ಅಡಿಲೇಡ್ : ಪ್ರತಿಷ್ಠಿತ ಆ್ಯಶಸ್ ಸರಣಿಯ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸಿ ಇಂಗ್ಲೆಂಡ್ಗೆ ಗೆಲ್ಲಲು 468 ರನ್ಗಳ ಅಸಾಧ್ಯ ಗುರಿಯನ್ನು ನೀಡಿದೆ. 237 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 4ನೇ ದಿನ 9 ವಿಕೆಟ್ ಕಳೆದುಕೊಂಡು 230 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡು 468 ರನ್ಗಳ ಬೃಹತ್ ಗುರಿ ನೀಡಿತು.
ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಮಾರ್ನಸ್ ಲಾಬುಶೇನ್ 2ನೇ ಇನ್ನಿಂಗ್ಸ್ನಲ್ಲಿ 51 ರನ್ ಗಳಿಸಿದರೆ, ಮೊದಲ ಪಂದ್ಯದ ಹೀರೋ ಟ್ರಾವಿಸ್ ಹೆಡ್ ಕೂಡ 51 ರನ್ಗಳಿಸಿದರು. ಇಂಗ್ಲೆಂಡ್ ಪರ ಡೇವಿಡ್ ಮಲನ್ 33ಕ್ಕೆ2, ಜೋರೂಟ್ 27ಕ್ಕೆ 2, ರಾಬಿನ್ಸನ್ 54ಕ್ಕೆ2, ಸ್ಟುವರ್ಟ್ ಮತ್ತು ಜೇಮ್ಸ್ ಆ್ಯಂಡರ್ಸನ್ ತಲಾ ಒಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಆರಂಭಿಕ ಆಘಾತ
ಇನ್ನು 468 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿದೆ. ಹಸೀಬ್ ಹಮೀದ್ ಖಾತೆ ತೆರೆಯದೇ ಜೇ ರಿಚರ್ಡ್ಸನ್ಗೆ ವಿಕೆಟ್ ಒಪ್ಪಿಸಿದರೆ, ಡೇವಿಡ್ ಮಲನ್ 20 ರನ್ಗಳಿಸಿ ಔಟಾದರು. ಪ್ರಸ್ತುತ ರೋರಿ ಬರ್ನ್ಸ್ ಅಜೇಯ 29 ಮತ್ತು ರೂಟ್ 3 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಡೇ ಅಂಡ್ ನೈಟ್ ಟೆಸ್ಟ್ನಲ್ಲಿ ಸೋಲೇ ಕಂಡಿಲ್ಲದ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ನಲ್ಲಿ 473 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತ್ತು. ಲಾಬುಶೇನ್ 103, ಡೇವಿಡ್ ವಾರ್ನರ್ 85 ಮತ್ತು ನಾಯಕ ಸ್ಮಿತ್ 93 ರನ್ಗಳಿಸಿದ್ದರು. ಇದಕ್ಕುತ್ತರವಾಗಿ ಇಂಗ್ಲೆಂಡ್ 236ಕ್ಕೆ ಆಲೌಟ್ ಆಗಿತ್ತು.
ಇದನ್ನೂ ಓದಿ:ವಿರಾಟ್ ಕೊಹ್ಲಿ 'ವರ್ತನೆ' ಹಾಡಿ ಹೊಗಳಿ, ಅವರು ತುಂಬಾ ಜಗಳವಾಡ್ತಾರೆ ಎಂದ ಗಂಗೂಲಿ!