ETV Bharat / sports

ಸೋಲು ನಿರಾಸೆ ತಂದಿದೆ, ಆಸ್ಟ್ರೇಲಿಯಾ​ ನಮ್ಮ ಮೇಲೆ ಒತ್ತಡ ಹೇರಿತು: ಕೇನ್ ವಿಲಿಯಮ್ಸನ್

author img

By

Published : Nov 15, 2021, 9:36 AM IST

ದುರದೃಷ್ಟವಶಾತ್ ನಾವು ಅವಕಾಶಗಳನ್ನು ಸೃಷ್ಟಿಸಲು ವಿಫಲರಾಗಿದ್ದು, ನಿರಾಸೆ ಮೂಡಿಸಿದೆ. ಉತ್ತಮ ಪ್ರದರ್ಶನ ತೋರಿದ ಆಸ್ಟ್ರೇಲಿಯಾ, ಪಂದ್ಯದ ಕೊನೆಯವರೆಗೂ ಹಿಡಿತ ಸಾಧಿಸಿತು. ಅದ್ಭುತ ತಂಡವು ಟ್ರೋಫಿ(ICC T20 World Cup) ಗೆಲುವಿಗೆ ಅರ್ಹವಾಗಿದೆ ಎಂದು ವಿಲಿಯಮ್ಸನ್ ಮೆಚ್ಚುಗೆ ವ್ಯಕ್ತಪಡಿಸಿದರು.

australia-put-us-under-pressure-and-were-outstanding-in-chase-says-williamson
ಕೇನ್ ವಿಲಿಯಮ್ಸನ್

ದುಬೈ: ಟ್ವೆಂಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾವು ಕಿವೀಸ್‌ಗೆ(New Zealand) ಪುಟಿದೇಳಲು ಯಾವುದೇ ಅವಕಾಶ ನೀಡಲಿಲ್ಲ. ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದ ಆಸೀಸ್​ ಮೇಲುಗೈ ಸಾಧಿಸಿತು ಎಂದು ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅಭಿಪ್ರಾಯಪಟ್ಟಿದ್ದಾರೆ.

ಟ್ವೆಂಟಿ-20 ಫೈನಲ್​ (ICC T20 World Cup final) ಸೋಲಿನ ಬಳಿಕ ಮಾತನಾಡಿದ ಕೇನ್​, ಟೂರ್ನಿ ಉದ್ದಕ್ಕೂ ನಮ್ಮ ಬೌಲಿಂಗ್ ಭಾರಿ ಬಲಿಷ್ಠವಾಗಿತ್ತು. ಅಲ್ಲದೇ ಪ್ರತಿ ಮೈದಾನ, ಹಾಗೂ ಇತರ ತಂಡಗಳಿಗೆ ನಾವು ಹೊಂದಿಕೊಳ್ಳುವುದು ಅಗತ್ಯವಾಗಿರುತ್ತದೆ. ದೊಡ್ಡ ಪಂದ್ಯಾವಳಿಗಳಲ್ಲಿ ಇದು ಅನಿಮಾರ್ಯ ಎಂದರು.

High praise for #Australia from #NewZealand skipper Kane Williamson 👏#T20WorldCup pic.twitter.com/JcQTcWz4j8

— ICC (@ICC) November 15, 2021

ಫೈನಲ್​ನಲ್ಲಿ(World Cup final) ಗೆಲ್ಲಲು ಎಲ್ಲರೂ ಕೂಡ ಅತ್ಯುತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿರುತ್ತಾರೆ. ಆದರೆ, ಆಸ್ಟ್ರೇಲಿಯಾ(Australia) ತಂಡವು ಉತ್ಕ್ರಷ್ಟ ಆಟ ತೋರಿತು. ಅವರು ನಿಜವಾಗಿಯೂ ಬಹಳ ಉತ್ತಮವಾಗಿ ಆಡಿದರಲ್ಲದೇ, ನಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿದರು. ನಾವು ಅಗತ್ಯ ವಿಕೆಟ್​​ ಪಡೆಯಲು ಸಾಧ್ಯವಾಗದಿರುವುದು ಹಿನ್ನಡೆಗೆ ಕಾರಣವಾಯಿತು ಎಂದು ಹೇಳಿದರು.

ವಿಕೆಟ್​ ಪಡೆಯದೇ ನಾವು ಎದುರಾಳಿಗಳ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. 170 ರನ್​ ಗಳಿಕೆಯು ದೊಡ್ಡ ಮೊತ್ತವೆಂದು ಭಾವಿಸಿದ್ದೆವು. ಜಯಕ್ಕಾಗಿ ತಂಡದ ಎಲ್ಲ ಸದಸ್ಯರೂ ಶ್ರಮಪಟ್ಟೆವು. ದುರದೃಷ್ಟವಶಾತ್ ನಾವು ಅವಕಾಶಗಳನ್ನು ಸೃಷ್ಟಿಸಲು ವಿಫಲರಾಗಿದ್ದು, ನಿರಾಸೆ ಮೂಡಿಸಿದೆ. ಉತ್ತಮ ಪ್ರದರ್ಶನ ತೋರಿದ ಆಸ್ಟ್ರೇಲಿಯಾ(Australia), ಪಂದ್ಯದ ಕೊನೆಯವರೆಗೂ ಹಿಡಿತ ಸಾಧಿಸಿತು. ಅದ್ಭುತ ತಂಡವು ಟ್ರೋಫಿ ಗೆಲುವಿಗೆ ಅರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟಾಸ್​​ ಸೋತು ಬ್ಯಾಟಿಂಗ್​ ಮಾಡಿದ್ದ ನ್ಯೂಜಿಲ್ಯಾಂಡ್​​ಗೆ(New Zealand) ನಾಯಕ ವಿಲಿಯಮ್ಸನ್ 48 ಎಸೆತಗಳಲ್ಲಿ 85 ರನ್​ ಬಾರಿಸಿ ದೊಡ್ಡ ಮೊತ್ತಕ್ಕೆ ಕಾಣಿಕೆ ನೀಡಿದ್ದರು. 173 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಆಸೀಸ್​ ಎಂಟು ವಿಕೆಟ್‌ಗಳಿಂದ ಗೆದ್ದು ಚೊಚ್ಚಲ ಟ್ವೆಂಟಿ-20 ವಿಶ್ವಕಪ್‌ ಎತ್ತಿಹಿಡಿದಿದೆ.

ಇದನ್ನೂ ಓದಿ: ಎರಡು ತಿಂಗಳ ಹಿಂದೆಯೇ ವಾರ್ನರ್ ಬಗ್ಗೆ ಭವಿಷ್ಯವಾಣಿ ನುಡಿದಿದ್ದ ಫಿಂಚ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.