ETV Bharat / sports

Asian Games Womens T20I 2023: ಫೈನಲ್​ನಲ್ಲಿ ಮಿಂಚಿದ ಭಾರತದ ವನಿತೆಯರು.. ಶ್ರೀಲಂಕಾ ಮಣಿಸಿ ಚಿನ್ನಕ್ಕೆ ಮುತ್ತಿಟ್ಟ ನಾರಿ ಪಡೆ

author img

By ETV Bharat Karnataka Team

Published : Sep 25, 2023, 2:44 PM IST

Updated : Sep 25, 2023, 3:13 PM IST

Asian Games Womens T20I 2023: ಏಷ್ಯನ್ ಗೇಮ್ಸ್‌ ಮಹಿಳಾ ಕ್ರಿಕೆಟ್‌ನ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಚಿನ್ನ ಲಭಸಿದೆ. ಶ್ರೀಲಂಕಾ ವಿರುದ್ಧ ಫೈನಲ್​ ಪಂದ್ಯ ಗೆದ್ದ ಭಾರತ ವನಿತೆಯರು ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

Etv Bharat
Etv Bharat

ಹ್ಯಾಂಗ್‌ಝೌ (ಚೀನಾ): ಇಲ್ಲಿನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಸ್ಟೇಡಿಯಂನಲ್ಲಿಂದು ಏಷ್ಯನ್ ಗೇಮ್ಸ್ 2023ರ (Asian Games Womens T20I 2023) ಮಹಿಳಾ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದೆ. 19 ರನ್​ನಿಂದ ಸೋತ ಶ್ರೀಲಂಕಾ ತಂಡ ಬೆಳ್ಳಿಗೆ ತೃಪ್ತಿಪಟ್ಟಿದೆ.

ಭಾರತ ಕೊಟ್ಟಿದ್ದ 116 ರನ್​ನ ಗುರಿಯನ್ನು ಬೆನ್ನತ್ತಿದ ಲಂಕಾ ವನಿತೆಯರ ಬಳಗ ನಿಗದಿತ ಓವರ್​ ಅಂತ್ಯಕ್ಕೆ 8 ವಿಕೆಟ್​ ನಷ್ಟಕ್ಕೆ 97 ಕಲೆ ಹಾಕುವಲ್ಲಿ ಮಾತ್ರ ಶಕ್ತವಾಯಿತು. ಸಿಂಹಳದ ವನಿತೆಯರನ್ನು 19 ರನ್​ನಿಂದ ಕಟ್ಟಿಹಾಕಿದ ಹರ್ಮನ್‌ಪ್ರೀತ್ ಕೌರ್ ಪಡೆ ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದರು.

ಭಾರತ ವನಿತೆಯರ ಇನ್ನಿಂಗ್ಸ್​: ಚಿನ್ನದ ಪದಕದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಟಾಸ್ ಗೆದ್ದು, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತ್ತು. ಬ್ಯಾಟಿಂಗ್​ ಆರಂಭಿಸಿದ ಭಾರತ ತಂಡಕ್ಕೆ ಶ್ರೀಲಂಕಾ ತಂಡ ಶಾಕ್​ ನೀಡಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 9 ರನ್​ ಗಳಿಸಿ ಪೆವಲಿಯನ್​ ಹಾದಿ ಹಿಡಿದಿದ್ದರು. ಬಳಿಕ ಬಂದ ಜೆಮಿಮಾ ರಾಡ್ರಿಗಸ್ ಸ್ಮೃತಿ ಮಂಧಾನ ಜೊತೆ ಅದ್ಭುತ ಇನ್ನಿಂಗ್ಸ್​ ಕಟ್ಟಿದರು. ಇಬ್ಬರು ಜೊತೆಗೂಡಿ 73 ರನ್​ ಕಲೆ ಹಾಕಿದರು.

ಇನ್ನು ಸ್ಮೃತಿ ಮಂಧಾನ 45 ಎಸೆತಗಳಲ್ಲಿ 46 ರನ್​ಗಳನ್ನು ಕಲೆ ಹಾಕಿದ್ರೆ, ಜೆಮಿಮಾ ರಾಡ್ರಿಗಸ್ 40 ಎಸೆತಗಳಲ್ಲಿ 42 ರನ್​ಗಳನ್ನು ಬಾರಿಸಿದರು. ಆದ್ರೆ ಇವರ ಬಳಿಕ ಬಂದ್​ ಆಟಗಾರ್ತಿಯರು ಯಾರು ಎರಡಂಕಿ ದಾಟಲೇ ಇಲ್ಲ. ಭಾರತ ಪರ ಸ್ಮೃತಿ ಮಂಧಾನ 45 ರನ್​, ಶೆಫಾಲಿ ವರ್ಮಾ 9 ರನ್​, ಜೆಮಿಮಾ ರಾಡ್ರಿಗಸ್ 42 ರನ್​, ನಾಯಕಿ ಹರ್ಮನ್‌ಪ್ರೀತ್ ಕೌರ್ 2 ರನ್​, ವಿಕೆಟ್ ಕೀಪರ್ ರಿಚಾ ಘೋಷ್ 9 ರನ್​, ದೀಪ್ತಿ ಶರ್ಮಾ 1 ರನ್​, ಪೂಜಾ ವಸ್ತ್ರಾಕರ್ 2 ರನ್​, ಅಮಂಜೋತ್ ಕೌರ್ 1 ರನ್​ ಗಳಿಸಿದ್ದರು. ಒಟ್ಟಿನಲ್ಲಿ ಭಾರತದ ವನಿತೆಯರ ತಂಡ ನಿಗದಿತ 20 ಓವರ್​ಗಳಿಗೆ 7 ವಿಕೆಟ್​ಗಳ ನಷ್ಟಕ್ಕೆ 116 ರನ್​ಗಳನ್ನು ಕಲೆ ಹಾಕಿ ಎದುರಾಳಿ ಶ್ರೀಲಂಕಾ ತಂಡಕ್ಕೆ ಸಾಧಾರಣ ಮೊತ್ತದ ಗುರಿ ನೀಡಿತು. ಇನ್ನು ಶ್ರೀಲಂಕಾ ಪರ ಪ್ರಬೋಧಿನಿ, ಸುಗಂಧಿಕಾ ಕುಮಾರಿ ಮತ್ತು ರಣವೀರಾ ತಲಾ ಎರಡೆರಡು ವಿಕೆಟ್​ಗಳನ್ನು ಪಡೆದು ಮಿಂಚಿದರು.

📸📸 We've done it! 👏 👏

Congratulations to #TeamIndia as they clinch a Gold 🥇 Medal at the Asian Games! 🙌 🙌

Well done! 🇮🇳

Scorecard ▶️ https://t.co/dY0wBiW3qA#IndiaAtAG22 | #AsianGames pic.twitter.com/Wfnonwlxgh

— BCCI Women (@BCCIWomen) September 25, 2023

ಶ್ರೀಲಂಕಾ ತಂಡದ ಇನ್ನಿಂಗ್ಸ್​: ಭಾರತ ವನಿತೆಯರು ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಶ್ರೀಲಂಕಾ ಮೂರು ಮತ್ತು ಐದನೇ ಓವರ್‌ ಎಸೆದ ವೇಗದ ಬೌಲರ್ ಟೈಟಾಸ್ ಸಾಧು ಮೊದಲ ಮೂವರು ಆರಂಭಿಕರ ವಿಕೆಟ್​ಗಳನ್ನು ಪಡೆದು ಮಿಂಚಿದರು. ಟೈಟಾಸ್​ ಸಾಧು ಬೌಲಿಂಗ್​ ದಾಳಿಗೆ ನಾಯಕಿ ಚಮರಿ ಅಟಪಟ್ಟು, ಅನುಷ್ಕಾ ಸಂಜೀವನಿ ಮತ್ತು ವಿಶ್ಮಿ ಗುಣರತ್ನೆ ಬಲಿಯಾದರು. ಬಳಿಕ ನೀಲಾಕ್ಷಿ ಡಿ ಸಿಲ್ವಾ ಜೊತೆ ಒಳ್ಳೆಯ ಇನ್ನಿಂಗ್ಸ್​ ಕಟ್ಟುತ್ತಿದ್ದ ಹಾಸಿನಿ ಪೆರೇರಾ ವಿಕೆಟ್​ ಅನ್ನು ಗಾಯಕ್ವಾಡ್​ ಪಡೆದರು.

ಶ್ರೀಲಂಕಾ ಪರ ನಾಯಕಿ ಚಮರಿ ಅಟಪಟ್ಟು 12 ರನ್​, ವಿಕೆಟ್​ ಕೀಪರ್ ಅನುಷ್ಕಾ ಸಂಜೀವಿನಿ 1 ರನ್​, ವಿಷಮಿ ಗುಣರತ್ನೆ 0 ರನ್​, ಹಾಸಿನಿ ಪೆರೇರಾ 25 ರನ್​, ನೀಲಾಕ್ಷಿ ಡಿ ಸಿಲ್ವಾ 28 ರನ್​, ಓಷದಿ ರಣಸಿಂಗ್ 19 ರನ್​, ಕವಿಶಾ ದಿಲ್ಹಾರಿ 5 ರನ್​ ಗಳಿಸಿ ಔಟಾದರು. ಕೊನೆಯಲ್ಲಿ ಓಷದಿ ರಣಸಿಂಗ್ (19) ಗೆಲುವಿಗಾಗಿ ಪ್ರಯತ್ನಿಸಿ ವಿಕೆಟ್​ ಕೊಟ್ಟರು. ಭಾರತದ ಪರಿಣಿತ ಬೌಲಿಂಗ್​ ದಾಳಿಗೆ ಕವಿಶಾ ದಿಲ್ಹಾರಿ (5), ಸುಗಂಧಿಕಾ ಕುಮಾರಿ (5) ಸಹ ಪೆವಿಲಿಯನ್​ ದಾರಿ ಹಿಡಿದರು. ಕೊನೆಯಲ್ಲಿ ಇನೋಕಾ ರಣವೀರ ಮತ್ತು ಇನೋಶಿ ಪ್ರಿಯದರ್ಶಿನಿ ಅಜೇಯರಾಗಿ ಉಳಿದರೂ ಸಹ ಪಂದ್ಯವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವಲ್ಲಿ ವಿಫಲರಾದರು.

ಭಾರತದ ಪರ ಟೈಟಾಸ್​ ಸಾಧು 3, ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್​ ಮಿಂಚಿದ್ದು, ದೀಪ್ತಿ ಶರ್ಮಾ, ದೇವಿಕಾ ವೈದ್ ಮತ್ತು ಪೂಜಾ ವಸ್ತ್ರಾಕರ್ ತಲಾ ಒಂದೊಂದು ವಿಕೆಟ್​ ಪಡೆದರು.

ಒಟ್ಟಿನಲ್ಲಿ ನಿಗದಿತ 20 ಓವರ್​ಗಳಿಗೆ ಶ್ರೀಲಂಕಾ ತಂಡ 8 ವಿಕೆಟ್​ಗಳ ನಷ್ಟಕ್ಕೆ 97 ರನ್​ ಕಲೆ ಹಾಕುವ ಮೂಲಕ ಫೈನಲ್ ಪಂದ್ಯವನ್ನು ಕೈ ಚೆಲ್ಲಿತು. ಇನ್ನು ಭಾರತ ವನಿತೆಯರ ತಂಡ ಈ ಗೆಲುವಿನ ಮೂಲಕ ಏಷ್ಯನ್​ ಗೇಮ್ಸ್​ನಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದುಕೊಂಡಿತು. ಈ ಸೋಲಿನ ಮೂಲಕ ಶ್ರೀಲಂಕಾ ತಂಡ ಬೆಳ್ಳಿಗೆ ತೃಪ್ತಿಪಟ್ಟಿತು.

ಓದಿ: ಏಷ್ಯನ್‌ ಗೇಮ್ಸ್‌, ಮಹಿಳಾ ಟಿ20 ಫೈನಲ್‌: ಶ್ರೀಲಂಕಾ ವಿರುದ್ಧ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್, ಯಾರಿಗೆ ಚಿನ್ನ?

Last Updated : Sep 25, 2023, 3:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.