ದುಬೈ: ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಅವರ ಅಬ್ಬರದ ಬ್ಯಾಟಿಂಗ್ ಹಾಗೂ ಡೇವಿಡ್ ವಾರ್ನರ್ ಅವರ ಜವಾಬ್ದಾರಿಯುತ ಇನ್ನಿಂಗ್ಸ್ ನೆರವಿನಿಂದ ಬಲಿಷ್ಠ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಪಾಕಿಸ್ತಾನ ನೀಡಿದ್ದ 177 ರನ್ಗಳ ಬೃಹತ್ ಗುರಿಯನ್ನ 5 ವಿಕೆಟ್ ಕಳೆದುಕೊಂಡು ಇನ್ನು ಒಂದು ಓವರ್ ಇರುವಂತೆಯೇ ತಲುಪುವ ಮೂಲಕ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿದೆ.
ಡೇವಿಡ್ ವಾರ್ನರ್ 30 ಎಸೆತಗಳಲ್ಲಿ 49, ಮಿಚೆಲ್ ಮಾರ್ಷ್ 22 ಎಸೆತಗಳಲ್ಲಿ 28, ಮಾರ್ಕಸ್ ಸ್ಟೋಯ್ನಿಸ್ 31 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ಗಳ ಸಹಿತ ಅಜೇಯ 40 ಮತ್ತು ಮ್ಯಾಥ್ಯೂ ವೇಡ್ ಕೇವಲ 17 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ ಅಜೇಯ 41 ರನ್ಗಳಿಸಿ ಗೆಲುವಿನ ರೂವಾರಿಗಳಾದರು. ಈ ಮೂವರ ಆಟ ನಾಯಕ ಆ್ಯರೋನ್ ಫಿಂಚ್(0), ಸ್ಟೀವನ್ ಸ್ಮಿತ್(5) ಮತ್ತು ಗ್ಲೇನ್ ಮ್ಯಾಕ್ಸ್ವೆಲ್(7) ವೈಫಲ್ಯವನ್ನು ಮರೆಮಾಡಿತು.
ಕೊನೆಯ 5 ಓವರ್ಗಳಲ್ಲಿ ಗೆಲ್ಲಲು 62 ರನ್!
ಕೊನೆಯ 5 ಓವರ್ಗಳಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 62 ರನ್ಗಳ ಅವಶ್ಯಕತೆಯಿತ್ತು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ವಿಕೆಟ್ ಉಳಿಸಿಕೊಳ್ಳುತ್ತಾ ಸಾಗಿದ ವೇಡ್ ಮತ್ತು ಸ್ಟೋಯ್ನಿಸ್ ಜೋಡಿ 16ನೇ ಓವರ್ನಲ್ಲಿ12, 17 ನೇ ಓವರ್ನಲ್ಲಿ 13 ಹಾಗೂ 14ನೇ ಓವರ್ನಲ್ಲಿ 15 ರನ್ ಸೂರೆ ಗೈದಿತು. ಕೊನೆಯ 2 ಓವರ್ಗಳಲ್ಲಿ ಆಸ್ಟ್ರೇಲಿಯಾಕ್ಕೆ 22 ರನ್ಗಳು ಬೇಕಾಗಿದ್ದವು. ಮೊದಲ 2 ಎಸೆತಗಳಲ್ಲಿ 2 ರನ್ ಬಂದರೆ, 3ನೇ ಎಸೆತದಲ್ಲಿ ವೇಡ್ ನೀಡಿದ ಕ್ಯಾಚ್ಅನ್ನು ಹಸನ್ ಅಲಿ ಡ್ರಾಪ್ ಮಾಡಿದರು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ವೇಡ್ ನಂತರದ 3 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಇನ್ನು 6 ಎಸೆತಗಳಿರುವಂತೆ ತಮ್ಮ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಹಸನ್ ಅಲಿ ಕ್ಯಾಚ್ ಡ್ರಾಪ್ ಮಾಡಿ ಪಾಕಿಸ್ತಾನಕ್ಕೆ ವಿಲನ್ ಆದರು.
-
Australia are through to the final of the #T20WorldCup 2021 🔥#PAKvAUS | https://t.co/W7izrV7PAI pic.twitter.com/z7ebx6BRem
— T20 World Cup (@T20WorldCup) November 11, 2021 " class="align-text-top noRightClick twitterSection" data="
">Australia are through to the final of the #T20WorldCup 2021 🔥#PAKvAUS | https://t.co/W7izrV7PAI pic.twitter.com/z7ebx6BRem
— T20 World Cup (@T20WorldCup) November 11, 2021Australia are through to the final of the #T20WorldCup 2021 🔥#PAKvAUS | https://t.co/W7izrV7PAI pic.twitter.com/z7ebx6BRem
— T20 World Cup (@T20WorldCup) November 11, 2021
ಪಾಕಿಸ್ತಾನದ ಪರ ಶದಬ್ ಖಾನ್ 4 ಓವರ್ಗಳಲ್ಲಿ 24 ರನ್ ನೀಡಿ 4 ವಿಕೆಟ್ ಪಡೆದರು. ಶಾಹೀನ್ ಅಫ್ರಿದಿ 35 ರನ್ ನೀಡಿ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 176 ರನ್ಗಳಿಸಿತು. ಈ ಮೊತ್ತ ಈ ವಿಶ್ವಕಪ್ನಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿತ್ತು.
ಆರಂಭಿಕರಾದ ಮೊಹಮ್ಮದ್ ರಿಜ್ವಾನ್ 52 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 67 ರನ್ಗಳಿಸಿದರೆ, ನಾಯಕ ಬಾಬರ್ ಅಜಮ್ 34 ಎಸೆತಗಳಲ್ಲಿ 5 ಬೌಂಡರಿ ಸಹಿತ 39 ರನ್ಗಳಿಸಿ ಮೊದಲ ವಿಕೆಟ್ಗೆ 71 ರನ್ ಸೇರಿಸಿದರು.
-
🇳🇿 New Zealand 🆚 Australia 🇦🇺
— ICC (@ICC) November 11, 2021 " class="align-text-top noRightClick twitterSection" data="
There will be 🎆 #T20WorldCup pic.twitter.com/xMAzbTudJi
">🇳🇿 New Zealand 🆚 Australia 🇦🇺
— ICC (@ICC) November 11, 2021
There will be 🎆 #T20WorldCup pic.twitter.com/xMAzbTudJi🇳🇿 New Zealand 🆚 Australia 🇦🇺
— ICC (@ICC) November 11, 2021
There will be 🎆 #T20WorldCup pic.twitter.com/xMAzbTudJi
ಬಾಬರ್ ನಿರ್ಗಮಿಸುತ್ತಿದ್ದಂತೆ ಕ್ರೀಸ್ಗೆ ಆಗಮಿಸಿದ ಫಖರ್ ಝಮಾನ್ 2ನೇ ವಿಕೆಟ್ಗೆ ರಿಜ್ವಾನ್ ಜೊತೆ ಸೇರಿ 72 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ರಿಜ್ವಾನ್(67) 18ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಆಸಿಫ್ ಅಲಿ(0) ಮತ್ತು ಶೋಯಬ್ ಮಲಿಕ್(1) ಕೂಡ ಬಂದಷ್ಟೇ ವೇಗವಾಗಿ ಹಿಂತಿರುಗಿದರು. ಅದರೆ ಫಖರ್ ಕೊನೆ 2 ಓವರ್ನಲ್ಲಿ ಅಬ್ಬರಿಸಿದರು. ಕೇವಲ 32 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ಅಜೇಯ 55 ರನ್ಗಳಿಸಿ ಬೃಹತ್ ಮೊತ್ತ ದಾಖಲಿಸಲು ನೆರವಾದರು.
ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ 4 ಓವರ್ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರೆ, ಸ್ಟಾರ್ 38 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಮ್ಯಾಕ್ಸ್ವೆಲ್ ವಿಕೆಟ್ ಪಡೆಯದಿದ್ದರೂ 3 ಓವರ್ಗಳಲ್ಲಿ ಕೇವಲ 20 ರನ್ ಮಾತ್ರ ಬಿಟ್ಟುಕೊಟ್ಟಿದ್ದರು.
ಇದನ್ನು ಓದಿ:ಯಶಸ್ಸಿನ ಶಿಖರದಲ್ಲಿ ಕಿವೀಸ್: ಸತತ 3 ಐಸಿಸಿ ಟೂರ್ನಿಗಳಲ್ಲಿ ಫೈನಲ್ ತಲುಪಿದ ವಿಲಿಯಮ್ಸನ್ ಪಡೆ