ETV Bharat / sports

ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಬಗ್ಗೆ ಮತ್ತೆ ಸುದ್ದಿ: ಆಲಿಯಾ - ರಣಬೀರ್ ಹಾದಿಯಲ್ಲಿ ಲವ್​ ಬರ್ಡ್ಸ್​ - ಈಟಿವಿ ಭಾರತ ಕನ್ನಡ

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು, ಇದೀಗ ಶೀಘ್ರವೇ ದಾಂಪತ್ಯಕ್ಕೆ ಕಾಲಿಡಲು ಯೋಚಿಸಿದ್ದಾರೆ ಎನ್ನಲಾಗಿದೆ.

athiya-shetty-and-kl-rahul-wedding-rumours-resurface-couple-to-follow-alia-ranbir-path
ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಬಗ್ಗೆ ಮತ್ತೆ ಸುದ್ದಿ: ಆಲಿಯಾ-ರಣಬೀರ್ ಹಾದಿಯಲ್ಲಿ ಲವ್​ ಬರ್ಡ್ಸ್​
author img

By

Published : Sep 6, 2022, 9:31 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ವಿವಾಹದ ಬಗ್ಗೆ ಮತ್ತೆ ವದಂತಿಗಳು ಹಬ್ಬಿವೆ. ಸದ್ಯ ವರದಿಗಳ ಪ್ರಕಾರ ಸುನೀಲ್ ಶೆಟ್ಟಿ ಅವರ ಮುಂಬೈನ ಖಂಡಾಲಾ ಬಂಗಲೆಯಲ್ಲಿ ಅಥಿಯಾ ಮತ್ತು ರಾಹುಲ್ ಹಸೆಮಣೆ ಏರಲಿದ್ದಾರಂತೆ.

ಕಳೆದ ಕೆಲವು ದಿನಗಳಿಂದಲೂ ಮುಬಾರಕನ್ ನಟಿ ಅಥಿಯಾ ಶೆಟ್ಟಿ ತನ್ನ ಬಹುಕಾಲದ ಗೆಳೆಯರಾದ ಕ್ರಿಕೆಟಿಗ ಕೆಎಲ್ ರಾಹುಲ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಡುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಬ್ಬರ ಕಡೆಯಿಂದಲೂ ಹೊರಬಿದ್ದಿಲ್ಲ. ಇದೀಗ ಈ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮಾದರಿಯಲ್ಲಿ ಶೀಘ್ರವೇ ದಾಂಪತ್ಯಕ್ಕೆ ಕಾಲಿಡಲು ಯೋಚಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಮಹಾಕಾಳೇಶ್ವರನ ದರ್ಶನಕ್ಕೆ ಹೊರಟ ಆಲಿಯಾ ಭಟ್ ರಣಬೀರ್ ಕಪೂರ್

ಅಥಿಯಾ ಮತ್ತು ರಾಹುಲ್ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಅಥಿಯಾ ತಂದೆ ಹಿರಿಯ ನಟ ಸುನೀಲ್ ಶೆಟ್ಟಿಯವರ ಖಂಡಾಲಾ ಬಂಗಲೆಯಲ್ಲಿ ಇಬ್ಬರೂ ತಮ್ಮ ಹತ್ತಿರದ ಮತ್ತು ಆತ್ಮೀಯರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರೇಮ ಪಕ್ಷಿಗಳಾದ ರಾಹುಲ್ ಮತ್ತು ಅಥಿಯಾ ಇತ್ತೀಚೆಗೆ ಜರ್ಮನಿಯ ಮ್ಯೂನಿಚ್‌ಗೆ ಒಟ್ಟಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಥಿಯಾ 2015ರಲ್ಲಿ ಸೂರಜ್ ಪಾಂಚೋಲಿ ಜೊತೆಗಿನ ‘ಹೀರೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.

ಇದಲ್ಲದೇ 'ಮುಬಾರಕನ್' ಮತ್ತು 'ಮೋತಿಚೂರ್ ಚಕ್ನಾಚೂರ್' ಎಂಬ ಎರಡು ಚಿತ್ರಗಳಲ್ಲಿ ಅಥಿಯಾ ನಟಿಸುತ್ತಿದ್ದಾರೆ. ಮೋತಿಚೂರ್ ಚಕ್ನಾಚೂರ್ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಥಿಯಾ ಅವರ ಸಹೋದರ ಅಹಾನ್ ಶೆಟ್ಟಿ ನಟನೆಯ ಚೊಚ್ಚಲ ಸಿನಿಮಾ ತಡಪ್‌ನ ಮೊದಲ ಪ್ರದರ್ಶನವನ್ನು ರಾಹುಲ್ ವೀಕ್ಷಿಸಿದ್ದರು.

ಇದನ್ನೂ ಓದಿ: ಮಿರರ್ ಸೆಲ್ಫಿ ಹಂಚಿಕೊಂಡ ಮಲೈಕಾ ಅರೋರಾ: ಅಭಿಮಾನಿಗಳು ಫಿದಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.