ಕೇಪ್ ಟೌನ್: ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡವು 19ರನ್ಗಳಿಂದ ಜಯ ಗಳಿಸುವ ಮೂಲಕ ವಿಶ್ವಕಪ್ನಲ್ಲಿ 6ನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಬೆಥ್ ಮೂನಿ ಅವರು 53 ಎಸೆತಗಳಲ್ಲಿ 74 ರನ್ ಗಳಿಸಿ ಆಸ್ಟ್ರೇಲಿಯಾದ ತಂಡದ ಪರ ಗರಿಷ್ಠ ಸ್ಕೋರ್ ಕಲೆ ಹಾಕಿದರು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ, ಸೋಲೊಪ್ಪಿಕೊಂಡಿತು.
157ರನ್ ಗಳ ಗುರಿ ಬೆನ್ನತ್ತಿದ್ದ ಅತಿಥೇಯ ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಆರಂಭ ದೊರೆಯಲಿಲ್ಲ ನಾಲ್ಕನೇ ಓವರ್ನಲ್ಲಿ ಆರಂಭಿಕ ಆಟಗಾರ್ತಿ ತಸ್ಮಿನ್ ಬ್ರಿಟ್ಸ್ (10) ಅವರನ್ನು ಕಳೆದುಕೊಂಡಿತು. ನಂತರ ಮರಿಸಾನೆ ಮತ್ತು ಲಾರಾ ವಿಕೆಟ್ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನಿಧಾನ ಗತಿಯಲ್ಲಿ ಆಡಿದರು. 10 ಓವರ್ ಮುಕ್ತಾಯಕ್ಕೆ ದಕ್ಷಿಣ ಆಫ್ರಿಕಾ ಮೂರು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು.
-
The ICC Women's #T20WorldCup 2023 Champions 🏆#AUSvSA #TurnItUp pic.twitter.com/VA40x0VCdl
— T20 World Cup (@T20WorldCup) February 26, 2023 " class="align-text-top noRightClick twitterSection" data="
">The ICC Women's #T20WorldCup 2023 Champions 🏆#AUSvSA #TurnItUp pic.twitter.com/VA40x0VCdl
— T20 World Cup (@T20WorldCup) February 26, 2023The ICC Women's #T20WorldCup 2023 Champions 🏆#AUSvSA #TurnItUp pic.twitter.com/VA40x0VCdl
— T20 World Cup (@T20WorldCup) February 26, 2023
ನಂತರ ಕ್ರೀಸ್ಗೆ ಬಂದ ಕ್ಲೋಯ್ ಟ್ರೇಯನ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಲಾರಾ ವೊಲ್ವಾರ್ಟ್ಗೆ ಬೆಂಬಲ ನೀಡಿದರು. ದಕ್ಷಿಣ ಆಫ್ರಿಕಾ ತಂಡವು 15ನೇ ಓವರ್ ಮುಕ್ತಾಯಕ್ಕೆ 100ರನ್ಗಳಿಸಿತು. ನೂರರ ಗಡಿ ದಾಟಿದ ಬೆನ್ನಲ್ಲೇ ಆಟದ ವೇಗವನ್ನು ಹೆಚ್ಚಿಸಲು ಹೋಗಿ ಲಾರಾ ವೋಲ್ವಾರ್ಟ್ ಅವರು 48 ಎಸತಕ್ಕೆ 61 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ಲೋಯ್ ಟ್ರೇಯಾನ್ ಕೂಡ (25) ಔಟಾಗುವ ಮೂಲಕ ದಕ್ಷಿಣ ಆಫ್ರಿಕಾದ ಸೋಲು ಖಚಿತಪಡಿಸಿತು.
ಆದೇ ಓವರ್ನಲ್ಲಿ ಅನೆಕೆ ಬಾಷ್ (1) ರನ್ ಗಳಿಸಿ ಔಟ್ ಆದರು. ಕೊನೆಯ ಓವರ್ನಲ್ಲಿ ದಕ್ಷಿಣ ಆಪ್ರಿಕಾದ ಗೆಲುವಿಗೆ 27 ರನ್ ಬೇಕಿತ್ತು. ಆದರೆ ಕೊನೆ ಓವರ್ನಲ್ಲಿ ಕೇವಲ ಎಂಟು ರನ್ ಗಳಿಸಲಷ್ಟೆ ಶಕ್ತವಾಯಿತು. ಆಸ್ಟ್ರೇಲಿಯಾ ಪರ ಮೇಗನ್ ಶಟ್, ಆಶ್ಲೇ ಗಾರ್ಡ್ನರ್, ಡಾರ್ಸಿ ಬ್ರೌನ್ ಮತ್ತು ಜೆಸ್ ಜೊನಾಸೆನ್ ತಲಾ ಒಂದು ವಿಕಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಕ್ಕೆ ಆರಂಭಿಕರಾದ ಅಲಿಸ್ಸಾ ಹೀಲಿ ಮತ್ತು ಬೆಥ್ ಮೂನಿ ಉತ್ತಮ ಆರಂಭ ನೀಡಿದರು, ಆಸಿಸ್ ಪರ ಮೂನಿ ಅವರನ್ನು ಹೊರತು ಪಡಿಸಿ ಉಳಿದೆಲ್ಲಾ ಆಟಗಾರರು 30ಕ್ಕಿಂತ ಕಡಿಮೆ ರನ್ ಗಳಿಸಿದರು. ಕೊನೆಯದಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156ರನ್ ಕಲೆ ಹಾಕಿತು.
ಇದನ್ನು ಓದಿ: ಆಸ್ಟ್ರೇಲಿಯಾಗೆ ಆರು, ದಕ್ಷಿಣ ಆಫ್ರಿಕಾಗೆ ಮೊದಲ ಪ್ರಶಸ್ತಿ ಗುರಿ: ಯಾರಾಗ್ತಾರೆ ವಿಶ್ವ ಚಾಂಪಿಯನ್?