ETV Bharat / sports

ತಂದೆಯಾದ ಆರ್​ಸಿಬಿ ಸ್ಟಾರ್​ ಬ್ಯಾಟ್ಸ್​ಮನ್​.. ಉಂಗುರದ ಬೆರಳು ಹಿಡಿದುಕೊಂಡಿದ್ದ ಮಗುವಿನ ಫೋಟೋ ಶೇರ್​ ಮಾಡಿದ ಮ್ಯಾಕ್ಸ್​ವೆಲ್​ - ದಂಪತಿ ತಮ್ಮ ಮಗುವಿನ ಹೆಸರನ್ನು ಸಹ ಹೇಳಿದ್ದಾರೆ

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ತಂದೆಯಾಗಿದ್ದಾರೆ. ಮ್ಯಾಕ್ಸ್ ಅವರ ಪತ್ನಿ ವಿನ್ನಿ ರಾಮನ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮ್ಯಾಕ್ಸ್‌ವೆಲ್ ಈ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡರು.

Maxwell And Wife Vini Raman Welcome First Child  Australia star batsman Glenn Maxwell  Glenn Maxwell And Wife Vini Raman First Child  Anushka Sharma And Dhanashree Verma React  ತಂದೆಯಾದ ಆರ್​ಸಿಬಿ ಸ್ಟಾರ್​ ಬ್ಯಾಟ್ಸ್​ಮನ್  ಮಗುವಿನ ಫೋಟೋ ಶೇರ್​ ಮಾಡಿದ ಮ್ಯಾಕ್ಸ್​ವೆಲ್​ ಸ್ಟಾರ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್  ಗ್ಲೆನ್ ಮ್ಯಾಕ್ಸ್‌ವೆಲ್ ತಂದೆ  ವಿನ್ನಿ ರಾಮನ್ ಅವರು ಗಂಡು ಮಗುವಿಗೆ ಜನ್ಮ  ಸಾಮಾಜಿಕ ಜಾಲತಾಣ  ಆರ್​ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್  ದಂಪತಿ ತಮ್ಮ ಮಗುವಿನ ಹೆಸರನ್ನು ಸಹ ಹೇಳಿದ್ದಾರೆ  ಲೋಗನ್ ಮೇವರಿಕ್ ಮ್ಯಾಕ್ಸ್‌ವೆಲ್
ತಂದೆಯಾದ ಆರ್​ಸಿಬಿ ಸ್ಟಾರ್​ ಬ್ಯಾಟ್ಸ್​ಮನ್
author img

By ETV Bharat Karnataka Team

Published : Sep 16, 2023, 8:29 AM IST

Updated : Sep 16, 2023, 8:58 AM IST

ಹೈದರಾಬಾದ್​: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಮನೆಯಿಂದ ಶುಭ ಸುದ್ದಿಯೊಂದು ಬಂದಿದೆ. ಮ್ಯಾಕ್ಸ್‌ವೆಲ್ ಪತ್ನಿ ವಿನಿ ರಾಮನ್ ಮಗುವಿಗೆ ಜನ್ಮ ನೀಡಿದ್ದಾರೆ. ವಿನ್ನಿ ಮತ್ತು ಮ್ಯಾಕ್ಸ್‌ವೆಲ್ ಪೋಷಕರಾಗಿದ್ದಾರೆ. ದಂಪತಿ ಮಗುವಿನ ಅರ್ಧ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದರಲ್ಲಿ ವಿನ್ನಿ ಹಾಗೂ ಮ್ಯಾಕ್ಸ್ ವೆಲ್ ಅವರ ಕೈಗಳು ಸಹ ಗೋಚರಿಸುತ್ತದೆ. ಆದರೆ ಮಗು ಮಾತ್ರ ಮ್ಯಾಕ್ಸ್​ವೆಲ್​ ಅವರ ಉಂಗುರದ ಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದು ಕಾಣಬಹುದು. ಮ್ಯಾಕ್ಸ್‌ವೆಲ್ - ವಿನ್ನಿ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ಆರ್​ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ತಂದೆಯಾಗಿದ್ದಾರೆ. ಮ್ಯಾಕ್ಸ್ ಅವರ ಪತ್ನಿ ವಿನಿ ರಾಮನ್ ಅವರು ಸೆಪ್ಟೆಂಬರ್ 11ರ ಸೋಮವಾರದಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಮ್ಯಾಕ್ಸ್ ಅವರು ಶುಕ್ರವಾರದಂದು ಇನ್​​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಅವರು ಪೋಸ್ಟ್‌ಗೆ '11.9.2023, ಲೋಗನ್ ಮೇವರಿಕ್ ಮ್ಯಾಕ್ಸ್‌ವೆಲ್' ಎಂದು ಶೀರ್ಷಿಕೆ ನೀಡಿದ್ದಾರೆ.

ಮ್ಯಾಕ್ಸ್‌ವೆಲ್ ಮತ್ತು ವಿನ್ನಿ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಫೋಟೋವನ್ನು ಶೇರ್ ಮಾಡುವುದರ ಜೊತೆಗೆ ತಾವು ಪೋಷಕರಾಗಿದ್ದೇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಈ ದಂಪತಿ ತಮ್ಮ ಮಗುವಿನ ಹೆಸರನ್ನು ಸಹ ಹೇಳಿದ್ದಾರೆ.

ಹೌದು, ವಿನ್ನಿ ಮತ್ತು ಮ್ಯಾಕ್ಸ್‌ವೆಲ್ ಕೂಡ ಮಗುವಿಗೆ ಹೆಸರಿಟ್ಟಿದ್ದಾರೆ. ಅವರು ‘ಲೋಗನ್ ಮೇವರಿಕ್ ಮ್ಯಾಕ್ಸ್‌ವೆಲ್’ ಎಂದು ತಮ್ಮ ಮಗನಿಗೆ ನಾಮಕರಣ ಮಾಡಿದ್ದಾರೆ. ಈ ಪೋಸ್ಟ್​​ಗೆ ನಿಮ್ಮಿಬ್ಬರಿಗೂ ಅಭಿನಂದನೆಗಳು ಎಂದು ಬಾಲಿವುಡ್ ನಟಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮ್ಯಾಕ್ಸ್​ವೆಲ್​ಗೆ ಅಭಿನಂದನೆ ಸಲ್ಲಿಸಿದ್ದಾರೆ. ಟೀಂ ಇಂಡಿಯಾ ಆಟಗಾರ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಕೂಡ ಮ್ಯಾಕ್ಸ್‌ವೆಲ್ ಮತ್ತು ವಿನ್ನಿ ಅವರನ್ನು ಅಭಿನಂದಿಸಿದ್ದಾರೆ. ರಿಯಾನ್ ಬರ್ಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮ್ಯಾಕ್ಸ್‌ವೆಲ್ ಮತ್ತು ಅವರ ಪತ್ನಿಯನ್ನು ಅಭಿನಂದಿಸಿದ್ದಾರೆ. ಮ್ಯಾಕ್ಸ್‌ವೆಲ್-ವಿನ್ನಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಅತಿ ಕಡಿಮೆ ಸಮಯದಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕ ಅಭಿಮಾನಿಗಳು ಕೂಡ ಕಾಮೆಂಟ್ ಮಾಡಿದ್ದಾರೆ.

ಡೇಟಿಂಗ್​ಗೆ ಮದುವೆಯ ಮುದ್ರೆ: ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತು ವಿನಿ ರಾಮನ್​ 5 ವರ್ಷಗಳ ಕಾಲ ಡೇಟಿಂಗ್​ ನಡೆಸುತ್ತಿದ್ದರು. ಬಳಿಕ ಎರಡೂ ಕುಟುಂಬದವರನ್ನು ಒಪ್ಪಿಸಿ ಫೆಬ್ರವರಿಯಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ನಂತರ ಇಬ್ಬರು ಮಾರ್ಚ್​ 18 ರಂದು ಮದುವೆಯಾದರು. ಮೊದಲು ಆಸ್ಟ್ರೇಲಿಯಾದಲ್ಲಿ ಕ್ರಿಶ್ಚಿಯನ್​ ಸಂಪ್ರದಾಯದಂತೆ ವಿವಾಹವಾಗಿ, ನಂತರ ಭಾರತದಲ್ಲಿ ತಮಿಳು ಸಂಪ್ರದಾಯದಂತೆ ಮತ್ತೊಮ್ಮೆ ಮದುವೆಯಾದರು. ಹೀಗಾಗಿ ಕೇವಲ ವೃತ್ತಿಯಲ್ಲಿ ಮಾತ್ರ ಭಾರತದೊಂದಿಗೆ ಸಂಬಂಧ ಹೊಂದಿದ್ಧ ಮ್ಯಾಕ್ಸ್​ವೆಲ್ ನಂತರ ಭಾರತೀಯ ಮೂಲದ ಯುವತಿಯನ್ನು ಕೈ ಹಿಡಿದು ವೈಯಕ್ತಿಕ ಜೀವನದಲ್ಲೂ ದೇಶದೊಂದಿಗೆ ವಿಶೇಷ ಬಾಂಧವ್ಯ ಬೆಳೆಸಿಕೊಂಡರು.

ಮ್ಯಾಕ್ಸ್​ವೆಲ್​ ಆರ್​ಸಿಬಿ ಪರ ಸಾವಿರ ರನ್​: ಗ್ಲೆನ್​ ಮ್ಯಾಕ್ಸ್‌ವೆಲ್ ಅವರನ್ನು 2021 ರಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು 14.25 ಕೋಟಿ ರೂಪಾಯಿಗೆ ಖರೀದಿಸಿತು. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 1,000 ರನ್ ಪೂರೈಸುವ ಮೂಲಕ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೃತ್ತಿ ಜೀವನಕ್ಕೆ ಮತ್ತೊಂದು ಗರಿಯನ್ನು ಸೇರಿಸಿದರು.

ಏಪ್ರಿಲ್​ 22 ರಂದು ಆರ್​ಸಿಬಿ ತವರು ಕ್ರೀಡಾಂಗಣ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್​ಆರ್​) ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಈ ಮೈಲಿಗಲ್ಲನ್ನು ತಲುಪಿದರು. ಆರ್​ಸಿಬಿ ಸೇರುವುದಕ್ಕೂ ಮುನ್ನ ಮ್ಯಾಕ್ಸ್​ವೆಲ್​ ನಟಿ ಪ್ರೀತಿ ಜಿಂಟಾ ಪಾಲುದಾರತ್ವದ ಪಂಜಾಬ್​ ಕಿಂಗ್ಸ್​ ಪರ ಆಡುತ್ತಿದ್ದರು.

ಓದಿ: 'ಬೇಬಿ ಬಾಯ್': ಮೊದಲ ಮಗುವಿನ ನಿರೀಕ್ಷೆಯಲ್ಲಿ ಕ್ರಿಕೆಟಿಗ ಮ್ಯಾಕ್ಸ್​ವೆಲ್​ ದಂಪತಿ

Last Updated : Sep 16, 2023, 8:58 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.