ಅಬುಧಾಬಿ : ಇಂದು ನಡೆದ ವಿಶ್ವ ಚುಟುಕು ಸಮರದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಬಲಾಢ್ಯ ಆಸ್ಟ್ರೇಲಿಯಾ ತಂಡ ಐದು ವಿಕೆಟ್ನಿಂದ ಗೆಲುವು ಸಾಧಿಸಿದೆ.
ತೆಂಬಾ ಬಾವುಮಾ ಬಳಗ ನೀಡಿದ 118 ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಎರಡು ಬಾಲುಗಳು ಬಾಕಿ ಇರುವಾಗಲೇ ಗೆಲುವನ್ನು ತಮ್ಮದಾಗಿಸಿಕೊಂಡಿದೆ. ಈ ಮೂಲಕ ಇಂದು ಆರಂಭವಾದ ಮೊದಲ ಪಂದ್ಯದಲ್ಲೇ ಹರಿಣಗಳ ಮೇಲೆ ಕಾಂಗರೂಗಳ ಪಡೆ ಸವಾರಿ ಮಾಡಿದೆ.
-
Australia start off their #T20WorldCup 2021 campaign in style 💥#AUSvSA | https://t.co/9nS8D6jMaw pic.twitter.com/eZWk4a2H7X
— ICC (@ICC) October 23, 2021 " class="align-text-top noRightClick twitterSection" data="
">Australia start off their #T20WorldCup 2021 campaign in style 💥#AUSvSA | https://t.co/9nS8D6jMaw pic.twitter.com/eZWk4a2H7X
— ICC (@ICC) October 23, 2021Australia start off their #T20WorldCup 2021 campaign in style 💥#AUSvSA | https://t.co/9nS8D6jMaw pic.twitter.com/eZWk4a2H7X
— ICC (@ICC) October 23, 2021
ಹರಿಣಗಳ ಭರವಸೆಯ ಆಟಗಾರ ತೆಂಬಾ ಬಾವುಮಾ (12 ರನ್) ಸಣ್ಣ ಮೊತ್ತ ಗಳಿಸಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬೌಲಿಂಗ್ ದಾಳಿಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ಅವರೊಂದಿಗೆ ಕ್ರೀಸ್ಗೆ ಇಳಿದಿದ್ದ ಕ್ವಿಂಟನ್ ಡಿ ಕಾಕ್ ಕೇವಲ 7 ರನ್ ಗಳಿಸಿ ಜೋಶ್ ಹ್ಯಾಜಲ್‌ವುಡ್ ಅವರ ಬೌಲಿಂಗ್ ದಾಳಿಗೆ ಔಟ್ ಆಗುವ ಮೂಲಕ ಪೆವಿಲಿಯನ್ಗೆ ತೆರಳಿದರು. ಬಳಿಕ ಕ್ರೀಸ್ಗೆ ಇಳಿದ ರಾಸ್ ವ್ಯಾನ್ ಡಸೆನ್ ಕೇವಲ 2 ರನ್ ಗಳಿಸಿ ಹೊರ ನಡೆದರು.
ಇನ್ನು ಏಡನ್ ಮಾರ್ಕ್ರಮ್ (40) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ತೆಂಬಾ ಬಾವುಮಾ ಬಳಗ ನೂರರ ಗಡಿ ದಾಟಿತು. ಆದರೆ, ಬಳಿಕ ಬಂದ ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಯಾವುದೇ ಆಟಗಾರರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ, 20 ಓವರ್ಗಳಲ್ಲಿ ತೆಂಬಾ ಬಳಗ 118 ರನ್ ಗಳಿಸಲು ಮಾತ್ರ ಶಕ್ತವಾಯಿತು.
ಭರ್ಜರಿ ಬ್ಯಾಟಿಂಗ್ ಮಾಡಿದ ಸ್ಟೀವನ್ ಸ್ಮಿತ್ (35) ಕಾಂಗರೂಗಳ ಇಂದಿನ ಗೆಲುವಿಗೆ ಕಾರಣರಾದರು. ಡೇವಿನ್ ವಾರ್ನರ್ 14, ಮಿಚೆಲ್ ಮಾರ್ಷ್ (11), ಗ್ಲೆನ್ ಮ್ಯಾಕ್ಸ್‌ವೆಲ್ (18), ಮಾರ್ಕಸ್ ಸ್ಟೊಯಿನಿಸ್ (24) ವಿಕೇಟ್ ಕೀಪರ್ ಮ್ಯಾಥ್ಯೂ ವೇಡ್ (15) ರನ್ಗಳ ನೆರವಿನಿಂದ ಆ್ಯರೋನ್ ಫಿಂಚ್ ಬಳಗ ಜಯದ ನಗೆ ಬೀರಿತು.
ಕಾಂಗರೂಗಳ ಪಡೆಯ ಪರ ಜೋಶ್ ಹ್ಯಾಜಲ್‌ವುಡ್ 2, ಆ್ಯಡಮ್ ಜಂಪಾ 2 ಮತ್ತು ಮಿಚೆಲ್ ಸ್ಟಾರ್ಕ್ 2 ವಿಕೆಟ್ ಪಡೆದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ 1 ವಿಕೆಟ್ ಪಡೆದರು. ಹರಿಣಗಳ ಪರ ಎನ್ರಿಕ್ ನಾರ್ಕಿಯಾ 2, ರಬಾಡ 1, ಕೇಶವ್ ಮಹಾರಾಜ್ 1, ಶಮ್ಸಿ ತಲಾ ಒಂದೊಂದು ವಿಕೆಟ್ ಪಡೆದರು.