಿದ್ರಾ ಡೇವಿಡ್​ ವಾರ್ನರ್​​? ಕ್ರಿಕೆಟಿಗನ ಕಿತಾಪತಿ ನೀವೇ ನೋಡಿ

ಈ ಹಿಂದೆ ವಾರ್ನರ್​ ತೆಲುಗಿನ 'ಬುಟ್ಟ ಬೊಮ್ಮಾ' ಹಾಡಿಗೆ ಹೆಂಡತಿ-ಮಕ್ಕಳೊಂದಿಗೆ ಹೆಜ್ಜೆ ಹಾಕಿ ತೆಲಂಗಾಣ-ಆಂಧ್ರ ಜನರ ಮನ ಗೆದ್ದಿದ್ದರು. 'ಸ್ಟೂಡೆಂಟ್ ಆಫ್ ದಿ ಇಯರ್ 2' ಸಿನಿಮಾದ 'ಹುಕ್ ಅಪ್' ಹಾಡಿನ ತುಣುಕನ್ನು ಬಳಸಿಕೊಂಡು ಡೇವಿಡ್ ವಾರ್ನರ್ ಫೇಸ್ ಸ್ವಾಪ್ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಇದರಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮುಖದ ಮೇಲೆ ತಮ್ಮ ಮುಖ ಬರುವಂತೆ, ತಾವೇ ನಟಿ ಆಲಿಯಾ ಭಟ್​ ಜೊತೆ ಕುಣಿದಿರುವಂತೆ ಎಡಿಟ್​ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.